Thursday, November 30, 2023

Latest Posts

ವಿಶ್ವಕಪ್ ಕ್ರಿಕೆಟ್ ನಿಂದ ಶಿಖರ್ ಧವನ್ ಹೊರಕ್ಕೆ…!

- Advertisement -

ಲಂಡನ್: ವಿಶ್ವಕಪ್ ಕ್ರಿಕೆಟ್ ಸಮಯದಲ್ಲೇ ಟೀಂ ಇಂಡಿಯಾಗೆ ದೊಡ್ಡ ಆಘಾತವಾಗಿದೆ. ವಿಶ್ವಕಪ್ ನಿಂದ ಶಿಖರ್ ಧವನ್ ಹೊರಕ್ಕೆ ಬಂದಿದ್ದಾರೆ. ಆಟವಾಡುತ್ತಿರುವಾಗ ಗಾಯಗೊಂಡಿದ್ದ ಧವನ್ ಗೆ ಇದೀಗ ವಿಶ್ರಾಂತಿಯ ಅಗತ್ಯವಿದೆ.

ಜೂ 9ರ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಸೆಣಸಾಟದಲ್ಲಿ ಶಿಖರ್ ಧವನ್ ಎಡಗೈ ಹೆಬ್ಬೆರಳಿಗೆ ತೀವ್ರ ಗಾಯವಾಗಿತ್ತು. ಇನ್ನು ಸ್ಕ್ಯಾನ್ ರಿಪೋರ್ಟ್ ನಲ್ಲಿ ಧವನ್ ಹೆಬ್ಬರಳಿನ ಮೂಳೆಗೆ ಪೆಟ್ಟಾಗಿರೋದು ಖಚಿತವಾಗಿದ್ದು 3 ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವ ಅಗತ್ಯವಿದೆ ಅಂತ ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಖರ್ ಧವನ್ 3 ವಾರಗಳ ಕಾಲ ವಿಶ್ವಕಪ್ ಕ್ರಿಕೆಟ್ ನಿಂದ ಹೊರಬಂದಿದ್ದಾರೆ.

ಇನ್ನು ಶಿಖರ್ ಧವನ್ ಬದಲಿಗೆ ಯುವ ಆಟಗಾರರಾದ ಶ್ರೇಯಸ್ ಐಯ್ಯರ್ ಅಥವಾ ರಿಷಬ್ ಪಂಥ್ ರನ್ನು ಆಯ್ಕೆ ಮಾಡಿಕೊಳ್ಳಲಾಗಲಿದೆ ಅಂತ ಮೂಲಗಳು ತಿಳಿಸಿವೆ. ಕಳೆದ ಭಾನುವಾರ 36 ರನ್ ಗಳ ಅಂತರದಿಂದ ಆಸ್ಟ್ರೇಲಿಯಾವನ್ನು ಟೀಂ ಇಂಡಿಯಾ ಮಣಿಸಿತ್ತು. ಈ ಪಂದ್ಯದಲ್ಲಿ ಶಿಖರ್ ಧವನ್ 117 ರನ್ ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿದ್ರು.

ಯುವರಾಜ್ ಸಿಂಗ್ ಈ ನಿರ್ಧಾರ ಸರಿಯಾ..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=v_VRY8nSdKc

- Advertisement -

Latest Posts

Don't Miss