ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ ೧೪ನೇ ಆವೃತ್ತಿಯ ಪಂದ್ಯಗಳು ಅಂತಿಮ ಹಂತದತ್ತ ಸಾಗಿದೆ.
ಈ ಸಂಧರ್ಭದಲ್ಲಿ ಐಪಿಎಲ್ ಆಡಳಿತ ಮಂಡಳಿ ಮಹತ್ವದ ನಿರ್ಧಾರಕ್ಕೆ ಬಂದಿದೆ. ಐಪಿಎಲ್ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಏಕಕಾಲದಲ್ಲಿ ೨ ಪಂದ್ಯಗಳನ್ನು ನೆಡೆಸುವ ತಿರ್ಮಾನಕ್ಕೆ ಬರಲಾಗಿದೆ. ಲೀಗ್ ಹಂತದ ಕೊನೆಯ ಪಂದ್ಯಗಳು ಅ.8ರಂದು ನೆಡೆಯಲಿದ್ದು ಮಧ್ಯಾಹ್ನ ಮುಂಬೈ ಮತ್ತು ಹೈದರಾಬಾದ್ ಪಂದ್ಯ ಹಾಗೆಯೇ ರಾತ್ರಿ 7.30ಕ್ಕೆ ಮುಂಬೈ ಮತ್ತು ಡೆಲ್ಲಿ ಪಂದ್ಯಗಳು ನೆಡೆಯಬೇಕಾಗಿತ್ತು. ಆದರೆ ರಾತ್ರಿ 7.30ಕ್ಕೆ 2 ಪಂದ್ಯಗಳನ್ನು ಪ್ರತ್ಯೇಕ ಮೈದಾನಗಳಲ್ಲಿ ಒಟ್ಟಿಗೆ ಆಯೋಜಿಸಲಾಗಿದೆ.
ಈ ನಿರ್ಧಾರದ ಪ್ರಮುಖ ಉದೇಶ : ಪ್ಲೇ ಆಫ್ ಆಫ್ ಪ್ರವೇಶಕ್ಕೆ ಅಂತಿಮ ಲೀಗ್ ಪಂದ್ಯಗಳು ನಿರ್ಣಾಯಕವಾಗಿದೆ. ಹೀಗಾಗಿ ಅಂದಿನ ಮುಂಬೈ ಮತ್ತು ಹೈದರಬಾದ್ ಪಂದ್ಯಗಳ ಫಲಿತಾಂಶ ಗಮನಿಸಿ ಡೆಲ್ಲಿ ಮತ್ತು ಆರ್‌ಸಿಬಿ ತಂಡಗಳು ರನ್ ರೇಟ್ ಲೆಕ್ಕಚಾರದಲ್ಲಿ ಆಡುವ ಸಾಧ್ಯತೆಗಳು ಇರೋದ್ರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮಂಜುನಾಥ್ ದೇವಾಂಗ್ ಶೆಟ್ಟಿ ನ್ಯೂಸ್ ಡೆಸ್ಕ್ ಕರ್ನಾಟಕ ಟಿ ವಿ