ಬಜ್ಜಿ ಸೇವಿಸಿ ತಾಯಿ-ಮಗ ಸಾವು…!

ಬೆಳಗಾವಿ: ಬಜ್ಜಿ ಸೇವಿಸಿ ಅಸ್ವಸ್ಥಗೊಂಡ ತಾಯಿ ಮಗ ಸಾವನ್ನಪ್ಪಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ಪಾರ್ವತಿ ಮಳಗಲಿ (53), ಸೋಮನಿಂಗಪ್ಪ ಮಳಗಲಿ(28) ಮೃತ ದುರ್ದೈವಿಗಳಾಗಿದ್ದಾರೆ. ಇನ್ನು ಹೊಲಗೆಲಸಕ್ಕೆಂದು ತೆರಳಿದ್ದ ತಾಯಿ ಮತ್ತು ಮಗ ಸಂಜೆ ಮನೆಗೆ ಬಂದ ವೇಳೆ ಬಜ್ಜಿ ಸೇವಿಸಿದ್ದರು. ಆ ಬಳಿಕ ವಾಂತಿ ಪ್ರಾರಂಭವಾಗಿದೆ. ಕೂಡಲೇ ಇವರಿಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ತಾಯಿ ಮಗ ಇಬ್ಬರೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಮೃತರಿಬ್ಬರೂ ಸೇವಿಸಿದ್ದ ಬಜ್ಜಿಯಲ್ಲಿ ವಿಷಕಾರಿ ಅಂಶ ಸೇರ್ಪಡೆಗೊಂಡಿದ್ದ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಇನ್ನು ಮರಣೋತ್ತೋರ ಪರೀಕ್ಷೆ ವರದಿಗಾಗಿ ಕಾಯುತ್ತಿರುವ ಮಾರಿಹಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈಗಾಗಲೇ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕ ಟಿವಿ, ಬೆಳಗಾವಿ


About The Author