Saturday, June 21, 2025

Latest Posts

2021 ರ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ದಾಖಲೆ ಬರೆದ ಋತುರಾಜ್ ಗಾಯಕ್ವಾಡ್

- Advertisement -

www.karnatakatv.com: 2021 ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯಗಳಲ್ಲಿ ಚೆನ್ನೈ ಕೊಲ್ಕತ್ತಾಗೆ ಚಳ್ಳೆಹಣ್ಣು ತಿನ್ನಿಸಿ ವಿಜಯಶಾಲಿಯಾಗಿದೆ. ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ವಿಶೇಷ ಸಾಧನೆಯನ್ನು ಮಾಡಿದ್ದಾರೆ , ಹೊಸ ದಾಖಲೆ ಬರೆದಿದ್ದಾರೆ .

 2021 ರ ಐಪಿಎಲ್ ನಲ್ಲಿ ಋತುರಾಜ್ ಗಾಯಕ್ವಾಡ್ ಉತ್ತಮ ರನ್ ಗಳನ್ನು ಪ್ರದರ್ಶಿಸುವ ಮೂಲಕ , ಒಳ್ಳೆಯ ಪಾರ್ಮ್ನಲ್ಲಿದ್ದರು. ಎಲ್ಲಾ ಪಂದ್ಯಗಳಲ್ಲೂ ಇವರು ತಂಡಕ್ಕೆ ಅಮೋಘವಾದಂತ ರನ್‌ಗಳನ್ನುಒಡೆಯುವುದರ ಮೂಲಕ ತಂಡವನ್ನು ಜಯಶಾಲಿಯನ್ನಾಗಿ ಮಾಡಲು ಸಹಕರಿಸುತ್ತಿದ್ದರು .

ಇದರ ಬೆನ್ನಲ್ಲೇ ಐಪಿಲ್ ಇತಿಹಾಸದಲ್ಲೇ ಆರೆಂಜ್ ಕ್ಯಾಪ್ ಧರಿಸಿದ ಅತ್ಯಂತ ಕಿರಿಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ . ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ 24 ರನ್‌ಗಳನ್ನು ಗಳಿಸಬೇಕಾಗಿತ್ತು . ಇದನ್ನು ಮೀರಿ ನಿಂತ ಗಾಯಕ್ವಾಡ್ ರನ್‌ಗಳನ್ನು ಗಳಿಸಿದರು. ದರ ವಿಷೇಶವಾಗಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ ಎಲ್ ರಾಹುಲ್ ಬಳಿ ಇದ್ದ ಆರೆಂಜ್ ಕ್ಯಾಪ್ ಅನ್ನು ಗಾಯಕ್ವಾಡ್ ತನ್ನದಾಗಿಸಿಕೊಂಡಿದ್ದಾರೆ .

 ನನ್ನೆ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಮತ್ತು ಫಾಪ್ ಡುಪ್ಲೆಸಿಸ್ ಅದ್ಭುತವಾಗಿ ಆರಂಭವನ್ನು ಪ್ರಾರಂಭಿಸಿದರು . ಈ ಜೋಡಿಯು 61 ರನ್‌ಗಳ ಕೊಡುಗೆಯನ್ನು ನೀಡಿದರು . ನಂತರ 27 ಎಸೆತಗಳಲ್ಲಿ 32 ರನ್ ಗಳಿಸಿದ ಋತುರಾಜ್ ಗಾಯಕ್ವಾಡ್ ಸುನಿಲ್ ನರೈನ್ ಗೆ ವಿಕೇಟ್ ಒಪ್ಪಿಸಿದರು .

 ಈಗೆ 2021 ರ ಐಪಿಎಲ್ ನಲ್ಲಿ ಋತುರಾಜ್ ಗಾಯಕ್ವಾಡ್ ರವರು ಭರವಸೆಯ ಆಟಗಾರರಾಗಿ ಚೆನ್ನೈ ಸೂಪರ್ ತಂಡಕ್ಕೆ ಉತ್ತಮವಾದಂತಹ ಸ್ಕೋರ್‌ಗಳನ್ನು ನೀಡುವುದರ ಮೂಲಕ ತಂಡದ ಗೆಲುವಿಗೂ ಕಾರಣರಾಗಿ , ಮತ್ತು ಈ ಬಾರಿಯ ಆರೆಂಜ್ ಕ್ಯಾಪ್ ಅನ್ನು ತನ್ನದಾಗಿಸಿಕೊಂಡಿದ್ದಾರೆ .

ಸಂಪತ್ ಶೈವ,ಸ್ಪೋಟ್ಸ್ ಡೆಸ್ಕ್ ,ಕರ್ನಾಟಕ ಟಿವಿ .

- Advertisement -

Latest Posts

Don't Miss