Friday, October 18, 2024

Latest Posts

ಸ್ಯಾಫ್ ಪ್ರಶಸ್ತಿ ಗೆದ್ದ ಭಾರತದ ಪುಟ್ಬಾಲ್ ತಂಡ

- Advertisement -

www.karnatakatv.net:ಮಾಲೆ ಭಾರತದ ಪುಟ್ಬಾಲ್ ತಂಡ 8ನೇ ಬಾರಿಗೆ ದಕ್ಷಿಣ ಏಷ್ಯಾ ಪುಟ್ಬಾಲ್ ಫೆಡರೇಷನ್ (ಸ್ಯಾಫ್) ಟ್ರೋಫಿ ಗೆದ್ದುಕೊಂಡಿದೆ. 13 ನೇ ಆವೃತ್ತಿಯ ಟೂರ್ನಿಯಲ್ಲಿ 12 ನೇ ಪೈನಲ್ ಪಂದ್ಯವಾಡಿದ ಭಾರತ ತಂಡ ದಕ್ಷಿಣ ಏಷ್ಯಾ ವಲಯದಲ್ಲಿ ತನ್ನ ಪ್ರಾಭಲ್ಯ ಮುಂದುವರಿಸಿದ್ದು . ತನ್ನ ಕೀರ್ತಿ ಪತಾಕೆಯನ್ನು ಹಾರಿಸಿದೆ .
ಈ ಮೂಲಕ ಇಗೊರ್ ಸ್ಟಿಮ್ಯಾಕ್ ಮಾರ್ಗದರ್ಶನದಲ್ಲಿ ಭಾರತ ತಂಡ ಜಯಿಸಿದ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಇದಾಗಿದೆ .
ಉಭಯ ತಂಡಗಳು ಆರಂಭಿಕ ಹಂತದಲ್ಲಿ ಸಮಬಲದ ಪ್ರದರ್ಶನವನ್ನು ಮಾಡಿದವು. ಮಳೆಯಲ್ಲಿ ಆರಂಭಗೊoಡ ಉಭಯ ತಂಡಗಳೂ ಸಹ ಸಮ ಪ್ರಯತ್ನವನ್ನು ಮಾಡಿದವು.
ಪಂದ್ಯ 21 ನೇ ನಿಮಿಷದಲ್ಲಿ ನೇಪಾಳ ತಂಡಕ್ಕೆ ಗೋಲುಗಳಿಸುವ ಅವಕಾಶ ಲಭಿಸಿದರು ಸೂಕ್ತವಾಗಿ ಬಳಸಿಕೊಳ್ಳಲು ವಿಫಲವಾಯಿತು . ಉಭಯ ತಂಡಗಳು ಮೊದಲಾರ್ಧದ ಅಂತ್ಯಕ್ಕೆ
ಗೋಲುರಹಿತ ಸಮಬಲವನ್ನು ಅದ್ಬುತವಾಗಿ ನಿರ್ವಹಿಸಿದವು . ದ್ವಿತಿಯಾರ್ಧದಲ್ಲಿ ಆರಂಭಗೊoಡ ಕೆಲ ಹೊತ್ತಿನಲ್ಲೆ ನಾಯಕ ಸುನಿಲ್ ಛೆಟ್ರಿ (48 ನಿಮಿಷ) ಅದ್ಭುತವಾದ ಪ್ರದರ್ಶನವನ್ನು ನೀಡುವ ಮೂಲಕ ತಂಡಕ್ಕೆ ಶರವೇಗದ ಗೋಲುಗಳನ್ನು ತಂದುಕೊಟ್ಟರು. ನಂತರ ಕೆಲಹೊತ್ತಿನಲ್ಲೇ ಸುರೇಶ್ (50) ಮತ್ತೊಂದು ಗೋಲು ದಾಖಲಿಸಿದರು . ಮತ್ತೆ 90ನೇ ನಿಮಿಷದಲ್ಲಿ ಸಾಹಲ್ ಗೆಲುವಿನ ಅಂತರವನ್ನು ಹಿಗ್ಗಿಸಿದರು . ಈ ಮೂಲಕ ಭಾರತವು ದಕ್ಷಿಣ ಏಷ್ಯಾ ಪುಟ್ಬಾಲ್ ಫೆಡರೇಶನ್ (ಸ್ಯಾಫ್) ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ .
ಸಂಪತ್ ಶೈವ. ಸ್ಫೋಟ್ಸ್ ಡೆಸ್ಕ್ ,ಕರ್ನಾಟಕಟಿವಿ

- Advertisement -

Latest Posts

Don't Miss