Saturday, July 12, 2025

Latest Posts

ಈರುಳ್ಳಿ ಬಗ್ಗೆ ಈ ವಿಚಾರವನ್ನ ನೀವು ತಿಳಿದುಕೊಳ್ಳಲೇಬೇಕು

- Advertisement -

ಈರುಳ್ಳಿ ಎಲ್ಲರ ಮನೆಯ ಅಚ್ಚುಮೆಚ್ಚಿನ ತರಕಾರಿ. ಈರುಳ್ಳಿ ಇಲ್ಲದೆ ಅಡುಗೆಯೇ ಇಲ್ಲ. ವಗ್ಗರಣೆ, ಸಾಂಬಾರು, ಪಲ್ಯ, ಹೀಗೆ ಎಲ್ಲಾ ಅಡುಗೆಗೂ ಈರುಳ್ಳಿ ಬೇಕೇಬೇಕು.  ಇವೆಲ್ಲಕ್ಕೂ ಈರುಳ್ಳಿ ಇಲ್ಲವೆಂದರೆ ನಡೆಯುವುದೇ ಇಲ್ಲ. ಗೃಹಿಣಿಯರು ಬೆಳಗ್ಗೆ ಎದ್ದು ಅಡುಗೆ ಮನೆಗೆ ಹೋದಾಗ ಕೈಗೆ ಈರುಳ್ಳಿ ಸಿಗದಿದ್ದದರೆ ಅಥವಾ ಈರುಳ್ಳಿ ಬುಟ್ಟಿ ಖಾಲಿಯಾಗಿದ್ದರೆ ಅಡುಗೆ ಮಾಡೋದೇ ಇಲ್ಲ.

ಆದರೆ ಈ ಈರುಳ್ಳಿಗಳ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ವಿಷಯಗಳಿವೆ.  ಅದೇನೆಂದರೆ ಈರುಳ್ಳಿಗಳಲ್ಲಿ ವಿಷಕಾರಿ ಅಂಶ ಇರುತ್ತೆ. ಅಚ್ಚರಿ ಎನಿಸಿದರೂ ಇದು ಸತ್ಯ. ಆದ್ರೆ ಈರುಳ್ಳಿಯನ್ನು ಕತ್ತರಿಸಿದ್ರೆ ಮಾತ್ರ ವಿಷಕಾರಿ ಅಂಶ ತನ್ನ ಆಟ ಶುರುಮಾಡುತ್ತೆ. ಹೀಗಾಗಿ ಈರುಳ್ಳಿಯನ್ನು ಜಾಸ್ತಿ ಹೊತ್ತು ಕತ್ತರಿಸಿಡಬಾರದು. ಒಂದು ವೇಳೆ ಕತ್ತರಿಸಿಟ್ಟರೂ ಅದನ್ನು ಬೇಗನೇ ಅಡುಗೆಗೆ ಬಳಸಿಕೊಳ್ಳಬೇಕು.

ಯಾಕಂದ್ರೆ, ಕತ್ತರಿಸಿಟ್ಟ ಈರುಳ್ಳಿ ಹಾನಿಕಾರಕ ವಿಷಯವನ್ನು ಉತ್ಪತ್ತಿ ಮಾಡಬಲ್ಲವು. ಇದರಿಂದ ಜ್ವರ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆ ಎದುರಾಗುತ್ತೆ.

ಇನ್ನು ಈ ಈರುಳ್ಳಿಯಲ್ಲಿರೋ ಗ್ರಂಥಿಗಳು ಗಾಳಿಯಲ್ಲಿರೋ ಬ್ಯಾಕ್ಟೀರಿಯಾಗಳನ್ನು ಹೀರಿಕೊಳ್ಳೋ ಶಕ್ತಿ ಹೊಂದಿರುತ್ತೆ. ಹೌದು, ಇದು 1919ರಲ್ಲಿ ಸಾಬೀತಾಗಿದೆ. ಆಗ ಜಗತ್ತಿನಾದ್ಯಂತ ಹರಡಿದ್ದ ವಿಚಿತ್ರ ಸಾಂಕ್ರಾಮಿಕ ಜ್ವರ ಕೋಟ್ಯಂತರ ಮಂದಿಯನ್ನು ಬಲಿ ತೆಗೆದುಕೊಳ್ತಿತ್ತು. ಅದರಲ್ಲೂ ಅಧಿಕ ಸಂಖ್ಯೆಯಲ್ಲಿ ರೈತರೇ ಈ ಜ್ವರಕ್ಕೆ ಬಲಿಯಾಗಿದ್ದರು. ಆಗಿನ ಕಾಲಕ್ಕೆ ವೈದ್ಯಲೋಕಕ್ಕೆ ಇದೊಂದು ದೊಡ್ಡ ಸವಾಲಾಗಿತ್ತು. ಈ ಜ್ವರಕ್ಕೆ ರೈತರು ಬಲಿಯಾಗ್ತಿರೋದಕ್ಕೆ ಕಾರಣ ಏನು ಅಂತ ವಿಜ್ಞಾನಿಗಳು, ವೈದ್ಯರು ತಲೆ ಕೆಡಿಸಿಕೊಂಡಿದ್ರು.  ಇದೇ ರೀತಿ ಪಂಜಾಬ್ ನಲ್ಲೂ ಕೂಡ ಈ ಜ್ವರ ಹಾವಳಿಯಿತ್ತು ಬಹುತೇಕ ರೈತರು ಸಾವನ್ನಪ್ಪಿದ್ರು. ಆದ್ರೆ ಈ ಗ್ರಾಮದ ಒಂದು ಮನೆಯಲ್ಲಿನ ಜನ ಮಾತ್ರ ಈ ಜ್ವರದಿಂದ ಬಚಾವ್ ಆಗಿದ್ರು. ಇದನ್ನು ಕಂಡ ತಜ್ಞರ ತಂಡ ಆ ಮನೆಗೆ ಭೇಟಿ ನೀಡಿದ್ರು. ಆಗ ಅವರಿಗೆ ಅಲ್ಲಿ ಆ ಕುಟುಂಬವನ್ನು ಕಾಪಾಡ್ತಿರೋದು ಇದೇ ಈರುಳ್ಳಿ ಅಂತ ತಿಳಿದುಬಂತು. ಹೌದು, ಈ ಮನೆಯ 4 ದಿಕ್ಕಿಗೂ ಎರಡೂ ಬದಿ ಕತ್ತರಿಸಿದ ಈರುಳ್ಳಿಯನ್ನುತಟ್ಟೆಯಲ್ಲಿಡಲಾಗಿತ್ತು. ಬಹುಶಃ ಇದೇ ಕಾರಣಕ್ಕೆ ನಮಗೆಲ್ಲಾ ಈ ಸಾಂಕ್ರಾಮಿಕ ಬಾಧಿಸಿರಲಿಲ್ಲ ಅಂತ ಹೇಳಿದ್ರು. ತಜ್ಞರು ಈ ವಿಚಾರವನ್ನು ಪರಿಶೀಲಿಸಿದಾಗ ಬಳಿಕ ಇದು ಸತ್ಯವಾಗಿತ್ತು.

ಕತ್ತರಿಸಿದ ಈರುಳ್ಳಿಗಳನ್ನು ಮಧ್ಯಾಹ್ನ ಅಥವಾ ರಾತ್ರಿ ಅಡುಗೆಗೆ ಬಳಸೋದು, ಬೆಳಗಿನ ತಿಂಡಿಗೆ ರಾತ್ರಿಯೇ ಈರುಳ್ಳಿ ಕಟ್ ಮಾಡಿ ಫ್ರಿಡ್ಜ್ ನಲ್ಲಿಡೋದು ತುಂಬಾ ಅಪಾಯಕಾರಿ.  ರಾತ್ರಿ ಕತ್ತರಿಸಿಟ್ಟ ಈರುಳ್ಳಿ ಬೆಳಗ್ಗೆ ವರೆಗೂ ಲಕ್ಷಾಂತರ ಸೂಕ್ಷ್ಮಾಣುಗಳನ್ನು ಸೃಷ್ಟಿಸುತ್ತೆ. ಇದರಿಂದ ಹೊಟ್ಟೆನೋವು, ಬೇಧಿ ವಾಂತಿ ಜ್ವರದಂತಹ ಸಮಸ್ಯೆ ಎದುರಾಗುತ್ತೆ.

ಹೀಗಾಗಿ ಯಾವುದೇ ಕಾರಣಕ್ಕೂ ಈರುಳ್ಳಿಯನ್ನು ಅಡುಗೆಗೂ ಮುಂಚಿತವಾಗಿ ಕತ್ತರಿಸಿಡಬೇಡಿ.

- Advertisement -

Latest Posts

Don't Miss