Tuesday, June 24, 2025

Latest Posts

ನವೆಂಬರ್ 26 ಕ್ಕೆ ಸಖತ್ ಸಿನಿಮಾ ರಿಲೀಸ್ ಫಿಕ್ಸ್

- Advertisement -

ಸ್ಯಾಂಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್‌ನಲ್ಲಿ ಸಖತ್ ಸಿನಿಮಾ ಇದೇ ನವೆಂಬರ್ 26 ಕ್ಕೆ ಬಿಡುಗಡೆಯಾಗಲಿದ್ದು .ಈ ಬಾರಿ ಗೋಲ್ಡನ್ ಸ್ಟಾರ್ ಗಣೇಶ್ ರ‍್ಯಾಪ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ .
ಈ ಸಿನಿಮಾದ ಟೈಟಲ್ ಟ್ರ್ಯಾಕ್ ಸಹ ಬಿಡುಗಡೆಯಾಗಿದ್ದು , ಅಭಿಮಾನಿಗಳಲ್ಲಿ ಸಂತಸವನ್ನು ಮೂಡಿಸಿದೆ . ಅದೇ ರೀತಿ ಚಿತ್ರ ರೊಮ್ಯಾಂಟಿಕ್ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿದೆ , ಈ ಚಿತ್ರವು ಇದೇ ತಿಂಗಳ 12 ರಂದು ಬಿಡುಗಡೆಯಾಗಬೇಕಿತ್ತು
ಆದರೆ ಅಪ್ಪುವಿನ ಅಗಲಿಕೆಯ ಹಿನ್ನೆಲೆಯಲ್ಲಿ ಚಿತ್ರತಂಡ ನವೆಂಬರ್ 26 ಕ್ಕೆ ರಾಜ್ಯಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಿದೆ. ಇತ್ತೀಚೆಗಷ್ಟೆ ಚಿತ್ರತಂಡ ಸಖತ್ ಸಿನಿಮಾದ ಟೀಸರ್ ಬಿಡುಗಡೆ ಮಾಡಿತ್ತು . ಮೊದಲ ಬಾರಿಗೆ ಈ ಚಿತ್ರದಲ್ಲಿ ಗಣೇಶ್ ಕಣ್ಣು ಕಾಣದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ . ಇದರಲ್ಲಿ ಸಿಕ್ಕಾಪಟ್ಟೆ ನಗು ಬರಿಸುವ ಡೈಲಾಗ್ ಗಳು , ಭರ್ಜರಿ ಕಾಮಿಡಿಯ ಸನ್ನಿವೇಶಗಳು ಟೀಸರ್ ನಲ್ಲಿತ್ತು . ಚಿತ್ರದಲ್ಲಿ ಗಣೇಶ್ ಜೊತೆ ನಿಶ್ವಿಕಾ ನಾಯ್ಡು ,ಸುರಭಿ ನಾಯಕಿಯರಾಗಿ ನಟಿಸಿದ್ದಾರೆ . ರಂಗಾಯಣ ರಘು ,ಸಾಧು ಕೋಕಿಲಾ ,ಗಿರಿ ,ಧರ್ಮಣ್ಣ ಮುಂತಾದ ಕಲಾವಿದರ ಕಾಮಿಡಿತಾರಾಬಳಗ ಚಿತ್ರಕ್ಕಿದೆ . ಈ ಚಿತ್ರವು ಕೆವಿ ಎನ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಈ ಸಿನಿಮಾ ತಯಾರಾಗಿದ್ದು , ನಿಶಾ ವೆಂಕಟ್ ಕೋನಂಕಿ ಮತ್ತು ಸುಪ್ರಿತ್ ಬಂಡವಾಳ ಹಾಕಿದ್ದಾರೆ . ಜೂಡಾ ಸ್ಯಾಂಡಿ ಸಂಗೀತ, ಶಾಂತ ಕುಮಾರ್ ಸಂಕಲನ ಮತ್ತು ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಸಖತ್” ಸಿನಿಮಾವಾಗಿದೆ.

- Advertisement -

Latest Posts

Don't Miss