ಡಿಸೆಂಬರ್ 25 ರಿಂದ ಫೆಬ್ರವರಿ 14ಕ್ಕೆ ಬಂದ ಲಾಲ್ ಸಿಂಗ್ ಚಡ್ಡಾ ಈಗ ಕೊನೆಗೆ ಏಪ್ರಿಲ್ 14ಕ್ಕೆ ಬರುತ್ತಿರುವುದಾಗಿ ಘೋಷಿಸಿದೆ. ಆದರೆ ಅದೇ ದಿನ ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್-2’ ಚಿತ್ರ ಕೂಡ ಬಿಡುಗಡೆಯಾಗುತ್ತಿದೆ. ‘ಕೆಜಿಎಫ್ 2’ ಚಿತ್ರದ ನಿರೀಕ್ಷೆ ಇಡೀ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿದೆ, ಇಂತಹ ಚಿತ್ರದ ಎದುರು ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಗುದ್ದಾಡಿ ಗೆಲ್ಲಬಹುದೇ? ಸಾಧ್ಯವೇ ಇಲ್ಲ ಅನ್ನುತ್ತಿದ್ದಾರೆ ಸಿನಿಮಾ ಪಂಡಿತರು. ಹೀಗಾಗಿ ಅಮೀರ್ ಖಾನ್ ತನ್ನ ಚಿತ್ರವನ್ನು ಮತ್ತಷ್ಟು ದಿನ ಮುಂದೂಡಬಹುದು ಅಂತ ಅವರು ವಿಶ್ಲೇಷಿಸುತ್ತಿದ್ದಾರೆ. ಒಂದು ವೇಳೆ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ಓಪನಿಂಗ್ ಮೇಲೆ ಎರಡು ಚಿತ್ರಗಳಿಗೂ ಪ್ರಭಾವ ಬೀರುತ್ತದೆ. ‘ಜೀರೋ’ ಚಿತ್ರದ ರಿಸಲ್ಟ್ ಕೂಡ ಅಮೀರ್ ಖಾನ್ ಎದುರಿನಲ್ಲಿದೆ. ಚಿತ್ರ ಗೆದ್ದರೆ ಹೀರೋ, ಸೋತರೆ ಜೀರೋ ಎಂಬ ಭಯ ಕೂಡ ಅಮೀರ್ ಖಾನ್ ಗೆ ಕಾಡುತ್ತಿದೆ. ಬಾಲಿವುಡ್ ಮಂದಿಗೆ ಇತ್ತೀಚಿನ ದಿನಗಳಲ್ಲಿ ಸೌತ್ ಸಿನಿಮಾಗಳ ದಿಗಿಲು ಸಿಕ್ಕಾಪಟ್ಟೆ ಹುಟ್ಟಿಕೊಂಡಿದೆ. ಬಾಲಿವುಡ್ ಚಿತ್ರಗಳಿಗೆ ಈಗ ಸೌತ್ ಸಿನಿಮಾಗಳ ಜನಪ್ರಿಯತೆ ಮತ್ತು ಉತ್ತರ ಭಾರತದಲ್ಲಿ ಸೌತ್ ಸಿನಿಮಾಗಳಿಗೆ ದಿನೇ, ದಿನೇ ಹೆಚ್ಚುತ್ತಿರುವ ಮಾರುಕಟ್ಟೆ ನಿಜಕ್ಕೂ ಭಯ ಹುಟ್ಟಿಸುತ್ತಿದೆ. ಬಹುತೇಕ ಬಾಲಿವುಡ್ ಮಂದಿ OTTನಲ್ಲಿ ನೇರವಾಗಿ ಚಿತ್ರ ಬಿಡುಗಡೆಗೆ ಒಲವು ತೋರುತ್ತಿದ್ದಾರೆ. ಥಿಯೇಟರ್‌ಗಳಲ್ಲಿ ಬಾಲಿವುಡ್ ಸಿನಿಮಾಗಳ ಕ್ರೇಜ್ ಸಂಪೂರ್ಣವಾಗಿ ನೆಲಕಚ್ಚಿದೆ. ಅದರಲ್ಲೂ ಬಾಲಿವುಡ್‌ನ ಪ್ರೇಮ ಕಥೆಗಳು ಈಗ ಥಿಯೇಟರ್ ಪ್ರೇಕ್ಷಕರ ಬರ ಎದುರಿಸುತ್ತಿದೆ. ಸೌತ್ ಶೈಲಿಯ ಮಸಾಲ, ಕಾಮಿಡಿ ಎಂಟರ್ ಟೈನ್ಮೆಂಟ್ ಮಾಡಿದರೆ ಮಾತ್ರ ಜನ ಒಂದಷ್ಟು ಮಂದಿ ಥಿಯೇಟರ್ ಕಡೆ ಬರಬಹುದು. ಅದಕ್ಕೆ ಸಾಕ್ಷಿ ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್ ಹಿಟ್ ಅನಿಸಿಕೊಂಡಿರುವ ‘ಸೂರ್ಯವಂಶಿ’. ಸೌತ್ ಮೇಕಿಂಗ್ ನಲ್ಲಿ ಮುಂದೆ: ಅದ್ದೂರಿ ತಾರಾಗಣದ, ಬಹು ಬಜೆಟಿನ ಚಿತ್ರಗಳ ವಿಷಯಕ್ಕೆ ಬಂದರೆ ಸೌತ್ ಸಿನಿಮಾಗಳ ಎದುರು ಹಿಂದಿ ಚಿತ್ರಗಳು ತೀರಾ ಸಪ್ಪೆ ಎನಿಸಿಕೊಳ್ಳುತ್ತಿದೆ. ಅದರಲ್ಲೂ ಅನಿಮೇಷನ್, ತ್ರೀಡಿ ಎಫೆಕ್ಟ್, ಗ್ರಾಫಿಕ್ಸ್ ವಿಷಯಕ್ಕೆ ಬಂದರೆ ಹಿಂದಿ ಚಿತ್ರರಂಗ ಸೌತ್ ಇಂದ ಸಿಕ್ಕಾಪಟ್ಟೆ ಹಿಂದೆನೇ ಉಳಿದಿದೆ. ಶಂಕರ್ ನಿರ್ದೇಶನದ ‘ಜೀನ್ಸ್’ ,’ಐ’, ರೋಬೋ ಅಂತ ಚಿತ್ರಗಳು, ರಾಜಮೌಳಿ ನಿರ್ದೇಶನದ ‘ಈಗ’ ‘ಬಾಹುಬಲಿ ಸರಣಿ’, ‘RRR’,ಇವುಗಳ ಮೇಕಿಂಗ್ ಮುಂದೆ ಬಾಲಿವುಡ್ ಮಂಡೂರಿದೆ. ಈಗಂತೂ ಬಾಲಿವುಡ್ ಮಂದಿ ಮೇಕಿಂಗ್ ವಿಷಯಕ್ಕೆ ಬಂದರೆ ದಕ್ಷಿಣ ಭಾರತೀಯ ತಂತ್ರಜ್ಞರ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.