Wednesday, October 29, 2025

Latest Posts

ನ್ಯೂಜಿಲ್ಯಾಂಡ್ ವಿರುದ್ಧ 1 ವಿಕೆಟ್ ನಿಂದ ಭಾರತಕ್ಕೆ ಕೈತಪ್ಪಿದ ವಿರೋಚಿತ ಗೆಲುವು, ಪಂದ್ಯ ಡ್ರಾ!

- Advertisement -

ಕಾನ್ಪುರಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಅಕ್ಷರ್ ಪಟೇಲ್ ಮಾರಕ ಬೌಲಿಂಗ್ ದಾಳಿಗೆ ನ್ಯೂಜಿಲ್ಯಾಂಡ್ ಬ್ಯಾಟರ್ ಗಳು ತತ್ತರಿಸಿದ್ದರು. ಆದರೆ ಒಂದು ವಿಕೆಟ್ ನಿಂದ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ.

ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 345 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಜಿಲ್ಯಾಂಡ್ 296 ರನ್ ಗಳಿಗೆ ಆಲೌಟ್ ಆಯಿತು.

46 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ 234 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದ್ದು ನ್ಯೂಜಿಲ್ಯಾಂಡ್ ಗೆ ಗೆಲ್ಲಲು 284 ರನ್ ಗಳ ಗುರಿ ನೀಡಿತು.

ಐದನೇ ದಿನವಾದ ಇಂದು ನ್ಯೂಜಿಲ್ಯಾಂಡ್ ಬ್ಯಾಟರ್ ಗಳು ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದ್ದು ಪೆವಿಲಿಯನ್ ಪರೇಡ್ ನಡೆಸಿದರು. ಇನ್ನು ದಿನದಂತ್ಯಕ್ಕೆ ನ್ಯೂಜಿಲ್ಯಾಂಡ್ 9 ವಿಕೆಟ್ ನಷ್ಟಕ್ಕೆ 165 ರನ್ ಪೇರಿಸಿದ್ದು ಭಾರತಕ್ಕೆ ಒಂದು ವಿಕೆಟ್ ನಿಂದ ವಿರೋಚಿತ ಗೆಲುವು ಕೈತಪ್ಪಿದೆ.

- Advertisement -

Latest Posts

Don't Miss