ನವದೆಹಲಿ : ಪ್ರಸ್ತುತ ವರ್ಷದಲ್ಲಿ ಸಂಭವಿಸಿದ ಮಳೆಯಿಂದಾಗಿ ಹತ್ತಿ ಹೆಚ್ಚು ಬೆಳೆ ಹಾನಿ ಕರ್ನಾಟಕದಲ್ಲಿ ಕಂಡುಬಂದಿದೆ. ಪ್ರಸ್ತುತ ವರ್ಷದಲ್ಲಿ ಪ್ರವಾಹ, ಮಳೆ, ಭೂಕುಸಿತದಿಂದ ದೇಶದಲ್ಲಿ 50 ಲಕ್ಷದ 40 ಸಾವಿರ ಹೆಕ್ಟರ್ ಬೆಳೆದ ಬೆಳೆಗಳು ಹಾನಿಗೀಡಾಗಿವೆ, ಇದರ ಅನುಗುಣವಾಗಿ ಕರ್ನಾಟಕದಲ್ಲೇ ಅತಿ ಹೆಚ್ಚು ಹಾನಿ ಸಂಭವಿಸಿದ್ದು 13 ಲಕ್ಷ 98 ಸಾವಿರ ಹೆಕ್ಟರ್ ಬೆಳೆ ಹಾನಿ ಸಂಭವಿಸಿದೆ ಎಂದು ಮಂಗಳವಾರ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ನರೇಂದ್ರ ಸಿಂಗ್ ತೋಮರ್ ಲಿಖಿತ ಮಾಹಿತಿ ನೀಡಿದ್ದು, ನಂತರದ ಸ್ಥಾನಗಳಲ್ಲಿ ಪಶ್ಚಿಮ ಬಂಗಾಳ 6.9 ಲಕ್ಷ, ರಾಜಸ್ಥಾನ 6.79 ಲಕ್ಷ, ಬಿಹಾರ 5.80 ಲಕ್ಷ , ಮಹಾರಾಷ್ಟ್ರ 4.55 ಲಕ್ಷ , ಉತ್ತರ ಪ್ರದೇಶ 3.61 ಲಕ್ಷ ಹೆಕ್ಟರ್ ನಲ್ಲಿ ಬೆಳೆದ ಬೆಳೆಗಳು ಹಾನಿಯಾಗಿವೆ ಎಂದು ಈ ನಷ್ಟ ಸಂಬಂಧ ನವಂಬರ್ 25ರವರೆಗೆ 8873 ಕೋಟಿ ರೂ ಬಿಡುಗಡೆ ಮಾಡಿದ್ದು , ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದಲೂ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದು , ಮಳೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನ ಜಿಲ್ಲೆಗಳ ರೈತರ ಸಾಲ ಮನ್ನಾ ಮಾಡುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಕೇಂದ್ರ ಕೃಷಿ ಸಚಿವರು ತಿಳಿಸಿದ್ದಾರೆ.


