Wednesday, October 15, 2025

Latest Posts

RGV ಶಿಷ್ಯನ ‘ಸ್ಟಾಕರ್’ ಸಿನಿಮಾ ರಿಲೀಸ್ ಗೆ ರೆಡಿ..!

- Advertisement -

ಸಿನಿಮಾ : ಬಣ್ಣದ‌ ಜಗತ್ತಿನಲ್ಲಿ ಕನಸುಗಳ ಹೊತ್ತು ಬರುವ ಮಂದಿಗೇನು ಕಮ್ಮಿ‌ ಇಲ್ಲ. ಪ್ರತಿಭೆ, ಅದೃಷ್ಟ ಇದ್ದವರು ಗಟ್ಟಿಯಾಗಿ ನೆಲೆಯೂರ್ತಾರೆ.  ಇಂತಹ ಪ್ರತಿಭೆಯೊಬ್ಬರು ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಗರಡಿ ಇಂದ ಪ್ರತ್ಯಕ್ಷರಾಗಿದ್ದಾರೆ. ಹಾಗಂತ ಅವ್ರು ತೆಲುಗಿನವರಲ್ಲ. ಅಪ್ಪಟ ಕನ್ನಡದವರೇ. ಅವರೇ ಕಿಶೋರ್ ಭಾರ್ಗವ್.  ಸ್ಯಾಂಡಲ್ ವುಡ್ ನ ಭರವಸೆ ನಿರ್ದೇಶಕರಾಗಿ ಕಿಶೋರ್ ರ್ಭಾರ್ಗವ್ ಗಮನ ಸೆಳೆಯುತ್ತಿದ್ದಾರೆ.

ಆರ್ ಜಿವಿ ಕ್ಯಾಂಪ್ ನಲ್ಲಿ ಐದಾರು ವರ್ಷಗಳ ಕಾಲ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಆರಂಭಿಸಿ ಸೈಕೋ ಎಂಬ ತೆಲುಗು ಸಿನಿಮಾ ಮಾಡಿದ್ದ ಕಿಶೋರ್ ಭಾರ್ಗವ್ ನಿರ್ದೇಶಿಸಿರುವ ಸ್ಟಾಕರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಸುಮನ್ ನರ್ಗಕರ್, ರಾಮ್, ಐಶ್ವರ್ಯ ನಂಬಿಯರ್, ಉದಯ್ ಆಚಾರ್, ನಮ್ರತಾ ಪಾಟೀಲ್, ಜಿತೆನ್ ಆರೋರಾ, ಭವಾನಿಶಂಕರ್ ದೇಸಾಯಿ ಮುಂತಾದವರು ಸ್ಟಾಕರ್  ಸಿನಿಮಾದಲ್ಲಿ ನಟಿಸಿದ್ದು, ಕನ್ನಡದ ಜೊತೆಗೆ ಹಿಂದಿ ಭಾಷೆಯಲ್ಲಿ ಈ ಸಿನಿಮಾ ತಯಾರಾಗಿದೆ.

ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಸ್ಟಾಕರ್ ಸಿನಿಮಾವನ್ನು, ಎಸ್ ಎಂ ಎಲ್ ಪ್ರೊಡಕ್ಷನ್ಸ್, ಸ್ಕ್ರಿಪ್ಟ್ ಟೀಸ್ ಫಿಲ್ಮ್ಸ್  ನಡಿ ಎಂ ಎನ್ ವಿ ರಮಣ,  ಸಂದೀಪ್ ಗೌಡ ಹಾಗೂ ಸ್ವಾತಿ ಗೋವಾಡ ನಿರ್ಮಾಣ ಮಾಡಿದ್ದಾರೆ.

ಸೋಮಶೇಖರ್, ಭರತ್ ಪ್ರಮೋದ್ ಹಾಗೂ ಕಿಶೋರ್ ಭಾರ್ಗವ್ ಚಿತ್ರಕಥೆ ಬರೆದಿದ್ದು, ವಿನೋದ್ ರಾಜ್ ಕ್ಯಾಮೆರಾ ಕೈ ಚಳಕ, ಸ್ಕಂದ ಕಶ್ಯಪ್ ಮ್ಯೂಸಿಕ್, ಸುಧೀರ್ ಪಿಆರ್ ಕಲಾ ನಿರ್ದೇಶನ, ವಂದನಾ ಭಂಡಾರೆ ವಸ್ತ್ರ ವಿನ್ಯಾಸ ಸಿನಿಮಾದಲ್ಲಿರಲಿದೆ. ಸದ್ಯಸ್ಟಾಕರ್ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿ ಬಿಡುಗಡೆಗೆ ಎದುರು ನೋಡುತ್ತಿದೆ.

- Advertisement -

Latest Posts

Don't Miss