ಸ್ಯಾಂಡಲ್ ವುಡ್ : ಇನ್ನೇನು ಹೊಸವರ್ಷದ ಸ್ವಾಗತಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಇದೇ ವೇಳೆ ಸ್ಯಾಂಡಲ್ವುಡ್ ನ ಅನೇಕ ಸಿನಿಮಾಗಳ ಪೋಸ್ಟರ್ ಗಳು ರಿಲೀಸ್ ಮಾಡಲಿದ್ದಾರೆ. ಇನ್ನು ಕರುನಾಡಿನ ಎಲ್ಲಾ ಅಭಿಮಾನಿಗಳಿಗೂ ಸಂತೋಷದ ಸುದ್ದಿ ಎಂದರೆ, ಅದರಲ್ಲೂ ಪುನೀತ್ ರಾಜಕುಮಾರ್(puneeth rajkumar) ಅಭಿಮಾನಿಗಳಿಗೆ ಇದು ಹಬ್ಬದ ಊಟವೇ ಎಂದು ಹೇಳಬಹುದು. ಅದು ಏನೆಂದರೆ ಪುನೀತ್ ರಾಜಕುಮಾರ್ ಅಭಿನಯಿಸಿರುವಂತಹ “ಲಕ್ಕಿ ಮ್ಯಾನ್ ” (Lucky Man) ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿರುವುದು. ಹೌದು ಈ ಸಿನಿಮಾದಲ್ಲಿ ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ (Darling Krishna)ನಾಯಕ ನಟನಾಗಿ ನಟಿಸಿರುವ ‘ಲಕ್ಕಿ ಮ್ಯಾನ್ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಬರುವ ವಿಶೇಷ ಹಾಡಿನಲ್ಲಿ ಪ್ರಭುದೇವ(Prabhu Deva) ಮತ್ತು ಪುನೀತ್ ರಾಜಕುಮಾರ್ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಇನ್ನು ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್(Post Production) ಕೆಲಸಗಳು ನಡೆಯುತ್ತಿದ್ದು, ಡಬ್ಬಿಂಗ್(Dubbing) ಮಾಡುವ ವೇಳೆ ಪುನೀತ್ ಅವರನ್ನು ಡಾರ್ಲಿಂಗ್ ಕೃಷ್ಣ ತುಂಬಾ ಮಿಸ್ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಪರ್ಸಾ ಪಿಚ್ಚರ್ ಬ್ಯಾನರ್ (Persa Pictures Banner)ಮೂಲಕ ಈ ಸಿನಿಮಾ ಮೂಡಿಬರುತ್ತಿದೆ. ಇನ್ನು ಪುನೀತ್ ರಾಜಕುಮಾರ್ ಅಭಿಮಾನಿಗಳು ಬೆಳ್ಳಿಪರದೆ ಮೇಲೆ ಅಪ್ಪುವನ್ನು ನೋಡಲು ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಸಂಗೀತ ಶೃಂಗೇರಿ, ರೋಷಿಣಿ ಪ್ರಕಾಶ್, ನಾಗಭೂಷಣ ಮುಂತಾದವರು ಅಭಿನಯಿಸಿದ್ದಾರೆ.




