ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಕೋವಿಡ್(covid) ನಿಂದ ಜನ ತತ್ತರಿಸಿದ್ದಾರೆ. ಹೀಗಿರುವಾಗ ಪಾದಯಾತ್ರೆಗೆ ಹೇಗೆ ಅನುಮತಿ ನೀಡಿದ್ದೀರಿ ಎಂದು ಸರ್ಕಾರವನ್ನು ಹೈಕೋರ್ಟ್ ವಿಭಾಗೀಯ ಪೀಠ(Divisional seat of High Court)ತರಾಟೆಗೆ ತೆಗೆದುಕೊಂಡಿದೆ. ಅನುಮತಿ ನೀಡಲಿಲ್ಲವಾದರೆ, ಏಕೆ ಕ್ರಮ ಕೈಗೊಳ್ಳಲಿಲ್ಲ?, ಸರ್ಕಾರ ಅಸಮರ್ಥವಾಗಿದೆಯೇ?, ಹೈಕೋರ್ಟ್ ಹೇಳುವವರೆಗೂ ಕ್ರಮಕೈಗೊಳ್ಳುದಿಲ್ಲವೇ?, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದ್ದರೂ ಅನುಮತಿ ಹೇಗೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಸರ್ಕಾರದ ವಿರುದ್ಧ ಚಾಟಿ ಬೀಸಿದೆ. ಇದೇ ವೇಳೆ ಕೆಪಿಸಿಸಿ(kpcc) ವಿರುದ್ಧ ಗರಂ ಆಗಿದ್ದು, ಪಾದಯಾತ್ರೆಗೆ ಅನುಮತಿ ಕೊಟ್ಟವರು ಯಾರು?, ಸರ್ಕಾರದ ಮಾರ್ಗಸೂಚಿ ಪಾಲಿಸಲು ಕೆಪಿಸಿಸಿಯ ಕ್ರಮವೇನು ಮಾಸ್ಕ್ (Mask)ಇಲ್ಲದೇ ನಾಯಕರು ಮಕ್ಕಳನ್ನು ಭೇಟಿ ಮಾಡಿದ್ದಾರೆ ಎಂದು, ಕೆಪಿಸಿಸಿ ವಿರುದ್ಧವೂ ಸಹ ಹೈಕೋರ್ಟ್ ಚಾಟಿ ಬೀಸಿದೆ. ಸರ್ಕಾರದ ಪರ ಸಹಾಯಕ ಅಡ್ವಕೇಟ್ ಜನರಲ್ (ಎಎಜಿ ) ಸುಬ್ರಹ್ಮಣ್ಯ ಈಗಾಗಲೇ ಪಾದಯಾತ್ರೆ ನಡೆಸುವವರ ಮೇಲೆ 3 FIR ದಾಖಲಿಸಿರುವುದಾಗಿ ಕೋರ್ಟ್ ಗೆ ಮಾಹಿತಿ ನೀಡಿದರು. ಎಫ್ಐಆರ್ ದಾಖಲು ಮಾಡಿ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ್ದು, ನಾಳೆಯ ಒಳಗಾಗಿ ಸರ್ಕಾರ ಹಾಗೂ ಕೆಪಿಸಿಸಿ ಮಾಹಿತಿ ನೀಡುವಂತೆ ನೋಟಿಸ್ ನೀಡಲಾಗಿದೆ. ಇದೇ ವೇಳೆ ವಿಚಾರಣೆಯನ್ನು ಜನವರಿ 14 ಕ್ಕೆ ಮುಂದೂಡಿದೆ. ನಂತರ ಎಚ್ಚೆತ್ತ ಗೃಹ ಸಚಿವ ಜ್ಞಾನೇಂದ್ರ(Home Minister Araga Jnanendra) ತುರ್ತು ಸಭೆ ಕರೆದಿದ್ದು, ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್(DG IGP Praveen Sood), ಗೃಹ ಇಲಾಖೆ ಎಸ್ಇಎಸ್, ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮುಂದಿನ ಕ್ರಮದ ಕುರಿತು ಸಮಾಲೋಚನೆ ನಡೆಸಿದ್ದಾರೆ.