Friday, June 20, 2025

Latest Posts

ಮನೆ ಕಟ್ಟುವ ಕನಸು ನನಸಾಗಲು ಈ ಪರಿಹಾರವನ್ನು ಮಾಡಿಕೊಳ್ಳಿ..!

- Advertisement -

ಮನೆ ಕಟ್ಟುವ ಕನಸು ಬಹುಕಾಲದಿಂದ ಇದ್ದರೆ ಈ ಪೂಜೆ ಮಾಡಿ. ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದು ಹೇಳುತ್ತಾರೆ ಹಿರಿಯರು. ಅಂದರೆ ಮನೆ ಕಟ್ಟುವುದು ಅಷ್ಟೊಂದು ಸುಲಭವಾದ ಕೆಲಸ ಅಲ್ಲ ಎಂದು. ಪ್ರತಿಯೊಬ್ಬರೂ ಸ್ವಂತ ಮನೆ ಇರಬೇಕು ಎಂದು ಆಸೆ ಪಡುತ್ತಾ ಇರುತ್ತಾರೆ ಸಾಲ ಇಲ್ಲದವರು ಮತ್ತು ಸ್ವಂತ ಮನೆ ಇರುವವರು ಎಷ್ಟು ಅದೃಷ್ಟವಂತರು ಎಂದು ಹೇಳಬೇಕಾಗಿ ಇಲ್ಲ. ಕೆಲವರ ಹತ್ತಿರ ಸುಮ್ಮನೆ ದುಡ್ಡು ಇರುತ್ತದೆ ಆದರೆ ಮನೆ ಮಾತ್ರ ಕಟ್ಟೋಕೆ ಆಗುತ್ತಾ ಇರುವುದಿಲ್ಲ ಇನ್ನೂ ಕೆಲವರಿಗೆ ಕೊನೆಯಲ್ಲಿ ಬಂದು ನಿಲ್ಲುತ್ತಾ ಇರುತ್ತದೆ. ಆದರೆ ಕೆಲವರಿಗೆ ಸ್ವಂತ ಮನೆಯ ಕನಸು ಮಾತ್ರ ತುಂಬಾ ಶೀಘ್ರವಾಗಿ ನೆರವೇರುತ್ತದೆ ಆದರೆ ಇನ್ನೂ ಕೆಲವರಿಗೆ ಜಾತಕದಲ್ಲಿ ಸ್ವಂತ ಮನೆ ಯೋಗ ಇದ್ದರೂ ಅವರು ಎಷ್ಟೇ ಕಷ್ಟ ಪಟ್ಟರು ಸ್ವಂತ ಮನೆ ಕನಸು ಮಾತ್ರ ಕನಸಾಗಿಯೇ ಉಳಿದು ಹೋಗುತ್ತದೆ. ಇವರು ಎಷ್ಟೇ ಪರಿಹಾರ ಮಾಡಿಯಾದರೂ ಮಾತ್ರ ನೆರವೇರುವುದಿಲ್ಲ ಇಂತವರು ನಾವು ಈಗ ಹೇಳುವ ಪರಿಹಾರವನ್ನು ಮಾಡಿದರೆ ಅತಿ ಶೀಘ್ರವಾಗಿ ನಿಮ್ಮ ಕನಸನ್ನು ನನಸಾಗಿ ಮಾಡಿ ಕೊಳ್ಳಬಹುದು . ಈಗ ನಾವು ಹೇಳುವ ಪರಿಹಾರ ಶುಕ್ಲ ಪಕ್ಷದ ಮಂಗಳವಾರ ದಿನದಿಂದ ಪ್ರಾರಂಭಿಸಬೇಕು. ಈ ಪರಿಹಾರವನ್ನು ಪ್ರತಿ ಮಂಗಳವಾರ ಕ್ರಮ ಬದ್ಧವಾಗಿ ಮಾಡಬೇಕು ಶುಕ್ಲ ಪಕ್ಷ ಎಂದರೆ ಅಮವಾಸ್ಯೆ ಆದ ನಂತರ ಬರುವ ಹದಿನೈದು ದಿನಗಳ ಶುಕ್ಲ ಪಕ್ಷ ಎಂದು ಕರೆಯುತ್ತಾರೆ. ಮಂಗಳವಾರದ ದಿನ ದೇವರು ಮನೆಯಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಯ ಫೋಟೋ ಮುಂದೆ ಎರಡು ವೀಳ್ಯದೆಲೆ ತೆಗೆದುಕೊಳ್ಳಿ ಇದರ ಮೇಲೆ ಸ್ವಲ್ಪ ಬೆಣ್ಣೆಯನ್ನು ಇಟ್ಟು, ಇದರ ಮೇಲೆ ಮಣ್ಣಿನ ದೀಪವನ್ನು ಇಟ್ಟು ದೀಪಾರಾಧನೆ ಮಾಡಿ. ಈ ದೀಪ ಉತ್ತರ ದಿಕ್ಕಿಗೆ ನೋಡುವಂತೆ ದೀಪಾರಾಧನೆ ಮಾಡಿದ ನಂತರ, ದೇವರ ಮನೆಯಲ್ಲಿ ಸ್ವಲ್ಪ ಸಮಯ ಇರಬೇಕು. ಹೇಗೆ ಬೆಣ್ಣೆ ಶೀಘ್ರವಾಗಿ ಕರಗಿ ಹೋಗುತ್ತದೆಯೋ ಹಾಗೆ ಕಷ್ಟ ಸಹ ಕರಗಿ ಹೋಗಿ ಸ್ವಂತ ಮನೆ ದಯಪಾಲಿಸು ದೇವರೇ ಎಂದು ಸಂಕಲ್ಪ ಮಾಡಿಕೊಳ್ಳಿ. ನಂತರ ಲಕ್ಷ್ಮಿ ನರಸಿಂಹ ಗೆ ಸಂಬಂಧಿಸಿದ ಯಾವುದಾದರೂ ಮಂತ್ರವನ್ನು ಪಠಣ ಮಾಡಿ ನಿಮಗೆ ಯಾವುದೇ ಮಂತ್ರ ಬರಲ್ಲ ಎಂದರೆ , ಇಲ್ಲ ಎಂದರೆ ಶ್ರೀ ಮಹಾ ಲಕ್ಷ್ಮಿ ನರಸಿಂಹ ಸ್ವಾಮಿಯೇ ನಮಃ  ಎನ್ನುವ ಮಂತ್ರವನ್ನು108 ಬಾರಿ ಪಠಿಸಿ.  ಹೀಗೆ 16 ವಾರಗಳು ಕ್ರಮ ತಪ್ಪದೆ ಮಾಡಬೇಕು ಹೀಗೆ ಮಾಡಿದರೆ ನಿಮ್ಮ ಕನಸು ನನಸು ಆಗುತ್ತದೆ. ಇನ್ನೂ ಕೆಲವರಿಗೆ ಮನೆ ಯೋಗ ಸ್ವಲ್ಪ ದೂರ ಇರಬಹುದು ಅಂತವರು ಇನ್ನೂ 16 ವಾರಗಳು ಹೀಗೆ ಮಾಡುತ್ತಾ ಬನ್ನಿ ಹೀಗೆ ಮಾಡುವುದರಿಂದ ಲಕ್ಷ್ಮಿ ನರಸಿಂಹ ಸ್ವಾಮಿ ಕೃಪೆ ನಿಮಗೆ ದೊರೆತು ಸ್ವಂತ ಮನೆ ಕನಸನ್ನು ಆಗುತ್ತದೆ.

- Advertisement -

Latest Posts

Don't Miss