ಸೇಬು ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧವರೆಗೂ ಎಲ್ಲರಿಗೂ ಸೇಬು ಹಣ್ಣು ಅಚ್ಚು ಮೆಚ್ಚು. ಬೇರೆ ಯಾವುದೇ ಹಣ್ಣು ಇಷ್ಟವಿಲ್ಲ ಅಂತಾ ಹೇಳಬಹುದು. ಆದ್ರೆ ಆ್ಯಪಲ್ ನಂಗೆ ಇಷ್ಟವಾಗಲ್ಲ ಅಂತಾ ಯಾರೂ ಹೇಳಲ್ಲ. ಆದ್ರೆ ಇತ್ತೀಚೆಗೆ ಆ್ಯಪಲ್ಗೆ ಮೇಣ ಹಚ್ಚುತ್ತಿರುವ ಕಾರಣ, ಕೆಲವರು ಅದನ್ನ ಇಷ್ಟಪಡಲ್ಲ. ಮತ್ತು ಅದು ಆರೋಗ್ಯಕ್ಕೂ ಒಳ್ಳೆಯದಲ್ಲ. ಹಾಗಾಗಿ ಬಿಸಿ ನೀರಿನಲ್ಲಿ ಅದನ್ನ ಚೆನ್ನಾಗಿ ತೊಳೆದು ತಿನ್ನಬೇಕು. ಆದ್ರೆ ಸೇಬು ಹಣ್ಣು ತಿಂದ ಬಳಿಕ ನೀವು ಕೆಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗಾದ್ರೆ, ನಾವು ನೆನಪಿಟ್ಟುಕೊಳ್ಳಬೇಕಾದ ವಿಷಯವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸೇಬು ಹಣ್ಣು ತಿಂದ ಮೇಲೆ ಮರೆತೂ ಕೂಡ ನೀರನ್ನ ಕುಡಿಯಬೇಡಿ. ನೀರನ್ನು ಕುಡಿದರೆ, ಕಫ ಕಟ್ಟುತ್ತದೆ. ಹಾಗಾಗಿ ಸೇಬು ಹಣ್ಣು ತಿಂದ ಒಂದು ಗಂಟೆ ಬಳಿಕ ನೀರು ಕುಡಿಯಿರಿ. ಸೇಬು ತಿಂದು ಮೊಸರು ತಿನ್ನುವುದರಿಂದಲೂ ಕೂಡ ಕಫ ಕಟ್ಟುತ್ತದೆ. ಅಲ್ಲದೇ ಸೇಬು ತಿಂದ ಬಳಿಕ ಹುಳಿ ವಸ್ತುವನ್ನ ತಿನ್ನಬೇಡಿ. ಹುಣಸೆ ಹಣ್ಣಿನ ಪದಾರ್ಥ, ಉಪ್ಪಿನ ಕಾಯಿ, ಹುಳಿ ಜ್ಯೂಸ್ ಎಲ್ಲ ಕುಡಿಯಬೇಡಿ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಾಗುವ ಸಾಧ್ಯತೆ ಇದೆ.
ಕೆಲವರು ಹಣ್ಣು ಮತ್ತು ತರಕಾರಿಯನ್ನ ಸೇರಿಸಿ, ಸಲಾಡ್ ಮಾಡಿ ತಿಂತಾರೆ. ಆದ್ರೆ ಸೇಬು ಹಣ್ಣಿನ ಜೊತೆ ಯಾವುದೇ ಕಾರಣಕ್ಕೂ ಮೂಲಂಗಿಯನ್ನ ಮಾತ್ರ ಸೇರಿಸಿ ತಿನ್ನಬೇಡಿ. ಅಥವಾ ಸೇಬು ತಿಂದ ಬಳಿಕ ಮೂಲಂಗಿ ಪದಾರ್ಥ ತಿನ್ನಬೇಡಿ. ಯಾಕಂದ್ರೆ ಹೀಗೆ ಮಾಡುವುದರಿಂದ ದೇಹದ ಮೇಲೆ ಬಿಳಿ ಕಲೆಯಾಗುವ ಸಾಧ್ಯತೆ ಇರುತ್ತದೆ.