ಮದುವೆ ಅಂದ್ರೆ ಓರ್ವ ಮನುಷ್ಯನ ಜೀವನವನ್ನ ಬದಲಾಯಿಸುವ ಸಮಯ. ಅದು ಒಳ್ಳೆ ರೀತಿಯಿಂದಲೂ ಆಗಿರಬಹುದು. ಕೆಟ್ಟ ರೀತಿಯಿಂದಲೂ ಆಗಿರಬಹುದು. ಒಳ್ಳೆಯ ಜೀವನ ಸಂಗಾತಿ ಸಿಕ್ಕರೆ, ಜೀವನ ಅತ್ಯುತ್ತಮವಾಗಿರುತ್ತದೆ. ಅದೇ ಉತ್ತಮವಲ್ಲದ ಜೀವನ ಸಂಗಾತಿ ಸಿಕ್ಕಾಗ, ಯಾಕಾದ್ರೂ ಮದುವೆಯಾದ್ನೋ ಅನ್ನೋ ಪರಿಸ್ಥಿತಿಗೆ ಬಂದುಬೀಡ್ತೀವಿ. ಆದ್ರೆ ಪ್ರಪಂಚದಲ್ಲಿ 5 ಜನ ಹೇಗೆ ವಿಚಿತ್ರವಾಗಿ ಮದುವೆಯಾಗಿದ್ದಾರೆಂದರೆ, ಅವರಿಗೆ ವೈವಾಹಿಕ ಜೀವನದ ಬಗ್ಗೆ ಚಿಂತೆಯೇ ಇಲ್ಲ. ಹಾಗಾದ್ರೆ ಪ್ರಪಂಚದಲ್ಲಿ ನಡೆದ 5 ವಿಚಿತ್ರ ವಿವಾಹದ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ರಷ್ಯಾದ ಓರ್ವ ವ್ಯಕ್ತಿ 2018ರಲ್ಲಿ ಪಿಜ್ಜಾದೊಂದಿಗೆ ವಿವಾಹವಾಗಿದ್ದಾನೆ. ನನಗೆ ಪಿಜ್ಜಾ ಅಂದ್ರೆ ತುಂಬಾ ಇಷ್ಟ. ಅದನ್ನು ಬಿಟ್ಟಿರಲು ನನ್ನಿಂದ ಸಾಧ್ಯವಿಲ್ಲ. ಹಾಗಾಗಿ ನಾನು ಪಿಜ್ಜಾವನ್ನೇ ವಿವಾಹವಾಗುತ್ತೇನೆ. ಆಗ ನನಗೆ ಮತ್ತೆ ಯಾವ ಹುಡುಗಿಯೊಂದಿಗೂ ಮದುವೆಯಾಗುವ ಅವಶ್ಯಕತೆ ಇರುವುದಿಲ್ಲ. ನಾನು ವಿವಾಹಿತರನ್ನು ನೋಡಿದ್ದೇವೆ. ಅವರು ಯಾವಾಗಲೂ ತಮ್ಮ ಜೀವನ ಸಂಗಾತಿಯ ಬಗ್ಗೆ ದೂರು ಹೇಳುತ್ತಲೇ ಇರುತ್ತಾರೆ. ಹಾಗಾಗಿ ನಾನು ಪಿಜ್ಜಾವನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ. ಅಲಲ್ಲದೇ ಮದುವೆ ಸಮಯದಲ್ಲಿ ಪಿಜ್ಜಾಗೂ ವಧುವಿನಂತೆ ಶೃಂಗಾರ ಮಾಡಿದ್ದು, ಈ ಫೋಟೋ ಎಲ್ಲೆಡೆ ಸಖತ್ ವೈರಲ್ ಆಗಿತ್ತು.
ಕೆಲಿಫೋರ್ನಿಯಾದಲ್ಲಿ ವಾಸವಿರುವ 34 ವರ್ಷದ ವ್ಯಕ್ತಿ ತನ್ನ ಸ್ಮಾರ್ಟ್ ಫೋನ್ ಒಟ್ಟಿಗೆ ಮದುವೆಯಾಗಿದ್ದಾನೆ. ಸಾಮಾನ್ಯವಾಗಿ ಹೆಂಡತಿಯಾದವಳು, ಗಂಡನಿಗೆ ಬೈಯ್ಯುವಾಗಾ ಮೊಬೈಲನ್ನ ತನ್ನ ಸವತಿ ಅನ್ನೋ ರೀತಿ ಬೈತಾಳೆ. ಆದ್ರೆ ಈ ವ್ಯಕ್ತಿ ಸೌತಿ ಕಾಟಾನೇ ಬೇಡಾ ಅಂತಾ ಮೊಬೈಲನ್ನೇ ತನ್ನ ಅರ್ಧಾಂಗಿಯನ್ನಾಗಿ ಮಾಡಿಕೊಂಡಿದ್ದಾನೆ.
2010ರಲ್ಲಿ ಕೋರಿಯಾದ ಯುವಕನೋರ್ವ ತಾನು ಬಳಸುವ ತಲೆ ದಿಂಬನ್ನೇ ತನ್ನ ಪತ್ನಿಯನ್ನಾಗಿ ಮಾಡಿಕೊಂಡಿದ್ದ. ಆ ದಿಂಬಿಗೆ ಹೆಣ್ಣಿನ ಚಿತ್ರವಿರುವ ಕವರ್ ಕೂಡಾ ಹಾಕಿದ್ದ. ಅಷ್ಟೇ ಅಲ್ಲ, ಚರ್ಚನಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಕಾರ ಮದುವೆಯಾದ ಈತ, ಆ ದಿಂಬಿಗೆ ಗೌನ್ ಕೂಡ ಹಾಕಿದ್ದ.
ಇವಿಷ್ಟು ಮದುವೆಗಳು ವಿಚಿತ್ರವಾಗಿದೆ. ಆದ್ರೆ ಈಗ ಹೇಳಲಿರುವ ಎರಡು ಮದುವೆ ಬಗ್ಗೆ ಕೇಳಿದ್ರೆ ನಿಮಗೆ ಶಾಕ್ ಆಗತ್ತೆ. ಮೊದಲನೇಯದ್ದು ವಿದೇಶಿ ಮಹಿಳೆ ತನ್ನ ಸಾಕು ನಾಯಿಯೊಂದಿಗೆನೇ ವಿವಾಹವಾಗಿದ್ದಾಳೆ. ಮತ್ತು ಎರಡನೇಯದ್ದು ಭಾರತದ ಹಳ್ಳಿಯೊಂದರಲ್ಲಿ ವಾಸವಿರುವ ಯುವತಿ ಸರ್ಪವನ್ನ ವಿವಾಹವಾಗಿದ್ದಾಳೆ.