Tuesday, October 22, 2024

Latest Posts

ಕ್ರಿಸ್ಪಿ ಗೋಬಿ ಪಕೋಡಾ ರೆಸಿಪಿ..

- Advertisement -

ಗೋಬಿ ಮಂಚೂರಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲಾ ಹೇಳಿ..? ಎಲ್ಲರೂ ಇಷ್ಟಪಟ್ಟು ತಿನ್ನುವ ತಿಂಡಿ ಅಂದ್ರೆ ಗೋಬಿ.. ಆದ್ರೂ ಕೆಲವರಿಗೆ ಗೋಬಿಯೊಟ್ಟಿಗೆ ಬರುವ ಗ್ರೇವಿ ಅಂದ್ರೆ ಇಷ್ಟವಾಗುವುದಿಲ್ಲ. ಅಂಥವರಿಗಾಗಿ ನಾವಿವತ್ತು ಕ್ರಿಸ್ಪಿ ಗೋಬಿ ಪಕೋಡಾ ರೆಸಿಪಿ ತಂದಿದ್ದೇವೆ. ಈ ಟೇಸ್ಟಿ ಪಕೋಡಾ ರೆಸಿಪಿ ಮಾಡೋಕ್ಕೆ ಏನೇನ್ ಸಾಮಗ್ರಿ ಬೇಕು..? ಅದನ್ನ ಹೇಗೆ ತಯಾರಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಒಂದು ಬೌಲ್ ಕ್ವಾಲಿ ಫ್ಲವರ್, ನಾಲ್ಕು ಸ್ಪೂನ್ ಕಾರ್ನ್ ಫ್ಲೋರ್, ಎರಡು ಸ್ಪೂನ್ ಅಕ್ಕಿ ಹಿಟ್ಟು, ಒಂದು ಸ್ಪೂನ್ ಮೈದಾ ಹಿಟ್ಟು, ಮೂರು ಸ್ಪೂನ್ ಟೋಮೆಟೋ ಸಾಸ್, ಎರಡು ಸ್ಪೂನ್ ಸೋಯಾ ಮತ್ತು ಚಿಲ್ಲಿ ಸಾಸ್, ಎರಡು ಸ್ಪೂನ್ ಜಿಂಜರ್, ಚಿಲ್ಲಿ, ಗಾರ್ಲಿಕ್ ಪೇಸ್ಟ್, ಎರಡು ಸ್ಪೂನ್ ಖಾರದ ಪುಡಿ, ಒಂದು ಸ್ಪೂನ್ ಗರಂ ಮಸಾಲೆ, ಅರ್ಧ ಸ್ಪೂನ್ ಚಾಟ್ ಮಸಾಲೆ, ಒಂದು ಸ್ಪೂನ್ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು. ಕರಿಯಲು ಎಣ್ಣೆ.

ಒಂದು ಬೌಲ್‌ನಲ್ಲಿ ಪಕೋಡಾ ಬ್ಯಾಟರ್‌ ತಯಾರು ಮಾಡಬೇಕು. ಕಾರ್ನ್ ಫ್ಲೋರ್, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಉಪ್ಪು, ಖಾರದ ಪುಡಿ, ಗರಂ ಮಸಾಲೆ, ಚಾಟ್, ಮಸಾಲೆ, ಟೊಮೆಟೋ ಸಾಸ್, ಚಿಲ್ಲಿ- ಸೋಯಾ ಸಾಸ್, ಜಿಂಜರ್, ಚಿಲ್ಲಿ,ಗಾರ್ಲಿಕ್ ಪೇಸ್ಟ್, ಕೊಂಚ ನೀರು ಇವಿಷ್ಟನ್ನು ಹಾಕಿ,  ಚೆನ್ನಾಗಿ ಮಿಕ್ಸ್ ಮಾಡಿ, ಬದಿಗಿರಿಸಿ.

ಈಗ ಒಂದು ಪಾತ್ರೆಯಲ್ಲಿ ನೀರು, ಉಪ್ಪು ಮತ್ತು ಅರಿಶಿನ ಹಾಕಿ ಚೆನ್ನಾಗಿ ಕುದಿಸಿ. ನೀರು ಕುದಿ ಬಂದ ಮೇಲೆ ಗ್ಯಾಸ್ ಆಫ್ ಮಾಡಿ, ಅದಕ್ಕೆ ಕ್ವಾಲಿ ಫ್ಲವರ್ ಸೇರಿಸಿ, 15 ನಿಮಿಷ ಹಾಗೆ ಇರಿಸಿ.  ನಂತರ ನೀರನ್ನು ಬಸಿದು, ಕ್ವಾಲಿ ಫ್ಲವರನ್ನ ಬಜ್ಜಿ ಬ್ಯಾಟರ್‌ಗೆ ಸೇರಿಸಿ. 10 ನಿಮಿಷ ಇರಿಸಿ. ನಂತರ ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಬಜ್ಜಿಯನ್ನು ಕರೆಯಿರಿ. ಈಗ ಕ್ರಿಸ್ಪಿ ಗೋಬಿ ಪಕೋಡಾ ರೆಡಿ. ಇದನ್ನ ಸಾಸ್ ಜೊತೆ ಸರ್ವ್ ಮಾಡಿ.

- Advertisement -

Latest Posts

Don't Miss