Friday, December 5, 2025

Latest Posts

ಗರುಡ ಪುರಾಣವನ್ನು ಓದಬಾರದೇ..? ಓದಿದರೆ ಏನಾಗುತ್ತದೆ..?

- Advertisement -

ಹಿಂದೂ ಧರ್ಮದಲ್ಲಿ ಶಾಸ್ತ್ರ, ಪೂಜೆ, ಜೀವನಕ್ಕೆ ಸಂಬಂಧಿಸಿದಂತೆ ಹಲವು ಧರ್ಮಗ್ರಂಥಗಳಿದೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ದೇವಿ ಭಾಗವತ, ಶಿವ ಪುರಾಣ ಇತ್ಯಾದಿ ಪುಸ್ತಕಗಳಿದೆ. ಅವುಗಳಲ್ಲಿ ಗರುಡ ಪುರಾಣ ಕೂಡ ಒಂದು. ಆದ್ರೆ ಎಲ್ಲ ಗ್ರಂಥಗಳನ್ನು ಓದುವಂತೆ, ಗರುಡ ಪುರಾಣವನ್ನು ಎಲ್ಲರೂ ಓದುವುದಿಲ್ಲ. ಹಾಗಾದ್ರೆ ಗರುಡ ಪುರಾಣವನ್ನು ಓದಬಾರದೇ..? ಓದಿದರೆ ಏನಾಗುತ್ತದೆ..? ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..

ಕೆಲವರ ಪ್ರಕಾರ ಗರುಡ ಪುರಾಣವನ್ನು ಓದಿದರೆ, ಅಥವಾ ಇಟ್ಟುಕೊಂಡರೆ, ಅವರಿಗೆ ನೆಮ್ಮದಿ ಇರುವುದಿಲ್ಲ, ಅವರ ಜೀವನದಿಂದ ಖುಷಿ ಅನ್ನೋದೇ ಹೊರಟು ಹೋಗುತ್ತದೆ ಎಂದು ಹೇಳಲಾಗಿದೆ. ಆದ್ರೆ ಇನ್ನು ಕೆಲವರ ಪ್ರಕಾರ, ಇದು ಭ್ರಮೆ. ಹಲವರು ಗರುಡ ಪುರಾಣವನ್ನು ಓದಿದ್ದಾರೆ. ಅದನ್ನು ಇ್ಟಟುಕೊಂಡಿದ್ದಾರೆ. ಆದರೆ, ಅವರೆಲ್ಲ ಖುಷಿಯಾಗಿ, ನೆಮ್ಮದಿಯಾಗಿದ್ದಾರೆ.

ಕೆಲವರ ಮನೆಯಲ್ಲಿ ಯಾರಾದರೂ ತೀರಿ ಹೋದರೆ, ಗರುಡ ಪುರಾಣ ಓದುವ ಜನರನ್ನ ಕರೆಸಿ, ಗರುಡ ಪುರಾಣವನ್ನ ಓದಿಸಲಾಗುತ್ತದೆ. ಹಾಗಾಗಿ ಜನ, ಗರುಡ ಪುರಾಣವನ್ನ ಓದಲು ಹೆದರುತ್ತಾರೆ. ಅದರಲ್ಲಿ ವಿವರಿಸಲಾಗಿರುವ ಶಿಕ್ಷೆಗಳ ಬಗ್ಗೆ ಕೇಳಿದರೇನೇ, ಹಲವರು ಹೆದರುತ್ತಾರೆ. ಆದ್ರೆ ಕೆಲವರ ಪ್ರಕಾರ ಗರುಡ ಪುರಾಣ ಓದುವುದರಿಂದ, ವಿಜಯ, ಯಶಸ್ಸು, ಸೌಂದರ್ಯ, ಹಣ ಅಲ್ಲದೇ, ನೀವು ನಿರೀಕ್ಷಿಸಿದ ಎಲ್ಲವೂ ನಿಮಗೆ ಸಿಗುತ್ತದೆ ಎಂಬುದು ಹಲವರ ನಂಬಿಕೆ.

ಅಲ್ಲದೇ, ಯಾರು ಏಕಾಗೃಚಿತ್ತದಿಂದ ಈ ಪುಸ್ತವನ್ನು ಪಠಣ ಮಾಡುತ್ತಾನೋ, ಅವನಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆಯೂ ಇದೆ. ಆದ್ರೆ ಇದನ್ನ ಓದುವವರು, ಅಥವಾ ಇದನ್ನು ಕೇಳಲು ಇಚ್ಛಿಸುವವರು ಧರ್ಮಾರ್ಥಿಯಾಗಿರಬೇಕು. ಧರ್ಮ ಪಾಲನೆ ಮಾಡಬೇಕು. ಆಗ ಮಾತ್ರ ನಿಮ್ಮ ಮನೋಕಾಮನೆಗಳು ಪೂರ್ತಿಯಾಗುತ್ತದೆ. ಇದನ್ನ ಓದಿಯೂ, ನೀವು ಅಧರ್ಮದ ಹಾದಿಯಲ್ಲಿ ನಡೆದರೆ, ಇದರಿಂದೇನೂ ಪ್ರಯೋಜನವಿಲ್ಲ.

- Advertisement -

Latest Posts

Don't Miss