Tuesday, October 22, 2024

Latest Posts

ಈ 8 ಲಕ್ಷಣಗಳು ನಿಮ್ಮಲ್ಲಿದ್ರೆ ನೀವು ಆರೋಗ್ಯವಂತರು ಎಂದರ್ಥ..- ಭಾಗ 1

- Advertisement -

ನಿಮ್ಮ ಬಳಿ ಹಣವಿದ್ದು, ಪ್ರೀತಿಸುವ ಜನರಿದ್ದು, ಸಕಲ ವ್ಯವಸ್ಥೆಗಳಿದ್ದು, ನಿಮ್ಮ ಆರೋಗ್ಯವೇ ಸರಿ ಇಲ್ಲದಿದ್ದರೆ ಹೇಗಿರತ್ತೆ ಹೇಳಿ..? ಅಕ್ಷರಶಃ ನರಕದ ಹಾಗಿರತ್ತೆ. ಹಾಗಾಗಿಯೇ ಹಿರಿಯರು ಆರೋಗ್ಯವೇ ಭಾಗ್ಯ ಅಂತಾ ಹೇಳಿರೋದು. ಆರೋಗ್ಯ ಉತ್ತಮವಾಗಿದ್ರೆ, ನೀವಂದುಕೊಂಡಿದ್ದನ್ನ ಸಾಧಿಸಬಹುದು. ಇಂದು ನಾವು ಯಾವ 8 ಲಕ್ಷಣಗಳು ಮನುಷ್ಯನಲ್ಲಿದ್ದರೆ, ಮನುಷ್ಯ ಆರೋಗ್ಯವಂತನಾಗಿರುತ್ತಾನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯದಾಗಿ ಪ್ರತಿದಿನ ಬೆಳಿಗ್ಗೆ ಏನೂ ತಿನ್ನದೇ, ಏನೂ ಕುಡಿಯದೇ ಮಲವಿಸರ್ಜನೆಯಾಗುವುದು. ನಮ್ಮಲ್ಲಿ ಹಲವರು ಬೆಳಿಗ್ಗೆ ಎದ್ದ ತಕ್ಷಣ, ಬಿಸಿ ನೀರು ಕುಡಿದು, ಮಲ ವಿಸರ್ಜನೆ ಮಾಡುತ್ತಾರೆ. ಅಥವಾ ಬೇರೆ ಬೇರೆ ವಿಧಗಳಿಂದ ಹೊಟ್ಟೆಯಲ್ಲಿರುವ ಕಸವನ್ನ ಹೊರಗೆ ಹಾಕುತ್ತಾರೆ. ಆದ್ರೆ ಯಾರಿಗೆ ಏನನ್ನೂ ತಿನ್ನದೇ, ಕುಡಿಯದೇ, ಆರಾಮವಾಗಿ ಹೊಟ್ಟೆ ಕ್ಲೀನ್ ಆಗುತ್ತದೆಯೋ, ಅವನು ಆರೋಗ್ಯವಂತ ವ್ಯಕ್ತಿ ಅಂತ ಅರ್ಥ.

ಎರಡನೇಯದಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇಲ್ಲದಿರುವುದು. ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದೆಯೋ ಇಲ್ಲವೋ ಅನ್ನೋದನ್ನ ನಾವು ನಮ್ಮ ದೇಹದ ತೂಕದ ಮೇಲೆಯೇ ಕಂಡು ಹಿಡಿಯಬಹುದು. ಹೊಟ್ಟೆಯ ಭಾಗದಲ್ಲಿ, ಅಥವಾ ಹೊಟ್ಟೆಯ ಆಸುಪಾಸಿನಲ್ಲಿ ಬೊಜ್ಜು ಬೆಳೆದಿದ್ದರೆ, ಖಂಡಿತ ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದೆ ಎಂದರ್ಥ.

ಮೂರನೇಯದಾಗಿ ಮಾನಸಿಕ ನೆಮ್ಮದಿ ಇರುವುದು. ನೀವು ಯಾವ ವಿಷಯದ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳದೇ, ಹೆಚ್ಚು ಟೆನ್ಶನ್ ತೆಗೆದುಕೊಳ್ಳದೇ, ಆರಾಮವಾಗಿ, ಖುಷಿ ಖುಷಿಯಾಗಿ ಇರುವ ವ್ಯಕ್ತಿಯಾಗಿದ್ದರೆ, ನೀವು ಅತ್ಯಂತ ಆರೋಗ್ಯವಂತ ವ್ಯಕ್ತಿ ಎಂದರ್ಥ. ಬೇಕಾದ್ರೆ ನೀವು ಕೆಲವರನ್ನ ನೋಡಿ. ಅವರು ಸಣ್ಣ ಸಣ್ಣ ಮಾತಿಗೂ ಟೆನ್ಶನ್ ತೆಗೆದುಕೊಳ್ತಾರೆ. ಹಾಗಾಗಿ ಅವರಿಗೆ ಬಿಪಿ, ಶುಗರ್ ಸೇರಿ ಯಾವುದಾದರೂ ಒಂದು ರೋಗ ಇದ್ದೇ ಇರುತ್ತದೆ.

ನಾಲ್ಕನೇಯದಾಗಿ ನಿಮಗೆ ಯಾವಾಗಲೂ ನಿಜವಾದ ಹಸಿವಾಗುವುದು. ಹಸಿವಲ್ಲೂ ನಿಜವಾದ ಹಸಿವು ಸುಳ್ಳು ಹಸಿವು ಎಂದು ಇರುತ್ತದೆ. ಸುಳ್ಳು ಹಸಿವು ಅಂದ್ರೆ, ನಿಮಗೆ ಪಿಜ್ಜಾ, ಬರ್ಗರ್, ಪಾನೀಪುರಿ, ಮಸಾಲೆ ಪುರಿನೇ ತಿನ್ಬೇಕು ಅನ್ಸೋದು. ನಿಜವಾದ ಹಸಿವು ಅಂದ್ರೆ ನಿಮ್ಮ ಎದುರು ಹೆಲ್ದಿ ತಿಂಡಿ ಇಟ್ರೂ, ನಿಮಗೆ ತಿನ್ನಬೇಕು ಅನ್ಸೋದು. ಹಾಗಾಗಿ ನಿಮಗೆ ಯಾವಾಗಲೂ ನಿಜವಾದ ಹಸಿವೇ ಆದ್ರೆ, ನೀವು ಆರೋಗ್ಯವಂತರು ಎಂದರ್ಥ.

ಇನ್ನುಳಿದ ಲಕ್ಷಣಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

 

- Advertisement -

Latest Posts

Don't Miss