Tuesday, October 22, 2024

Latest Posts

ಈ 8 ಲಕ್ಷಣಗಳು ನಿಮ್ಮಲ್ಲಿದ್ರೆ ನೀವು ಆರೋಗ್ಯವಂತರು ಎಂದರ್ಥ.. ಭಾಗ 2

- Advertisement -

ಮೊದಲ ಭಾಗದಲ್ಲಿ ನಾವು ಆರೋಗ್ಯವಂತರಾಗಿರಲು ಮನುಷ್ಯ ಯಾವ ಲಕ್ಷಣಗಳನ್ನು ಹೊಂದಿರಬೇಕು ಅನ್ನೋದ್ರಲ್ಲಿ 4 ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ನಾವು ಉಳಿದ 4 ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ..

ಐದನೇಯದಾಗಿ ನಿಮಗೆ ಆಲಸ್ಯ ಇಲ್ಲದೇ ಇರುವುದು. ನೀವು ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಬೇಗ ಎಳುವವರಾಗಿದ್ದು, ನಿಮಗೆ ಆಲಸ್ಯವೇ ಆಗುವುದಿಲ್ಲ. ನೀವು ಯಾವಾಗಲು ಜೋಶನಲ್ಲೇ ಕೆಲಸ ಮಾಡುವವರಾಗಿದ್ದರೆ, ನೀವು ಆರೋಗ್ಯವಂತರು ಎಂದರ್ಥ. ನಿಮಗೆ ಬೆಳಿಗ್ಗೆ ಏಳಲು ಮನಸ್ಸಾಗದೇ ಇದ್ದು, ನೀವು ಕೇಲಸ ಮಾಡುವಾಗ ನಿಮಗೆ ಪದೇ ಪದೇ ಬೋರ್ ಬಂದರೆ, ನೀವು ಅನಾರೋಗ್ಯವಂತರು ಎಂದರ್ಥ. ಯಾಕಂದ್ರೆ ಆಲಸ್ಯವೂ ಒಂದು ರೋಗವಿದ್ದಂತೆ.

ಆರನೇಯದಾಗಿ ಯಾವುದೇ ತೊಂದರೆ ಇಲ್ಲದೇ, ಕುಳಿತುಕೊಳ್ಳುವುದು ಮತ್ತು ಏಳುವುದು. ನೀವು ಏಳುವಾಗ ಕುಳಿತುಕೊಳ್ಳುವಾಗ ನಿಮಗೆ ಯಾವುದೇ ತೊಂದರೆಯಾಗದೇ, ಪಟ್ ಅಂತಾ ಎದ್ದು ನಿಲ್ಲಬಹುದಾದಲ್ಲಿ ನೀವು ಆರೋಗ್ಯವಂತರೆಂದರ್ಥ. ನೀವೇನಾದ್ರೂ ಏಳುವಾಗ, ಕುಳಿತುಕೊಳ್ಳುವಾಗ, ಕಾಲು ನೋವಿನಿಂದ ಬಳಲುತ್ತಿದ್ದಲ್ಲಿ, ಸಂಪೂರ್ಣ ಆರೋಗ್ಯವಂತರಲ್ಲ ಎಂದರ್ಥ.

ಏಳನೇಯದಾಗಿ ಸ್ವಚ್ಛ ತ್ವಚೆ. ನೀವು ಆರೋಗ್ಯಕರವಾಗಿದ್ದೀರಿ ಅಂತಾ ತಿಳಿದುಕೊಳ್ಳೋಕ್ಕೆ ನಿಮ್ಮ ಮುಖ ನೋಡಿದ್ರೆ ಸಾಕು ಗೊತ್ತಾಗಿ ಬಿಡತ್ತೆ. ಯಾಕಂದ್ರೆ ನಿಮ್ಮ ಮುಖದಲ್ಲಿ ಯಾವುದೇ ಮೊಡವೆ, ಗುಳ್ಳೆಗಳಿಲ್ಲದೇ, ನೀವು ಸ್ವಚ್ಛ ತ್ವಚೆಯವರಾಗಿದ್ರೆ, ನೀವು ಆರೋಗ್ಯವಂತರೆಂದರ್ಥ. ಯಾಕಂದ್ರೆ ನಿಮ್ಮ ದೇಹದಲ್ಲಿರುವ ಕೆಸರು ಪ್ರತಿದಿನ ಸ್ವಚ್ಛಗೊಂಡರೆ, ನಿಮಗೆ ಮಾನಸಿಕ ನೆಮ್ಮದಿ ಇದ್ರೆ, ನಿಮಗೆ ಆಲಸ್ಯ ಇಲ್ಲದಿದ್ದರೆ, ನೀವು ಬೆಳ್ಳಗೇ ಇರಿ ಅಥವಾ ಕಪ್ಪಗೇ ಇರಿ, ನಿಮ್ಮ ತ್ವಚೆ ಸದಾ ಶುದ್ಧವಾಗಿರುತ್ತದೆ.

ಎಂಟನೇಯದಾಗಿ ಉತ್ತಮ ನಿದ್ದೆ. ಮನುಷ್ಯ 8 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡಿದ್ರೆ, ಅವನು ಆರೋಗ್ಯವಂತನಾಗಿರ್ತಾರೆ ಅಂತಾ ಹೇಳಲಾಗಿದೆ. ಆದ್ರೆ ಆ 8 ಗಂಟೆಗಳಲ್ಲಿ ಅವನು ಪದೇ ಪದೇ ಎಚ್ಚರಗೊಂಡರೆ, ಸರಿಯಾಗಿ ನಿದ್ರಿಸದಿದ್ದರೆ, ಅದು ಆರೋಗ್ಯಕರ ನಿದ್ರೆಯಲ್ಲ. ಬದಲಾಗಿ ನೀವು ರಾತ್ರಿ ನಿದ್ರಿಸಿದರೆ, ಮರುದಿನ ಬೆಳಿಗ್ಗೆಯೇ ನಿಮಗೆ ಎಚ್ಚರಾಗಬೇಕು. ಅಷ್ಟು ಗಾಢ ನಿದ್ರೆ ಮಾಡಿದರೆ ಮಾತ್ರ, ಅದು ಉತ್ತಮ ನಿದ್ದೆಯಾಗುತ್ತದೆ.

- Advertisement -

Latest Posts

Don't Miss