ನಾವಿಂದು ಮನೆಯಲ್ಲೇ ಸಿಗುವ ಕೆಲ ವಸ್ತುಗಳನ್ನು ಬಳಸಿ, ದಿ ಬೆಸ್ಟ್ ಸ್ಕ್ರಬರ್ ತಯಾರಿಸೋದು ಹೇಗೆ ಅಂತಾ ಹೇಳ್ತೀವಿ. ಇದನ್ನ ನೀವು ಮನೆಯಲ್ಲಿ ತಯಾರಿಸಿ, ಅಪ್ಲೈ ಮಾಡಿ, ರಿಸಲ್ಟ್ ಕಂಡ ಬಳಿಕ, ಮಾರುಕಟ್ಟೆಯಲ್ಲಿ ಸಿಗುವ ಸ್ಕ್ರಬರ್‌ಗಳನ್ನ ಮರೆತೇ ಬಿಡ್ತೀರಾ.. ಅಷ್ಟು ಬೆಸ್ಟ್ ಈ ಹೋಮ್ ಮೇಡ್ ಸ್ಕ್ರಬರ್. ಹಾಗಾದ್ರೆ ಇದಕ್ಕೆ ಬೇಕಾಗಿರೋ ಮಸಾಮಗ್ರಿಗಳೇನು..? ಇದನ್ನ ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ.
ಎರಡು ಟೇಬಲ್ ಸ್ಪೂನ್ ಕಡಲೆ ಬೇಳೆ, ಎರಡು ಟೇಬಲ್ ಸ್ಪೂನ್ ಮಸೂರಿ ಬೇಳೆ, ರೋಸ್ ಪುಡಿ, ಶ್ರೀಗಂಧದ ಪುಡಿ, ಹಳದಿ ಪುಡಿ, ತರಿ ತರಿಯಾದ ಸಕ್ಕರೆ ಪುಡಿ, ನಿಂಬೆ ಹಣ್ಣಿನ ರಸ, ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ, ಮೊಸರು
ಮೊದಲಿಗೆ ಮಸೂರ ಬೇಳೆ, ಮತ್ತು ಕಡಲೆ ಬೇಳೆಯನ್ನು ಬಾಣಲೆಗೆ ಹಾಕಿ ಹುರಿದುಕೊಳ್ಳಿ. ಈ ಹುರಿದ ಬೇಳೆಗಳಿಂದ ಪೌಡರ್ ತಯಾರಿಸಿ. ಇದನ್ನ ಗಾಳಿಸಿ, ಕಸ ತೆಗೆದು, ಸ್ಮೂತ್ ಪೌಡರ್ ರೆಡಿ ಮಾಡಿಕೊಳ್ಳಿ. ಈ ಪೌಡರ್‌ಗೆ ಒಂದು ಸ್ಪೂನ್ ಹಳದಿ ಪುಡಿ, ಶ್ರೀಗಂಧದ ಪುಡಿ, ತರಿ ತರಿಯಾದ ಸಕ್ಕರೆ ಪುಡಿ ಸೇರಿಸಿ. ಈಗ ಇದಕ್ಕೆ ರೋಸ್ ಪೌಡರ್ ಸೇರಿಸಿ, ನಿಮ್ಮ ಬಳಿ ರೋಸ್ ಪೌಡರ್ ಇಲ್ಲದಿದ್ದಲ್ಲಿ, ಗುಲಾಬಿ ಹೂವನ್ನ ಒಣಗಿಸಿ, ಪುಡಿ ಮಾಡಿ ಸೇರಿಸಿ.
ಈಗ ಈ ಎಲ್ಲ ಪುಡಿಯನ್ನು ಮಿಕ್ಸಿ ಜಾರ್‌ಗೆ ಹಾಕಿ, ಒಮ್ಮೆ ಪುಡಿ ಮಾಡಿ ಒಂದು ಬೌಲ್‌ಗೆ ಹಾಕಿ. ಇದರಲ್ಲಿ ನಿಮಗೆ ಬೇಕಾದಷ್ಟು ಪುಡಿ ತೆಗೆದುಕೊಂಡು, ಅದಕ್ಕೆ ಕೊಂಚ ತೆಂಗಿನ ಎಣ್ಣೆ, ಕೊಂಚ ಬಾದಾಮಿ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ. ನಿಮಗೆ ಬೇಕಾದಲ್ಲಿ ನೀವು ನಿಂಬೆ ಹಣ್ಣಿನ ರಸ ಸೇರಿಸಿಕೊಳ್ಳಿ. ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಸ್ಕ್ರಬರ್ ರೆಡಿ. ನೀವು ಫೇಸ್‌ಪ್ಯಾಕ್ ಹಾಕೋಕ್ಕೂ ಮುಂಚೆ ಈ ಸ್ಕ್ರಬರ್‌ನಿಂದ ಒಮ್ಮೆ ಸ್ಕ್ರಬ್ ಮಾಡಿಕೊಳ್ಳಿ. ತಿಂಗಳಲ್ಲಿ ಎರಡು ಬಾರಿ ಈ ಸ್ಕ್ರಬರ್ ಬಳಸಿದ್ರೂ ಸಾಕು. ಇನ್ನು ಇಲ್ಲಿ ಬಳಸಿರುವ ವಸ್ತು ನೀವು ಬಳಸಿದ್ರೆ, ನಿಮಗೆ ಅಲರ್ಜಿ ಆಗುತ್ತದೆ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಬಳಸುವುದು ಉತ್ತಮ.