Monday, October 6, 2025

Latest Posts

ಚಾಣಕ್ಯರ 8 ನೀತಿಗಳು ಭಾಗ 1: ಬೆರಳಲ್ಲಿ ವಿಷವಿದ್ದರೆ ಬೆರಳನ್ನೇ ಕತ್ತರಿಸಿಬಿಡಿ..

- Advertisement -

ಕುಟಿಲ ಶಾಸ್ತ್ರವನ್ನು ಕಂಡುಹಿಡಿದ ಕೌಟಿಲ್ಯರೇ ಆಚಾರ್ಯ ಚಾಣಕ್ಯರು. ಚಣಕರ ಮಗನಾದ ಕಾರಣ ಚಾಣಕ್ಯ ಎಂಬ ಹೆಸರು ಬಂತು. ಅತೀ ಚತುರರಾಗಿದ್ದ ಚಾಣಕ್ಯ, ಓರ್ವ ಸಾಮಾನ್ಯ ಯುವಕನನ್ನು ರಾಜನಾಗಿ ಮಾಡುವಲ್ಲಿ ಯಶಸ್ವಿಯಾದವರು. ಇದಕ್ಕೆ ಕಾರಣ ಅವರು ಜೀವಿಸಿದ ರೀತಿ, ಅವರು ಕಲಿತ ಜೀವನ ಪಾಠ. ಆ ಜೀವನ ಪಾಠ ಮತ್ತು ಅವರ ಅನುಭವವೇ ಕುಟಿಲ ನೀತಿ ಅಥವಾ ಚಾಣಕ್ಯ ನೀತಿ. ಈ ಚಾಣಕ್ಯ ನೀತಿಯಲ್ಲಿ ಚಾಣಕ್ಯರು 8 ಪ್ರಮುಖ ವಿಷಯಗಳ ಬಗ್ಗೆ ಹೇಳಿದ್ದಾರೆ. ಆ 8 ವಿಷಯದಲ್ಲಿ ನಾವಿಂದು ಮೊದಲನೇಯ ಭಾಗದಲ್ಲಿ 4 ವಿಷಯಗಳ ಬಗ್ಗೆ ಮಾಹಿತಿಯನ್ನ ತಿಳಿಯೋಣ..

  1. ಮೊದಲನೇಯ ವಿಷಯವೆಂದರೆ ನಮ್ಮ ಸಿಟ್ಟನ್ನು ಯಾವಾಗಲೂ ಕಂಟ್ರೋಲ್‌ನಲ್ಲಿಡಬೇಕು. ಮತ್ತು ತಾಳ್ಮೆಯಿಂದ ವರ್ತಿಸಬೇಕು. ಯಾಕೆ ಅಂದ್ರೆ ಸಿಟ್ಟು ಬಂದಾಗ, ನಾವೇನು ಮಾಡುತ್ತಿದ್ದೇವೆ ಅನ್ನೋದು ನಮಗೇ ಗೊತ್ತಿರುವುದಿಲ್ಲ. ನಾವೇನು ಮಾತನಾಡುತ್ತಿದ್ದೇವೆ ಅನ್ನೋದು ನಮಗೆ ಗೊತ್ತಿರುವುದಿಲ್ಲ. ಬಾಯಿಗೆ ಬಂದಿದ್ದನ್ನ ಮಾತನಾಡುತ್ತೇವೆ. ಮನಸ್ಸಿಗೆ ಬಂದ ಹಾಗೆ ಬಿಹೇವ್ ಮಾಡುತ್ತೇವೆ.

ಮಾಡೋದೆಲ್ಲ ಮಾಡಿ, ಸಿಟ್ಟು ಕಡಿಮೆಯಾದ ಮೇಲೆ ನಾನು ಹೀಗೆ ಮಾಡಬಾರದಿತ್ತು ಎಂದು ಪಶ್ಚಾತಾಪ          ಪಡುತ್ತೇವೆ. ಹೀಗೆ ಮಾಡುವ ಬದಲು, ಸಿಟ್ಟು ಹಿಡಿತದಲ್ಲಿಟ್ಟುಕೊಂಡು, ತಾಳ್ಮೆಯಿಂದ ಇರಿ. ಯಾಕಂದ್ರೆ            ಎದುರಾಳಿಯ ಬಲಿಷ್ಠ ಅಸ್ತ್ರ ಅಂದ್ರೆ ನಿಮ್ಮ ಸಿಟ್ಟು, ಮತ್ತು ನಿಮ್ಮ ಬಲಿಷ್ಠ ಅಸ್ತ್ರ ಅಂದ್ರೆ ನಿಮ್ಮ ತಾಳ್ಮೆ.             ತಾಳ್ಮೆ ಒಂದಿದ್ದರೆ ಪ್ರಪಂಚವನ್ನೇ ಗೆಲ್ಲಬಹುದು.

  1. ಎರಡನೇಯ ವಿಷಯ ನಿಮ್ಮನ್ನು ಬೆಂಬಲಿಸುವರನ್ನು ಗೌರವಿಸಿ ಮತ್ತು ನಿಮ್ಮನ್ನು ಕೀಳಾಗಿ ನೋಡುತ್ತಾರೋ ಅಂಥವರನ್ನು ಕಡೆಗಣಿಸಿ. ನಿಮ್ಮ ಕೆಲಸಗಳಿಗೆ ಬೆಂಬಲಿಸುವರು, ನಿಮಗೆ ಉತ್ತಮ ಉಪಾಯಗಳನ್ನು ನೀಡುವವರು, ನಿಮ್ಮ ಯಶಸ್ಸನ್ನು ಕಾಣಬಯಸುವವರನ್ನು ಗೌರವಿಸಿ. ಮತ್ತು ನಿಮ್ಮ ಯಶಸ್ಸಿಗೆ ಹೊಟ್ಟೆಕಿಚ್ಚು ಪಡುವವರು, ನಿಮ್ಮನ್ನು ತಗ್ಗಿಸುವ ಪ್ರಯತ್ನ ಮಾಡುವವರು, ನಿನ್ನ ಕೈಲಿ ಈ ಕೆಲಸ ಮಾಡಲಾಗುವುದಿಲ್ಲ ಎನ್ನುವವರ ಮಾತನ್ನು ಒಂದು ಕಿವಿಯಿಂದ ಕೇಳಿ, ಇನ್ನೊಂದು ಕಿವಿಯಿಂದ ಬಿಡಿ. ಯಾಕಂದ್ರೆ ಅಂಥವರ ಮಾತಿಗೆ ಬೆಲೆ ಕೊಟ್ಟರೆ, ಅಂಥವರ ಮಾತಿನಿಂದ ನೀವು ಬೇಸರವಾದರೆ, ನಿಮ್ಮ ಸಮಯ ವ್ಯರ್ಥವಾಗುತ್ತದೆ ಹೊರತು, ನೀವು ಯಶಸ್ಸು ಸಾಧಿಸಲಾಗುವುದಿಲ್ಲ.
  2. ಮೂರನೇಯ ವಿಷಯ ಎಲ್ಲರ ಮೇಲೂ ಭರವಸೆ ಇಡಬೇಡಿ. ಕೆಲವರು ಎಲ್ಲರೂ ತಮ್ಮವರೇ, ಎಲ್ಲರೂ ಒಳ್ಳೆಯವರೇ ಎಂದು ಭರವಸೆ ಇಡುತ್ತಾರೆ. ಇದು ತಪ್ಪು, ಹಾಗಂತ ಎಲ್ಲರೂ ಕೆಟ್ಟವರೇ ಎಂದರ್ಥವಲ್ಲ. ಹಾಗಾಗಿ ನೀವು ಭರವಸೆ ಇಡುವ ಮುನ್ನ, ಯಾರ ಬುದ್ಧಿ ಹೇಗಿದೆ..? ಇವರು ನಂಬಿಕೆಗೆ ಅರ್ಹರೇ..? ಇವರು ನಿಯತ್ತಾಗಿ ಇರುವವರೇ ಎಂದು ತಿಳಿದು ಭರವಸೆ ಇಡಿ. ಇನ್ನು ಒಳ್ಳೆಯವರೆಂದು ನಂಬಿ, ಅವರ ಮೇಲೆ ಭರವಸೆ ಇಟ್ಟು, ನಂತರ ಅವರು ಮೋಸ ಮಾಡಿದಾಗ, ಅದನ್ನ ಎದುರಿಸುವ, ನಿಮ್ಮ ಯಶಸ್ಸಿನಿಂದಲೇ ಅವರಿಗೆ ತಕ್ಕ ಶಾಸ್ತಿ ಮಾಡುವ ತಾಕತ್ತು ನಿಮ್ಮಲ್ಲಿರಬೇಕು.
  3. ನಾಲ್ಕನೇಯ ವಿಷಯ ಬೆರಳಲ್ಲಿ ವಿಷವಿದ್ದರೆ ಬೆರಳನ್ನೇ ಕತ್ತರಿಸಿಬಿಡಿ. ಚಾಣಕ್ಯರ ಪ್ರಕಾರ, ಯಾವುದೇ ವಿಷಜಂತು ಬೆರಳನ್ನು ಕಚ್ಚಿದಾಗ, ಆ ಬೆರಳನ್ನೇ ಕತ್ತರಿಸಿಬಿಡಬೇಕಂತೆ. ಯಾಕಂದ್ರೆ ಹಾಗೆ ಬಿಟ್ಟರೆ, ಅದು ದೇಹಪೂರ್ತಿ ಸೇರಿ. ನಮ್ಮನ್ನ ಕೊಂದು ಬಿಡುತ್ತದೆ. ಹಾಗಾಗಿ ಜೀವ ಹೋಗುವ ಜಾಗದಲ್ಲಿ ಬೆರಳು ಕತ್ತರಿಸಿಬಿಡಿ ಎಂದಿದ್ದಾರೆ ಚಾಣಕ್ಯರು. ಇದರ ಅರ್ಥ, ನಿಮ್ಮ ವಿರುದ್ಧ ಯಾರಾದರೂ ಸಂಚು ರೂಪಿಸುತ್ತಿದ್ದಾರೆಂದು ತಿಳಿದ ತಕ್ಷಣ, ಅವರನ್ನ ನಿಮ್ಮ ಜೀವನದಿಂದ ಕಿತ್ತೆಸೆದು ಬಿಡಿ. ಅವರು ನಿಮ್ಮ ಸಹೋದರರೇ ಆಗಿರಬಹುದು, ನಿಮ್ಮ ಗೆಳೆಯರೇ ಆಗಿರಬಹುದು ಅಥವಾ ನಿಮ್ಮ ಬಾಳ ಸಂಗಾತಿಯೇ ಆಗಿರಬಹುದು. ನೀವು ಹೀಗೆ ಮಾಡದಿದ್ದಲ್ಲಿ ಅವರು ನಿಮ್ಮ ಜೀವಕ್ಕೆ ಮುಳ್ಳಾಗಬಹುದು.

ಇನ್ನುಳಿದ ನಾಲ್ಕು ವಿಷಯಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss