ಗೆಳೆತನ ಅಂದ್ರೆ ಯಾವ ಸ್ವಾರ್ಥವೂ ಇಲ್ಲದೇ, ತೋರುವ ಪ್ರೀತಿ. ಕೆಲವರಿಗೆ ಕುಟುಂಬಕ್ಕಿಂತ ಗೆಳೆಯರ ಸಂಗವೇ ಇಷ್ಟವಾಗುತ್ತದೆ. ಯಾಕಂದ್ರೆ ಅವರಿಗೆ ಗೆಳೆಯರಂದ್ರೆ ಇಷ್ಟವಾಗ್ತಾರೆ. ಹಲವರು ತಮ್ಮ ಗೆಳೆತನವನ್ನು ಬಾಲ್ಯದಿಂದ ಮುಪ್ಪಿನವರೆಗೂ ಕಾಪಾಡಿಕೊಂಡು ಬಂದಿರ್ತಾರೆ. ನಿಜವಾಗ್ಲೂ ಒಬ್ಬರಿಗೆ ಜೀವನದಲ್ಲಿ ಅಂಥ ಗೆಳೆಯರು ಸಿಗೋದು ಪುಣ್ಯಾನೇ ಅನ್ನಬಹುದು. ಹಾಗಾದ್ರೆ ನಿಜವಾದ ಗೆಳೆಯನಲ್ಲಿ ಎಂಥ ಗುಣಗಳಿರುತ್ತದೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ವಿದುರನ ಪ್ರಕಾರ ನಿಮ್ಮ ಅತ್ಯುತ್ತಮ ಸ್ನೇಹಿತ ನೀವೇ ಆಗಿರುತ್ತೀರಿ. ಮತ್ತು ನಿಮ್ಮ ಶತ್ರು ಕೂಡ ಸ್ವತಃ ನೀವೇ ಆಗಿರುತ್ತೀರಿ. ಇನ್ನು ಉತ್ತಮ ಸ್ನೇಹಿತನ ಬಗ್ಗೆ ಹೇಳುವುದಾದರೆ, ಓರ್ವ ವ್ಯಕ್ತಿ ಯಾವಾಗಲೂ ಸಿಟ್ಟಿನಲ್ಲಿದ್ದು, ಅವನ ಬಳಿ ಯಾರಾದರೂ ಮಾತನಾಡುವುದಿದ್ದರೆ, ಹೆದರಿ ಹೆದರಿ ಮಾತನಾಡುತ್ತಾರೋ, ಅಂಥವರು ಎಂದಿಗೂ ಉತ್ತಮ ಸ್ನೇಹಿತರಾಗಲು ಸಾಧ್ಯವಿಲ್ಲ. ಅದು ಹೆಣ್ಣಾಗಿರಬಹುದು ಅಥವಾ ಗಂಡಾಗಿರಬಹುದು. ಯಾರಿಗೆ ಸಿಕ್ಕಾಪಟ್ಟೆ ಸಿಟ್ಟಿರುತ್ತದೆಯೋ, ಅಂಥವರು ಒಳ್ಳೆಯ ಸ್ನೇಹಿತರಾಗಲು ಸಾಧ್ಯವಿಲ್ಲ. ಬದಲಾಗಿ ಇದ್ದದ್ದನ್ನು ಇದ್ದ ಹಾಗೆ ಹೇಳುವ, ನಿಮಗೆ ಒಳ್ಳೆಯದನ್ನೇ ಬಯಸುವವರು, ನಿಮ್ಮ ಉತ್ತಮ ಸ್ನೇಹಿತರಾಗಬಲ್ಲರು.
ಉತ್ತಮ ಸ್ನೇಹಿತರೆಂದರೆ, ನಿಮ್ಮನ್ನು ಯಾವುದೇ ತೊಂದರೆಗೆ ಸಿಲುಕಿಸದವರು. ನೀವು ತೊಂದರೆಯಲ್ಲಿದ್ದಾಗ, ಆ ತೊಂದರೆಯಿಂದ ನಿಮ್ಮನ್ನು ಪಾರು ಮಾಡುವವರು ಉತ್ತಮ ಸ್ನೇಹಿತರಾಗಿರುತ್ತಾರೆ. ಆದ್ರೆ ನೀವು ತೊಂದರೆಯಲ್ಲಿದ್ದಾಗ, ನಾನು ಬೇರೆ ಕೆಲಸದಲ್ಲಿ ಬ್ಯುಸಿ ಇದ್ದೇನೆ, ನಿನಗೆ ಸಹಾಯ ಮಾಡಲಾಗುವುದಿಲ್ಲ ಎನ್ನುವವರು. ಅಥವಾ ನೀವು ತೊಂದರೆಯಲ್ಲಿದ್ದೀರಿ ಎಂದು ಗೊತ್ತಿದ್ದರೂ, ಏನೂ ಗೊತ್ತಿಲ್ಲದಂತೆ ಇರುವರು, ನಿಮ್ಮ ನಂಬಿಕಸ್ಥ ಸ್ನೇಹಿತರಾಗಲು ಸಾಧ್ಯವೇ ಇಲ್ಲ.
ನೀವು ಯಾರೊಂದಿಗೆ ಸ್ನೇಹ ಮಾಡಿರುತ್ತೀರೋ, ಅವನ ಮಾತಿನ ಮೇಲೂ ನೀವು ಅವನೆಂಥ ಮನುಷ್ಯನೆಂದು ಗುರುತಿಸಬಹುದು. ನಿಮ್ಮ ಸ್ನೇಹಿತ ಯಾವಾಗಲೂ ಬೇರೆಯವರನ್ನು ಬೈದುಕೊಂಡು, ಬೇರೆಯವರ ಕೇಡನ್ನೇ ಬಯಸೋದು, ಬರೀ ನಿಮ್ಮ ಬಳಿ ಅವರಿವರ ಚಾಡಿಯನ್ನೇ ಹೇಳುವವನಾಗಿದ್ದರೆ, ಆಗಲೇ ನೀವು ತಿಳಿದುಕೊಳ್ಳಬೇಕು. ಏನೆಂದರೆ ಈತ ಮುಂದೊಂದು ದಿನ ನಿಮ್ಮ ಬಗ್ಗೆಯೂ ಬೇರೆಯವರ ಬಳಿ ಕೆಟ್ಟದ್ದನ್ನೇ ಹೇಳುತ್ತಾನೆ ಮತ್ತು ನಿಮ್ಮ ಬಗ್ಗೆ ಕೆಟ್ಟದ್ದನ್ನೇ ಬಯಸುತ್ತಾನೆಂದು. ಇಂಥವರೆಂದು ಉತ್ತಮ ಸ್ನೇಹಿತರಾಗಲು ಸಾಧ್ಯವಿಲ್ಲ.
ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..