ಊಟ ನಮ್ಮಿಷ್ಟ, ನೋಟ ಪರರಿಷ್ಟ ಎಂದು ಹಿರಿಯರು ಅಂದೇ ಈ ಗಾದೆ ಮಾತನ್ನ ಹೇಳಿದ್ದಾರೆ. ಇದರ ಅರ್ಥವೇನೆಂದರೆ ಊಟ ನಮ್ಮಿಷ್ಟದಂತೆ ಇರಲಿ. ಆದ್ರೆ ನೋಟ ಬೇರೆಯವರ ಇಷ್ಟದಂತಿರಲಿ ಎಂದು. ಅಂದ್ರೆ ನಾವು ವಸ್ತ್ರ ಧರಿಸುವ ರೀತಿ, ನಾವು ಇರುವ ರೀತಿ, ಮಾತನಾಡುವ ರೀತಿ, ನಡೆಯುವ, ಕೂರುವ, ಏಳುವ ಎಲ್ಲ ರೀತಿಯೂ ಬೇರೆಯವರಿಗೆ ಇಷ್ಟವಾಗುವಂತಿರಬೇಕು. ಆದ್ರೆ ಇಂದಿನ ಕಾಲದಲ್ಲಿ ಜನ, ಬೇರೆಯವರ ಇಷ್ಟವನ್ನ ನೋಡುವುದಿಲ್ಲ. ಬದಲಾಗಿ ತಮಗಿಷ್ಟವಾದ ಬಟ್ಟೆಯನ್ನೇ ಧರಿಸುತ್ತಾರೆ. ಆದ್ರೆ ಚಾಣಕ್ಯರು ಬಟ್ಟೆ ಧರಿಸುವಾಗ 5 ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ. ಹಾಗಾದ್ರೆ ಯಾವುದು ಆ 5 ವಿಷಯ ಅಂತಾ ತಿಳಿಯೋಣ ಬನ್ನಿ…
ಮೊದಲನೇಯ ವಿಷಯ ಎಲ್ಲಿ ಯಾವ ರೀತಿಯ ಬಟ್ಟೆ ತೊಡಬೇಕೋ, ಅಂಥ ಬಟ್ಟೆಯನ್ನೇ ತೊಡಿ. ಉದಾಹರಣೆಗೆ ನೀವು ಮದುವೆಗೆ ಹೋಗುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆಗ ಮದುವೆಗೆ ಬಂದ ಅತಿಥಿಗಳು ತೊಡುವಂಥ ಬಟ್ಟೆ ತೊಡಬೇಕು. ಅದನ್ನ ಬಿಟ್ಟು ನಿಮ್ಮದೇ ಮದುವೆ ಅನ್ನೋ ರೀತಿ ಬಟ್ಟೆ ತೊಟ್ಟು ಹೋದರೆ ನಿಮಗೆ ಇರುಸುಮುರುಸಾಗುತ್ತದೆ. ಇನ್ನು ಯಾರಾದರೂ ನಿಧನರಾದಾಗಲೂ ನಿಮ್ಮ ಬಟ್ಟೆ ಸಿಂಪಲ್ ಆಗಿರಲಿ.
ಎರಡನೇಯದಾಗಿ ನೀವು ಬಟ್ಟೆ ತೊಡುವಾಗ ನಿಮ್ಮ ಯೋಗ್ಯತೆಗೆ ತಕ್ಕಂತೆ ಬಟ್ಟೆ ತೊಡಿ. ಯಾಕಂದ್ರೆ ಒಬ್ಬ ಮನುಷ್ಯನ ಯೋಗ್ಯತೆಯನ್ನ ಅವನ ಬಟ್ಟೆಯಿಂದಲೇ ಅಳಿಯಲಾಗುತ್ತದೆ. ಹಾಗಾಗಿ ಉತ್ತಮ ಬಟ್ಟೆಯನ್ನೇ ತೊಡಿ. ಹಾಗಂತ ಯೋಗ್ಯತೆ ತೋರಿಸಲು ಹೋಗಿ, ರಂಗು ರಂಗಿನ ಬಟ್ಟೆ ತೊಟ್ಟು, ಮರ್ಯಾದೆಗೆ ಧಕ್ಕೆ ತಂದುಕೊಳ್ಳುವವರೂ ಇದ್ದಾರೆ. ಹಾಗಾಗಿ ಸಿಂಪಲ್ ಆದರೂ ಉತ್ತಮ ಬಟ್ಟೆಯನ್ನೇ ತೊಡಿ.
ಮೂರನೇಯದಾಗಿ ವಯಸ್ಸಿಗೆ ತಕ್ಕ ಹಾಗೆ ಬಟ್ಟೆ ಧರಿಸಿ. ನೀವು ಚಿಕ್ಕ ವಯಸ್ಸಿನವರಿದ್ದಾಗ, ಫ್ರಾಕ್, ಸ್ಕರ್ಟ್, ಪ್ಯಾಂಟ್ ಶರ್ಟ್ ಹಾಕುತ್ತಿದ್ದ್ರಿ. ಆದ್ರೆ ನೀವು ನಾಲ್ಕು ಮಕ್ಕಳ ತಾಯಿಯಾದ ಮೇಲೂ ಹೀಗೆ ಬಟ್ಟೆ ಧರಿಸಿದ್ರೆ, ಅದು ನಿಮಗೆ ಮ್ಯಾಚ್ ಆಗಲ್ಲ. ಹಾಗಾಗಿ ಆ ವಯಸ್ಸಿನಲ್ಲಿ ನೀವು ಹೇಗೆ ಇರಬೇಕೋ, ಹಾಗೆ ಇರಬೇಕು.
ನಾಲ್ಕನೇಯದಾಗಿ ನೀವು ಧರಿಸುವ ಬಟ್ಟೆ ಸ್ವಚ್ಚವಾಗಿರಲಿ. ಎಂದಿಗೂ ಕೊಳೆಯಾದ, ವಾಸನೆ ಬರುವ ಬಟ್ಟೆಯನ್ನು ಧರಿಸಬೇಡಿ. ಒಮ್ಮೆ ಹಾಕಿದ ಬಟ್ಟೆಯನ್ನು ಚೆನ್ನಾಗಿ ತೊಳೆದು, ಒಣಗಿಸಿ, ಇಸ್ತ್ರೀ ಹಾಕಿ. ನಂತರ ಧರಿಸಿ. ಯಾಕಂದ್ರೆ ನೀವು ಎಷ್ಟು ನೀಟ್ ಆಗಿ ಇರ್ತೀರೋ, ಅಷ್ಟು ಜನ ನಿಮಗೆ ಗೌರವ ನೀಡುತ್ತಾರೆ.
ಐದನೇಯದಾಗಿ ನೀವು ಯಾವ ಕೆಲಸಕ್ಕೆ ಹೋಗುತ್ತೀರೋ, ಅದರ ಮೇಲೆ ನೀವು ಧರಿಸುವ ಬಟ್ಟೆ ಅವಲಂಬಿತವಾಗಿರುತ್ತದೆ. ನೀವು ಟೀಚರ್ ಕೆಲಸಕ್ಕೆ ಹೋಗುತ್ತಿದ್ರೆ, ನೀಟ್ ಆಗಿ ಸೀರೆ ಧರಿಸಿ, ಹೋಗಬೇಕು. ಅದನ್ನ ಬಿಿಟ್ಟು ನೀವು ವೆಸ್ಟರ್ನ್ ಡ್ರೆಸ್ ಹಾಕೊಂಡ್ ಹೋದ್ರೆ, ನಿಮಗೆ ವಿದ್ಯಾರ್ಥಿಗಳು ಗೌರವ ನೀಡೋದಿಲ್ಲಾ. ಹಾಗಾಗಿ ತಮ್ಮ ತಮ್ಮ ಕೆಲಸಕ್ಕೆ ತಕ್ಕ ಹಾಗೆ ನಿಮ್ಮ ಬಟ್ಟೆ ಇರಲಿ.