ಇಂಗ್ಲೆಂಡ್: ವಿಶ್ವಕಪ್ ಆರಂಭದಿಂದಲೂ ಭರ್ಜರಿ ಪರ್ಫಾರ್ಮೆನ್ಸ್ ನೀಡಿದ್ದ ಟೀಮ್ ಇಂಡಿಯಾ, ಅಂತಿಮ ಲೀಗ್ ಪಂದ್ಯದಲ್ಲೂ ಉತ್ತಮ ನೀಡಿತು. ಈ ಮೂಲಕ ಟೂರ್ನಿಯಲ್ಲಿ 7ನೇ ಗೆಲುವು ದಾಖಲಿಸಿ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ನಿನ್ನೆ ಲೀಡ್ಸ್ ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಅಂತಿಮ ಲೀಗ್ ನಲ್ಲಿ ಭರ್ಜರಿ 7 ವಿಕೆಟ್ ಗೆಲುವು ದಾಖಲಿಸಿದ ಕೊಹ್ಲಿ ಪಡೆ, ಗೆಲುವಿನೊಂದಿಗೆ ನಾಲ್ಕರಘಟ್ಟ ತಲುಪಿದೆ. ಟಾಸ್ ಗೆದ್ದ ಶ್ರೀಲಂಕಾ, ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 264 ರನ್ ಕಲೆಹಾಕಿತ್ತು. ಈ ಮೂಲಕ ಭಾರತದ ಗೆಲುವಿಗೆ ಸವಾಲಿನ ಮೊತ್ತ ನೀಡಿತು. ಆದ್ರೆ ನಂತರ ಗುರಿ ಬೆನ್ನತ್ತಿದ ಭಾರತಕ್ಕೆ ಇದು ಸವಾಲೆನಿಸಲೇ ಇಲ್ಲ.
ಇನಿಂಗ್ಸ್ ಆರಂಭಿಸಿದ ರೋಹಿತ್-ರಾಹುಲ್ ಜೋಡಿ ಲಂಕಾ ಬೌಲರ್ ಗಳ ಯೋಜನೆಯನ್ನೆಲ್ಲಾ ತಲೆಕೆಳಕಾಗುವಂತೆ ಮಾಡಿದ್ರು. ಮೊದಲ ವಿಕೆಟ್ ಗೆ ಬರೋಬ್ಬರಿ 189 ರನ್ ಕಲೆ ಹಾಕಿದ ಈ ಜೋಡಿ ಭಾರತದ ಗೆಲುವನ್ನ ಖಚಿತಪಡಿಸಿದ್ರು. ಒಂದು ಕಡೆ ಎಂದಿನಂತೆ ಹಿಟ್ ಮ್ಯಾನ್, ಬಿರುಸಿನ ಬ್ಯಾಟಿಂಗ್ ನಡೆಸಿದ್ರೆ, ಮತ್ತೊಂದು ಕಡೆ ರಾಹುಲ್ ಎಚ್ಚರಿಕೆಯಿಂದ ಇನಿಂಗ್ಸ್ ಕಟ್ಟಿದ್ರು. ಪರಿಣಾಮ, ಇಬ್ಬರೂ ಶತಕ ಸಿಡಿಸಿದ್ರಲ್ಲಿ ಸಕ್ಸಸ್ ಆದ್ರು. 103 ರನ್ ಗಳಿಸಿದ ರೋಹಿತ್, ಟೂರ್ನಿಯಲ್ಲಿ ದಾಖಲೆಯ 5ನೇ ಶತಕ ಸಿಡಿಸಿದ್ರೆ, ಕನ್ನಡಿಗ ರಾಹುಲ್ ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಶತಕದ ಸಾಧನೆ ಮಾಡಿದ್ರು. ಆರಂಭಿಕರ ಈ ಪ್ರದರ್ಶನ ಭಾರತದ ಗೆಲುವನ್ನ ಖಚಿತ ಪಡಿಸಿತು. ಅಷ್ಟೇ ಅಲ್ಲದೆ ಕ್ಯಾಪ್ಟನ್ ಕೊಹ್ಲಿ ಮೇಲಿನ ಒತ್ತಡವನ್ನ ತಗ್ಗಿಸಿದ್ರು.
ಅಂತಿಮವಾಗಿ 43.3ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು, 265 ರನ್ ಕಲೆ ಹಾಕಿದ ಭಾರತ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು. ಮತ್ತೊಂದು ಕಡೆ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಎದುರು ಆಸ್ಟ್ರೇಲಿಯಾ ಸೋಲನುಭವಿಸಿತು. ಪರಿಣಾಮವಾಗಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಕ್ಕೇರಿರೋ ಟೀಂ ಇಂಡಿಯಾ, ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಎದುರು, ಮಂಗಳವಾರ ಸೆಮಿಫೈನಲ್ ಆಡಲಿದೆ.
ನೂರು ವಿಕೆಟ್ ಪಡೆದ ಬುಮ್ರಾ…! ಮಿಸ್ ಮಾಡದೇ ಈ ವಿಡಿಯೋ ನೋಡಿ