ಕಳೆದ ಬಾರಿ, ನಾವು ವಿದುರನ ಪ್ರಕಾರ ಮನುಷ್ಯನಿಗೆ ಇರಬೇಕಾದ 8 ಗುಣಗಳಲ್ಲಿ ನಾಲ್ಕು ಗುಣಗಳು ಯಾವುದು ಅಂತಾ ಹೇಳಿದ್ವಿ. ಇಂದು ಅದರ ಮುಂದುವರಿದ ಭಾಗವಾಗಿ, ಮನುಷ್ಯನಲ್ಲಿ ಇರಬೇಕಾದ ನಾಲ್ಕು ಗುಣಗಳೇನು ಅಂತಾ ತಿಳಿಯೋಣ ಬನ್ನಿ..
ಐದನೇಯ ಗುಣ ಪರಾಕ್ರಮ. ಯಾವ ಮನುಷ್ಯ ಯಾರಿಗೂ ಹೆದರದೇ, ಜೀವನ ಮಾಡುತ್ತಾನೋ. ಯಾರು ಪರಾಕ್ರಮಿಯಾಗಿರುತ್ತಾರೋ, ಅಂಥವರಿಗೆ ಯಾರೂ ಕೂಡ ತೊಂದರೆ ಕೊಡಲು ಸಾಧ್ಯವಿಲ್ಲ. ಹಾಗಂತ ಎಲ್ಲ ಕಡೆಯೂ ನಿಮ್ಮ ಪರಾಕ್ರಮ ತೋರಿಸಬೇಡಿ. ಬದಲಾಗಿ ಅವಶ್ಯಕತೆ ಇದ್ದಲ್ಲಿ, ಖಂಡಿತ ನಿಮ್ಮ ಪರಾಕ್ರಮ ತೋರಿಸಿ ಎನ್ನುತ್ತಾರೆ ವಿದುರ.
ಆರನೇಯ ಗುಣ ಕಡಿಮೆ ಮಾತನಾಡುವ ಬುದ್ಧಿ. ಕಡಿಮೆ ಮಾತನಾಡಿ, ಕೆಲಸ ಜಾಸ್ತಿ ಮಾಡಿ ಅನ್ನೋದು ಹಿರಿಯರ ಮಾತು. ಅಲ್ಲದೇ, ಯಾರು ಕಡಿಮೆ ಮಾತಾಡಿ, ಹೆಚ್ಚು ಕೇಳಿಸಿಕೊಳ್ತಾರೋ, ಅಂಥವರು ಉತ್ತಮ ಕೆಲಸಗಾರರಾಗುತ್ತಾರೆ ಅಂತಾನೂ ಹೇಳಲಾಗುತ್ತದೆ. ಮತ್ತು ಯಾರು ಉತ್ತಮ ಕೆಲಸಗಾರರಾಗ್ತಾರೋ, ಅಂಥವರು ತಮ್ಮ ಗುರಿಯನ್ನ ತಲುಪಿಯೇ ತಲುಪುತ್ತಾರೆ. ಹಾಗಾಗಿ ಕಡಿಮೆ ಮಾತನಾಡುವ ಬುದ್ಧಿ, ಆದ್ರೆ ಸರಿಯಾಗಿ ಬುದ್ಧಿವಂತಿಕೆಯಿಂದ ಮಾತನಾಡುವ, ಮಾತನಾಡುವ ಜಾಗದಲ್ಲಷ್ಟೇ ಮಾತನಾಡುವ ಬುದ್ಧಿ ಮನುಷ್ಯನಿಗಿರಬೇಕು ಅಂತಾರೆ ವಿದುರ
ಏಳನೇಯ ಗುಣ ಶಕ್ತಿಗನುಸಾರವಾಗಿ ದಾನ. ದರಿದ್ರನಾಗುವಷ್ಟು ದಾನ ಮಾಡಬೇಡ ಅಂತಾ ಹಿರಿಯರು ಹೇಳಿದ್ದಾರೆ. ಅದೇ ರೀತಿ ವಿದುರನು ಕೂಡ, ನಿಮ್ಮ ಶಕ್ತಿಗೆ ಅನುಸಾರವಾಗಿ ದಾನ ಮಾಡಿ. ಅಗತ್ಯಕ್ಕಿಂತ ಹೆಚ್ಚು ದಾನ ಬೇಡ ಎಂದಿದ್ದಾರೆ. ಯಾಕಂದ್ರೆ ತುಂಬ ಒಳ್ಳೆಯತನ, ನಮ್ಮ ಜೀವನವನ್ನೇ ಹಾಳು ಮಾಡಿಬಿಡುತ್ತದೆ.
ಎಂಟನೇಯ ಗುಣ ಕೃತಜ್ಞತೆ. ಯಾರಾದರೂ ನಮಗೆ ಸಹಾಯ ಮಾಡಿದರೆ, ಆ ಸಹಾಯವನ್ನು ನಾವೆಂದೂ ಮರಿಯಬಾರದು. ಅದು ಪುಟ್ಟ ಸಹಾಯವೇ ಆಗಿರಲಿ, ದೊಡ್ಡ ಸಹಾಯವೇ ಆಗಿರಲಿ. ಅದೇ ರೀತಿ ನಾವು ಯಾರಿಗಾದರೂ ಸಹಾಯ ಮಾಡಿದ್ದಲ್ಲಿ, ಅದನ್ನ ಕೂಡ ನಾವು ಮರಿಯಬಾರದು ಅಂತಾರೆ ವಿದುರ.