Sunday, December 22, 2024

Latest Posts

ಕೆಜಿಎಫ್ ಸಿನಿಮಾ ಮಾಡೋಕ್ಕೂ ಮುಂಚೆ ಜೂನಿಯರ್ ರಾಕಿ ಏನ್ಮಾಡ್ತಿದ್ರು..?

- Advertisement -

ಕೆಜಿಎಫ್ ಸಿನಿಮಾ ಕ್ರೇಜ್ ಹೇಗಿದೆ ಅಂತಾ ಎಲ್ಲರಿಗೂ ಗೊತ್ತೇ ಇದೆ. ಮೊದಲು ಕೆಜಿಎಫ್ ಪಾರ್ಟ್ 1 ಬಂದಾಗ, ಯಾವಾಗ ಪಾರ್ಟ್ 2 ಬರತ್ತೋ ಅಂತಾ ನಾವು ಕಾಯ್ತಾ ಇದ್ವಿ. ಈಗ ಪಾರ್ಟ್ 2 ಕೂಡ ಬಂದಾಯ್ತು. ಇನ್ನು ಪಾರ್ಟ್ 3ಗೋಸ್ಕರ ವೇಯ್ಟಿಂಗ್. ಇನ್ನು ಈ ಸಿನಿಮಾದಲ್ಲಿ ಚಿಕ್ಕ ರಾಕಿ ಭಾಯ್ ಆಗಿ ನಟಿಸಿದ್ದ ಅನ್ಮೋಲ್, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಕೆಜಿಎಫ್ ಸಿನಿಮಾ ಶೂಟಿಂಗ್ ವೇಳೆ ತಮಗಾದ ಅನುಭವ ಮತ್ತು ತಮ್ಮ ಲೈಫ್ ಜರ್ನಿ ಬಗ್ಗೆ ಮಾತನಾಡಿದ್ದಾರೆ.

ಕೆಜಿಎಫ್ ಸಿನಿಮಾಗೆ ಬರೋದಕ್ಕೂ ಮುನ್ನ ನಾನು ಬ್ಯಾಕ್ ಡಾನ್ಸರ್ ಆಗಿದ್ದೆ ಅಂತಾ ಮಾತು ಶುರು ಮಾಡಿದ ಅನ್ಮೋಲ್, ಕೆಜಿಎಫ್ ಸಿನಿಮಾ ಶೂಟಿಂಗ್ ಬಗ್ಗೆ ಹೇಳಿಕೊಂಡಿದ್ದಾರೆ. ಕೆಜಿಎಫ್‌ನಲ್ಲಿ ನಟಿಸಿದ ಮೇಲೆ ಜೀವನದ ದಿಕ್ಕೇ ಬದಲಾಯ್ತು. ಹಾಗಾಗಿ ಆ ಟೀಮ್‌ಗೆ ಎಷ್ಟೇ ಧನ್ಯವಾದ ಹೇಳಿದ್ರು ಅದು ಕಮ್ಮಿನೇ ಅಂತಾರೆ ಅನ್ಮೋಲ್.

ಕೆಜಿಎಫ್ ಶೂಟಿಂಗ್ ವೇಳೆ ಅನ್ಮೋಲ್ 8ನೇ ಕ್ಲಾಸಿನಲ್ಲಿ ಓದುತ್ತಿದ್ದರಂತೆ. ಕೆಜಿಎಫ್ ರಿಲೀಸ್ ಆದಾಗ, ಚಿಕ್ಕ ರಾಕಿ 10ನೇ ತರಗತಿಯಲ್ಲಿದ್ರು. ಇನ್ನು ಈ ವರ್ಷ ಕೆಜಿಎಫ್ 2 ರಿಲೀಸ್ ಆದಾಗ, ಸೆಕೆಂಡ್ ಪಿಯುಸಿ ಪರೀಕ್ಷೆ ಮುಗಿಸಿದ್ದರಂತೆ. ಇನ್ನು ಅನ್ಮೋಲ್ ಎಲ್ಲೇ ಹೋದ್ರೂ, ಅವ್ರನ್ನ ನೀನು ರಾಕಿ ಭಾಯಿ ಪಾತ್ರ ಮಾಡಿದ್ದೆ ಅಲ್ವಾ ಅಂತಾನೇ ಕೇಳ್ತಾರೆ ವಿನಃ, ಅನ್ಮೋಲ್ ಅಂತ ಹೆಸರಿನಿಂದ ಗುರುತಿಸೋದು ಕಡಿಮೆ ಅಂತೆ.

ಇನ್ನು ಈ ಅವಕಾಶ ಸಿಕ್ಕಿದ್ದಾದ್ರೂ ಹೇಗೆ ಅಂದ್ರೆ, ಅನ್ಮೋಲ್ ಡಾನ್ಸ್ ಮಾಸ್ಟರ್‌ ಕಡೆಯಿಂದ ಪ್ರಶಾಂತ್ ಸರ್ ಪರಿಚಯವಾಯಿತು. ನಾನು ಪ್ರಶಾಂತ್ ಸರ್ ಆಫೀಸ್‌ಗೆ ಹೋಗಿ ಆಡಿಶನ್ ಕೊಟ್ಟ ಬಳಿಕ, ನನಗೆ ನಟಿಸುವಾಗ ಯಾವುದೇ ಭಯವಿರಬಾರದು ಅಂತಾ, ಅವರ ಅಸಿಸ್ಟೆಂಟ್ ಪುನೀತ್ ರುದ್ರಣ್ಣ ಅವರು ನನಗೆ ತರಬೇತಿ ಕೊಡ್ತಿದ್ರು . ನಾನೀಗ ಎಷ್ಟೇ ಫೇಮಸ್ ಆಗಿದ್ರು, ಅದಕ್ಕೆ ಕಾರಣ ನನ್ನ ಡಾನ್ಸ್‌ ಮಾಸ್ಟರ್ ಮತ್ತು ಪ್ರಶಾಂತ್ ಸರ್ ಟೀಮ್ ಅಂತಾ ನೆನೆಸಿಕೊಳ್ತಾರೆ ಅನ್ಮೋಲ್.

ಇಷ್ಟೇ ಅಲ್ಲದೇ, ನಾನು ಚಾಪ್ಟರ್ ಟೂ ನಲ್ಲಿ ಇರ್ತೀನಿ ಅಂತಾ ಅಂದುಕೊಂಡಿರಲಿಲ್ಲ. ಯಾಕಂದ್ರೆ ಚಾಪ್ಟರ್ 1ನಲ್ಲಿ ನನ್ನ ನಟನೆಯ ಶೂಟಿಂಗ್ ಎಲ್ಲಾ ಮಾಡಿ ಮುಗಿಸಿದ್ರು. ಕೆಜಿಎಫ್ 1ನಲ್ಲಿ ಕೆಲ ಸೀನ್‌ಗಳು ಬಂದಿರಲಿಲ್ಲ. ಆಗ ನಾನು ಅದನ್ನ ಕಟ್ ಮಾಡಿರಬಹುದು ಅಂತಾ ತಿಳಿದುಕೊಂಡಿದ್ದೆ. ಆದ್ರೆ ಅದನ್ನ ಎರಡನೇಯ ಚಾಪ್ಟರ್‌ನಲ್ಲಿ ತೋರಿಸಿದ್ದಾರೆ ಅಂತಾ ಅನ್ಮೋಲ್ ವಿವರಿಸಿದ್ರು.

- Advertisement -

Latest Posts

Don't Miss