ನಾವು ಸ್ವಪ್ನ ಶಾಸ್ತ್ರದ ಬಗ್ಗೆ ಹಲವು ವಿಷಯಗಳನ್ನ ನಿಮಗೆ ಹೇಳಿದ್ದೇವೆ. ಕನಸ್ಸಿನಲ್ಲಿ ದೇವರು ಬಂದ್ರೆ ಏನರ್ಥ..? ಕೆಲವು ಪ್ರಾಣಿ ಪಕ್ಷಿಗಳು ಬಂದ್ರೆ ಏನರ್ಥ..? ಮರಣ ಹೊಂದಿದವರು ಬಂದ್ರೆ ಏನರ್ಥ..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದೂ ಕೂಡ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..
ಕನಸ್ಸಿನಲ್ಲಿ ಸಿಂಹ ಕಾಣಿಸುವುದು. ಸಿಂಹ ಅಂದ್ರೆ ನಾಯಕ. ಹಾಗಾಗಿ ನಿಮ್ಮ ಕನಸ್ಸಿನಲ್ಲಿ ಸಿಂಹ ಕಾಣಿಸಿಕೊಂಡ್ರೆ, ನಿಮ್ಮ ಪ್ರತಿಷ್ಠೆ ಹೆಚ್ಚುತ್ತದೆ. ಯಶಸ್ಸು ಸಿಗುತ್ತದೆ ಎಂದರ್ಥ. ದೊಡ್ಡ ಅಧಿಕಾರಿಗಳ ಪರಿಚಯವಾಗಿ, ಅವರಿಂದ ನಿಮಗೆ ದೊಡ್ಡ ಹುದ್ದೆ ದೊರೆಯುವ ಸಾಧ್ಯತೆಯೂ ಇರುತ್ತದೆ.
ಕನಸ್ಸಿನಲ್ಲಿ ಕರಿ ನಾಗರ ಕಾಣಿಸುವುದು. ಹಿಂದೂ ಧರ್ಮದಲ್ಲಿ ನಾಗಕ್ಕೆ ದೇವರ ಸ್ಥಾನ ನೀಡಲಾಗಿದೆ. ಅಲ್ಲದೇ ಇದನ್ನ ಶಿವನ ಆಭರಣ ಅಂತಲೂ ಕರೆಯಲಾಗುತ್ತದೆ. ಆದ್ರೆ ಕರಿ ನಾಗ ಅಂದ್ರೆ ಜನ ಹೆದರುತ್ತಾರೆ. ಆದ್ರೆ ನಿಮಗೇನಾದ್ರೂ ಕನಸ್ಸಿನಲ್ಲಿ ಕರಿ ನಾಗ ಕಾಣಿಸಿಕೊಂಡ್ರೆ, ನಿಮ್ಮ ಲಕ್ ಖುಲಾಯಿಸಿತು ಅಂತಲೇ ಅರ್ಥ. ಇದರೊಂದಿಗೆ ನಿಮಗೆ ಕರಿ ನಾಗ ಕಚ್ಚಿದಂತೆ ಕನಸ್ಸು ಬಿದ್ರೆ, ನೀವು ಹಲವು ದಿನಗಳಿಂದ ಅಂದುಕೊಂಡಿದ್ದ ಕೆಲಸ ನೆರವೇರುತ್ತದೆ ಎಂದರ್ಥ.
ಕನಸ್ಸಿನಲ್ಲಿ ಮೀನು ಕಾಣಿಸುವುದು. ಕನಸ್ಸಿನಲ್ಲಿ ಮೀನು ಕಾಣಿಸಿದರೆ, ಆ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದ್ರೆ ನಿಮಗೇನಾದ್ರೂ ನೀರಿನಲ್ಲಿ ಈಜುತ್ತಿರುವ ಮೀನು ಕಾಣಿಸಿದ್ರೆ, ನಿಮಗೆ ಧನಲಾಭವಾಗಲಿದೆ ಎಂದರ್ಥ. ಅಲ್ಲದೇ ನಿಮಗೆ ಬರಬೇಕಾದ ದುಡ್ಡು ಬರುತ್ತದೆ. ನಿಮಗೆ ಯಾರಾದ್ರೂ ಸಾಲ ನೀಡುವುದಿದ್ದರೆ, ಅದು ಕೂಡ ವಾಪಸ್ ಬರುತ್ತದೆ ಎಂದರ್ಥ. ಇನ್ನು ನೀವು ಅವಿವಾಹಿತರಾಗಿದ್ದರೆ, ನಿಮಗೆ ಕಂಕಣ ಭಾಗ್ಯ ಕೂಡಿ ಬರಲಿದೆ ಎಂದರ್ಥ.
ಅದೇ ರೀತಿ ಕನಸ್ಸಿನಲ್ಲಿ ಇಲಿ ಕಂಡರೆ ಧನಲಾಭವಾಗುತ್ತದೆ ಎಂದರ್ಥ. ನಿಮ್ಮ ಕನಸ್ಸಿನಲ್ಲಿ ಬೆಕ್ಕು ಬಂದ್ರೆ, ನಿಮ್ಮಲ್ಲಿರುವ ಟ್ಯಾಲೆಂಟ್ ತೋರಿಸುವ ಸಮಯ ಬಂದಿದೆ ಎಂದರ್ಥ.