ಹಲವರು ನೀರು ಕುಡಿಯುವಾಗ ಅರ್ಜೆಂಟ್ಲ್ಲಿ ನಿಂತು, ಗಟಗಟನೇ ನೀರು ಕುಡಿದು ಹೋಗುತ್ತಾರೆ. ಆಗ ನಮ್ಮಲ್ಲಿರುವ ಕೆಲ ಹಿರಿಯರು ನಿಂತು ನೀರು ಕುಡಿಯಬಾರದು ಅಂತಾ ಗದರುತ್ತಾರೆ. ಅವರು ಗದರೋದು ನಿಮಗೆ ಸಿಟ್ಟು ತರಿಸಬಹುದು. ಆದ್ರೆ ಅದರ ಹಿಂದೆ ಒಂದು ಕಾರಣವಿದೆ. ಬರೀ ವೈಜ್ಞಾನಿಕವಾಗಿ ಅಲ್ಲದೇ, ಶಾಸ್ತ್ರದಲ್ಲೂ ಕೂಡ ನಿಂತು ನೀರು ಕುಡಿಯಬಾರದು ಅಂತಾ ಹೇಳಲಾಗುತ್ತದೆ. ಅದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..
ನೀವು ಪ್ರತಿದಿನ 3 ಲೀಟರ್ ನೀರು ಕುಡಿದ್ರೆ ಆರೋಗ್ಯ ಸುಧಾರಿಸುತ್ತದೆ ಅಂತಾ ನಿಂತು 3 ಲೀಟರ್ ನೀರು ಕುಡಿದ್ರೆ ಪ್ರಯೋಜನವಿಲ್ಲ. ಅಲ್ಲದೇ ನಿಂತು ನೀರು ಕುಡಿದರೆ ಸಂಧಿವಾತವಿದ್ದರೆ ಅದು ಎಂದಿಗೂ ಕಡಿಮೆಯಾಗುವುದಿಲ್ಲ. ಅಲ್ಲದೇ ಹಾಗೆ ನಿಂತು ಕುಡಿದ ನೀರು ನಮ್ಮ ದೇಹದಲ್ಲಿ ಪಸರಿಸದೇ, ಮೂತ್ರವಾಗಿ ಹೊರಬರುತ್ತದೆ. ಹಾಗೆ ನೀರು ಕುಡಿದು ಪ್ರಯೋಜನವಿಲ್ಲ. ಕುಳಿತು ಆರಾಮವಾಗಿ ನೀರು ಕುಡಿಯಬೇಕು. ಕುಳಿತು ಒಂದೊಂದು ಗುಟುಕು ನೀರು ಕುಡಿದರೆ, ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಹಾಗೆ ನೀರು ಕುಡಿದಾಗ ನಮಗೆ ಅದರ ಲಾಭ ಸಿಗುತ್ತದೆ ಅಂತಾ ನಾವು ಕೇಳಲ್ಪಟ್ಟಿದ್ದೇವೆ.
ಅದೇ ರೀತಿ ಶಾಸ್ತ್ರದಲ್ಲೂ ಕೂಡ ಕುಳಿತೇ ನೀರು ಕುಡಿಯಬೇಕು, ನಿಂತು ನೀರು ಕುಡಿಯಲೇಬಾರದು ಅಂತಾ ಹೇಳಿದ್ದಾರೆ. ವೇದಿಕ ರೂಲ್ಸ್ ಪ್ರಕಾರ, ನಿಂತು ನೀರು ಕುಡಿದರೆ, ರೋಗ ರುಜಿನಗಳನ್ನು ಬರಮಾಡಿಕೊಂಡಂತೆ ಅಂತಾ ಹೇಳಲಾಗುತ್ತದೆ. ಹಾಗಾಗಿ ಕುಳಿತುಕೊಂಡೇ ನೀರು ಕುಡಿಯಬೇಕು ಅಂತಾ ಹೇಳಲಾಗುತ್ತದೆ. ಆಯುರ್ವೇದದ ಪ್ರಕಾರ, ಕುಳಿತು ನೀರು ಕುಡಿದರೂ ಕೂಡ, ಬಿಸಿ ಮಾಡಿ ಆರಿಸಿದ ನೀರು ಕುಡಿಯಬೇಕು. ಅದನ್ನು ಬಿಟ್ಟು ಸಿಕ್ಕಾಪಟ್ಟೆ ಬಿಸಿ ಬಿಸಿ ನೀರು, ಅಥವಾ ಫ್ರಿಜ್ನಲ್ಲಿ ಇರಿಸಿದ ನೀರು ಕುಡಿಯಬಾರದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಇನ್ನು ದಿನಕ್ಕೆ 3 ಲೀಟರ್ ನೀರು ಕುಡಿಯಬೇಕು ಅಂತಾ ಹೇಳೋದು ನಿಜ. ಆದ್ರೆ, ನಿಮಗೆ ಅಷ್ಟು ನೀರು ಕುಡಿದು ಜೀರ್ಣಿಸಿಕೊಳ್ಳುವ ಶಕ್ತಿ ಇಲ್ಲದಿದ್ದಲ್ಲಿ, ಅಷ್ಟು ನೀರು ಕುಡಿಯಬೇಡಿ. ಬದಲಾಗಿ ನಿಮಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುವಷ್ಟು ಅಷ್ಟೇ ನೀರು ಕುಡಿಯಿರಿ. ಇಲ್ಲವಾದಲ್ಲಿ, ಹೊಟ್ಟೆ ಉಬ್ಬಿ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

