ಅಮೃತಾಂಜನ್ ಅನ್ನೋ ಶಾರ್ಟ್ ಮೂವಿ ಮೂಲಕ ಜನರ ಮನಗೆದ್ದ ಗೌರವ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಅಮೃತಾಂಜನ್ ಸಿನಿಮಾ ನೋಡಿ ಯೋಧರು ಕೂಡ ನನಗೆ ಕಾಲ್ ಮಾಡಿ, ವಿಶ್ ಮಾಡಿದ್ರು ಅಂತಾ ಗೌರವ್ ತಮ್ಮ ಖುಷಿ ಹಂಚಿಕೊಂಡಿದ್ದಾರೆ.
ಗೌರವ್‌ಗೆ ನಟನೆ ಮಾಡುವ ಅವಕಾಶ ಸಿಕ್ಕಾಗೆಲ್ಲ ಅದನ್ನ ಸದುಪಯೋಗ ಮಾಡಿಕೊಳ್ತಿದ್ರಂತೆ. ಅದು ಚಿಕ್ಕ ಪಾತ್ರವಾದ್ರೂ, ಅದನ್ನ ಅಚ್ಚುಕಟ್ಟಾಗಿ ನಿಭಾಯಿಸ್ತಿದ್ರಂತೆ. ಅಲ್ಲದೇ, ಚಿಕ್ಕ ಪುಟ್ಟ ಪಾತ್ರವನ್ನೂ ಬಿಡದೇ ಮಾಡುವ ಗೌರವ್ ಅವರಿಗೆ ಕಾಲೇಜು ದಿನಗಳಲ್ಲೇ ನಟನೆಯಲ್ಲಿ ಆಸಕ್ತಿ ಇತ್ತಂತೆ. ಇನ್ನು ನಮ್ಮನ್ನು ಪಾಸಿಟಿವ್ ಆಗಿ ಟ್ರೋಲ್ ಮಾಡಿರುವ ಟ್ರೋಲ್ ಪೇಜ್‌ಗಳಿಗೆ ಗೌರವ್ ಧನ್ಯವಾದ ಹೇಳಿದ್ದಾರೆ.
ಇನ್ನು ಅಮೃತಾಂಜನ್ ಶಾರ್ಟ್ ಮೂವಿ ಮಾಡಿದ ಬಳಿಕ, ಒಂದು ದಿನದಲ್ಲೇ ಮಿಲಿಯನ್ ವೀವ್ಸ್ ಬಂದು, ಸಖತತ್ ಫೇಮಸ್ ಆಗಿದ್ರೆ ಈ ಮೂವಿ ಸ್ಟಾರ್ಸ್. ಆಗ ಬಾರ್ಡರ್‌ನಲ್ಲಿರುವ ಯೋಧರು ಗೌರವ್‌ಗೆ ಕಾಲ್ ಮಾಡಿ, ವಿಶ್ ಮಾಡಿದ್ರು ಅಂತಾ ಹೇಳುವ ಗೌರವ್ ಹೆಮ್ಮೆ ಪಟ್ಟಿದ್ದಾರೆ.