Saturday, April 19, 2025

Latest Posts

ಮನೆಯಲ್ಲೇ ತಯಾರಿಸಿ ಹೊಟೇಲ್ ಶೈಲಿಯ ಪನೀರ್ ಬಟರ್ ಮಸಾಲಾ..

- Advertisement -

ಪನೀರ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..? ನಾನ್‌ವೆಜ್ ತಿನ್ನದವರಿಗೆ ಪನೀರ್ ಒಂದು ಬೆಸ್ಟ್ ರಿಪ್ಲೇಸ್‌. ಆದ್ರೆ ನಾನ್‌ವೆಜ್‌ ತಿನ್ನುವವರೂ ಕೂಡ ಪನೀರನ್ನ ಇಷ್ಟಪಡ್ತಾರೆ. ಹಾಗಾಗಿ ನಾವಿಂದು ಪನೀರ್ ರೆಸಿಪಿಯನ್ನ ಹೇಳಲಿದ್ದೇವೆ. ಇಂದು ನಾವು ಬಟರ್ ಪನೀರ್ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಪನೀರ್, 4 ಸ್ಪೂನ್ ಎಣ್ಣೆ, 4 ಸ್ಪೂನ್ ಬೆಣ್ಣೆ, ಒಂದು ಪಲಾವ್ ಎಲೆ, 4 ಲವಂಗ, 2 ಏಲಕ್ಕಿ, ಎರಡು ಉದ್ದಕ್ಕೆ ಹೆಚ್ಚಿದ ಈರುಳ್ಳಿ, ನಾಲ್ಕು ತುಂಡು ಬೆಳ್ಳುಳ್ಳಿ, ಚಿಕ್ಕ ತುಂಡು ಹಸಿ ಶುಂಠಿ, ಎರಡು ಟೊಮೆಟೋ, 10 ಕಾಜು, 2 ಹಸಿಮೆಣಸು, ಎರಡು ಸ್ಪೂನ್ ಕ್ರೀಮ್, ಅರ್ಧ ಸ್ಪೂನ್ ಅರಿಶಿನ, ಒಂದು ಸ್ಪೂನ್ ಖಾರದ ಪುಡಿ, ಒಂದು ಸ್ಪೂನ್ ಜೀರಿಗೆ ಪುಡಿ, ಒಂದು ಸ್ಪೂನ್ ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಒಂದು ಸ್ಪೂನ್ ಕಸೂರಿ ಮೇಥಿ, ಕೊಂಚ ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಒಂದು ಪ್ಯಾನ್‌ಗೆ ಎಣ್ಣೆ, ಬೆಣ್ಣೆ, ಪಲಾವ್ ಎಲೆ, ಏಲಕ್ಕಿ, ಲವಂಗ ಹಾಕಿ ಕೊಂಚ ಹುರಿಯಿರಿ. ನಂತರ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಹುರಿಯಿರಿ. ನಂತರ ಶುಂಠಿ ಮತ್ತು ಟೊಮೆಟೋ, ಕಾಜು ಹಾಕಿ ಹುರಿದು, 10 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಈ ರೆಡಿ ಮಾಡಿರುವುದನ್ನ ತಣಿಯಲು ಬಿಟ್ಟು, ನಂತರ ಸ್ಪೂತ್ ಪೇಸ್ಟ್ ಆಗುವಷ್ಟು ರುಬ್ಬಿ. ಈಗ ಗ್ರೇವಿ ರೆಡಿ.

ಈಗ ಪ್ಯಾನ್‌ಗೆ ಎಣ್ಣೆ, ಬೆಣ್ಣೆ, ಹಸಿಮೆಣಸು ಹಾಕಿ ಹುರಿಯಿರಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹುರಿದುಕೊಂಡು, ಅದಕ್ಕೆ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ ಪುಡಿ , ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಈಗ ಗ್ರೇವಿ ಸೇರಿಸಿ, ಅದರ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. ನಂತರ ಒಂದು ಕಪ್ ನೀರು ಸೇರಿಸಿ, ಮುಚ್ಚಳ ಮುಚ್ಚಿ, ಎರಡು ನಿಮಿಷ ಮಂದ ಉರಿಯಲ್ಲಿ ಬೇಯಿಸಿ.  ನಂತರ ಇದಕ್ಕೆ ಕ್ರೀಮ್ ಸೇರಿಸಿ,  ಪನೀರ್ ಕೂಡ ಸೇರಿಸಿ. ಮುಚ್ಚಳ ಮುಚ್ಚಿ ಮಂದ ಉರಿಯಲ್ಲಿ ಐದು ನಿಮಿಷ ಬೇಯಿಸಿ. ಕೊನೆಗೆ ಕಸೂರಿ ಮೇಥಿ, ಸೇರಿಸಿ ಗ್ಯಾಸ್ ಆಫ್ ಮಾಡಿ. ಈಗ ಕೊತ್ತೊಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿಡಿ. ಹೀಗೆ ಮಾಡಿದ್ರೆ, ಇದನ್ನ ಸರ್ವ್ ಮಾಡುವಾಗ, ಘಮ ಘಮ ಪರಿಮಳ ಬರುತ್ತದೆ.

- Advertisement -

Latest Posts

Don't Miss