ಪನೀರ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..? ನಾನ್‌ವೆಜ್ ತಿನ್ನದವರಿಗೆ ಪನೀರ್ ಒಂದು ಬೆಸ್ಟ್ ರಿಪ್ಲೇಸ್. ಆದ್ರೆ ನಾನ್‌ವೆಜ್ ತಿನ್ನುವವರೂ ಕೂಡ ಪನೀರನ್ನ ಇಷ್ಟಪಡ್ತಾರೆ. ಹಾಗಾಗಿ ನಾವಿಂದು ಪನೀರ್ ರೆಸಿಪಿಯನ್ನ ಹೇಳಲಿದ್ದೇವೆ. ಇಂದು ನಾವು ಪನೀರ್ ಮಂಚೂರಿ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಪನೀರ್, ಎರಡು ಸಣ್ಣಗೆ ಹೆಚ್ಚಿದ ಈರುಳ್ಳಿ, ಅರ್ಧ ಕಪ್ ಮೈದಾ, ಎರಡು ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್, ಒಂದು ಸ್ಪೂನ್ ಖಾರದ ಪುಡಿ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಹಸಿ ಶುಂಠಿ, ಎರಡು ಸ್ಪೂನ್ ಟೋಮೆಟೋ ಸಾಸ್, ಒಂದು ಸ್ಪೂನ್ ಸೋಯಾ ಸಾಸ್, ಒಂದು ಸ್ಪೂನ್ ಚಿಲ್ಲಿ ಸಾಸ್, ಒಂದು ಸ್ಪೂನ್ ವಿನೇಗರ್, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಮೈದಾ, ಕಾರ್ನ್ ಫ್ಲೋರ್, ಉಪ್ಪು, ಖಾರದ ಪುಡಿ, ನೀರು ಹಾಕಿ, ಬಜ್ಜಿ ಹಿಟ್ಟಿಗಿಂತಲೂ ತೆಳ್ಳಗಿನ ಬ್ಯಾಟರ್ ರೆಡಿ ಮಾಡಿ. ಅದರಲ್ಲಿ ಪನೀರ್ ಹಾಕಿ, ಹತ್ತು ನಿಮಿಷ ಬಿಟ್ಟು ಅದನ್ನು ಎಣ್ಣೆಯಲ್ಲಿ ಕರಿಯಿರಿ. ಪನೀರ್ ಬಜ್ಜಿ ರೆಡಿಯಾದ ಮೇಲೆ, ಅದಕ್ಕೆ ಬೇಕಾದ ಸಾಸ್ ತಯಾರಿಸಿ. ಪ್ಯಾನ್‌ನಲ್ಲಿ ಒಂದು ಸ್ಪೂನ್ ಎಣ್ಣೆ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಹಸಿ ಶುಂಠಿ, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಟೋಮೆಟೋ ಸಾಸ್, ಸೋಯಾ ಸಾಸ್, ಚಿಲ್ಲಿ ಸಾಸ್, ವಿನೇಗರ್, ಉಪ್ಪು, ಖಾರದ ಪುಡಿ, ಕರಿದ ಪನೀರ್ ಮತ್ತು ಸ್ಪ್ರಿಂಗ್ ಆನಿಯನ್ ಸೇರಿಸಿ, ಮಿಕ್ಸ್ ಮಾಡಿ. ಈಗ ಕರಿದ ಪನೀರ್ ಪಕೋಡಾ ಹಾಕಿ ಮಿಕ್ಸ್ ಮಾಡಿದ್ರೆ ಪನೀರ್ ಮಂಚೂರಿ ರೆಡಿ.