Friday, December 5, 2025

Latest Posts

ರಾಕ್ಷಸರು ಶ್ರೀ ವಿಷ್ಣುವನ್ನು ಏಕೆ ದ್ವೇಷಿಸುತ್ತಿದ್ದರು..? ಶಿವನನ್ನಷ್ಟೇ ಏಕೆ ಪೂಜಿಸುತ್ತಿದ್ದರು..?

- Advertisement -

ನಾವು ಹಿಂದೂ ಧರ್ಮದ ಪುರಾಣ ಕಥೆಗಳನ್ನು ಕೇಳಿದಾಗ, ಅದರಲ್ಲಿ ಶಿವ ಬರೀ ತನ್ನ ಸಾತ್ವಿಕ ಭಕ್ತರಿಗಷ್ಟೇ ಅಲ್ಲದೇ, ರಾಕ್ಷಸ ಭಕ್ತರಿಗೂ ಒಲಿದು ವರ ನೀಡಿದ್ದರ ಬಗ್ಗೆ ನಾವು ಕೇಳಿದ್ದೇವೆ. ಇದರೊಂದಿಗೆ ಶಿವ ವರ ಕೊಟ್ಟು ಮಾಡಿಕೊಂಡ ತಪ್ಪನ್ನು ಸರಿಪಡಿಸಲು ಯಾವಾಗಲೂ ವಿಷ್ಣುವೇ ಬರುತ್ತಿದ್ದನೆಂಬುದನ್ನೂ ನಾವು ಕೇಳಿದ್ದೇವೆ. ಹಾಗಾಗಿ ಇಂದು ನಾವು ರಾಕ್ಷಸರಿಗೆ ಶಿವನನ್ನು ಕಂಡರೆ ಪ್ರೀತಿ, ಭಕ್ತಿ ಮತ್ತು ವಿಷ್ಣುವನ್ನು ಕಂಡರೆ, ಕೋಪವೇಕೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಶಂಭೋ ಅಂದಕೂಡಲೇ ಒಲಿಯುವ ದೇವ ಭೋಲೇನಾಥ. ಹಾಗಾಗಿಯೇ ರಾಕ್ಷಸರು ಶಿವನ ಮೋರೆ ಹೋಗಿ ತಮಗೆ ಬೇಕಾದ ವರವನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಶ್ರೀ ವಿಷ್ಣುವನ್ನು ಒಲಿಸಿಕೊಳ್ಳಲು ಒಂದು ಜನ್ಮ ಸಾಕಾಗುವುದಿಲ್ಲ ಅನ್ನೋ ಮಾತಿದೆ. ಹಾಗಾಗಿ ರಾಕ್ಷಸರು ಶ್ರೀ ವಿಷ್ಣುವನ್ನ ಪೂಜಿಸುತ್ತಿರಲಿಲ್ಲ. ಇಷ್ಟೇ ಅಲ್ಲದೇ, ಶಿವ ರಾಕ್ಷಸರಿಗೆ ವರದಾನ ನೀಡದಿದ್ದಲ್ಲಿ, ಅವರ ಉಪಟಳ ಹೆಚ್ಚಾಗುತ್ತಿತ್ತು. ಜನ ಬದುಕಲು ಸಾಧ್ಯವಾಗುತ್ತಿರಲಿಲ್ಲ.

ಹಾಗಾಗಿ ರಾಕ್ಷಸರಿಗೆ ಮೊದಲು ಶಿವ ವರ ನೀಡಿ, ನಂತರ ಅವರನ್ನು ವಧಿಸಲು ಶ್ರೀ ವಿಷ್ಣು ಹಲವು ಅವತಾರಗಳನ್ನೆತ್ತಿ ಬರುತ್ತಿದ್ದ. ಕೂರ್ಮಾವತಾರ, ನರಸಿಂಹ ಅವತಾರ, ವರಾಹ ಅವತಾರವನ್ನೆತ್ತಿದ ವಿಷ್ಣು ಹಲವು ರಾಕ್ಷಸರ ಸಂಹಾರ ಮಾಡಿದ್ದಾನೆ. ಈ ಕಾರಣಕ್ಕೆ ರಾಕ್ಷಸರು ಶ್ರೀ ವಿಷ್ಣುವನ್ನು ಪೂಜಿಸುತ್ತಿರಲಿಲ್ಲ..

 

 

- Advertisement -

Latest Posts

Don't Miss