ನಟಿ ಪಾಯಲ್ ಚಂಗಪ್ಪಾ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಸ್ಯಾಂಡಲ್ವುಡ್ನ ಎಲ್ಲ ನಟರ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ತಮ್ಮ ಫೇವರಿಟ್ ನಟಿ ಯಾರು ಅಂತಲೂ ಹೇಳಿದ್ದಾರೆ.
ನನಗೆ ಸಿನಿಮಾದಲ್ಲಿ ಸೆಲೆಕ್ಟ್ ಆಗೋಕ್ಕೆ ಅಷ್ಟಾಗಿ ಕಷ್ಟಾ ಆಗಿರ್ಲಿಲ್ಲಾ. ಬಟ್ ಅಮೃತಾಂಜನ್ ಸಿನಿಮಾ ರಿಹರ್ಸಲ್ಗೆ ತುಂಬಾ ಕಷ್ಟಪಟ್ಟಿದ್ವಿ. ಕೊರೊನಾ ಇದ್ರೂ, ಕಾನ್ಫರೆನ್ಸ್ ಕಾಲ್ ಮಾಡಿ, ಡೈಲಾಗ್ ಪ್ರಾಕ್ಟೀಸ್ ಮಾಡ್ತಿದ್ವಿ. ತಮಾಷೆ ಮಾಡೋದು, ಸುಮ್ಮ ಸುಮ್ಮನೆ ಮೊಬೈಲ್ ಮುಟ್ಟೋದೆಲ್ಲಾ ಮಾಡ್ತಿರ್ಲಿಲ್ಲಾ. ಹಾಗೆ ಏಕಾಗೃತೆಯಿಂದ ಕಲಿತಿದ್ದಕ್ಕೆ, ಇಂದು ಎರಡು ಮಿಲಿಯನ್ ವೀವ್ಸ್ ಬಂದಿದೆ ಅಂತಾರೆ ಪಾಯಲ್.
ಪುನೀತ್ ರಾಜಕುಮಾರ್ ಬಗ್ಗೆ ಮಾತನಾಡಿದ ಪಾಯಲ್, ಪುನೀತ್ ಸರ್ ಆ್ಯಕ್ಟಿಂಗ್ಗಿಂತ ಅವ್ರನ್ನ ನೋಡಿದ್ರೆ, ಓರ್ವ ಉತ್ತಮ ಮನುಷ್ಯಳಾಗಬೇಕು ಎನ್ನಿಸುತ್ತೆ ಅಂತಾರೆ ಪಾಯಲ್. ಸಲಗ ಇವೆಂಟ್ನಲ್ಲೇ ನಾನು ಕೊನೆಯದಾಗಿ ಅವ್ರನ್ನ ನೋಡಿದ್ದು, ಆದ್ರೆ ಮಾತನಾಡಿಸೋಕ್ಕೆ ಆಗಿರಲಿಲ್ಲ. ಅದಾಗಿ ಒಂದು ವಾರಕ್ಕೆ ಅಪ್ಪು ಸರ್ ತೀರಿಕೊಂಡು ಬಿಟ್ರು.
ಇನ್ನು ಅವ್ರು ಆಲ್ ರೌಂಡರ್ ಅನ್ನೋದು ಗೊತ್ತಿತ್ತು, ಆದ್ರೆ ಅವ್ರಿಗೆ ಇಷ್ಟೊಳ್ಳೆ ಮನ್ಸಿದೆ. ಅವ್ರು ಇಷ್ಟೆಲ್ಲ ಜನರಿಗೆ ಅನ್ನದಾತರಾಗಿದ್ರು ಅನ್ನೋದು ಅವರು ತೀರಿಹೋದ ಬಳಿಕ ಗೊತ್ತಾಯ್ತು. ಅವ್ರು ತೀರಿಕೊಂಡಾಗ ನಾನು ಡಬ್ಬಿಂಗ್ನಲ್ಲಿದ್ದೆ. ಸುದ್ದಿ ತಿಳಿದ ತಕ್ಷಣ ನಾನು ಕೆಲಸವನ್ನ ಸ್ಟಾಪ್ ಮಾಡಿದ್ವಿ, ಆ ಕ್ಷಣ ನಮ್ಮವರೇ ಯಾರೋ ತೀರಿಹೋದರು ಅನ್ನೋ ರೀತಿ ಅನ್ನಿಸಿತ್ತು. ಒಂದೆರಡು ದಿನ ನಾವು ಕೆಲಸಾನೇ ಮಾಡಿರಲಿಲ್ಲ. ಅಷ್ಟು ಡಿಸ್ಟರ್ಬ್ ಆಗಿದ್ವಿ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ ಪಾಯಲ್.
ಇನ್ನು ನಾನು ಅಷ್ಟೋಂದು ದೊಡ್ಡ ಆ್ಯಕ್ಟರ್ ಅಲ್ಲದ ಕಾರಣ, ನಾನು ಸ್ಕ್ರಿಪ್ಟ್ ಉತ್ತಮವಾಗಿದ್ರೆ, ಆ ಸಿನಿಮಾ ಮಾಡೋಕ್ಕೆ ಒಪ್ಪಿಕೊಳ್ತೇನೆ. ಇನ್ನು ನನಗೆ ಯಶ್ ಸರ್ ಜೊತೆ ಆ್ಯಕ್ಟಿಂಗ್ ಮಾಡ್ಬೇಕು ಅಂತಾ ಇಷ್ಟ. ಅಷ್ಟೇ ಅಲ್ಲದೇ, ಸುದೀಪ್ ಸರ್, ದರ್ಶನ್ ಸರ್ ಹೀಗೆ ಎಲ್ಲ ಸ್ಟಾರ್ಸ್ ಜೊತೆನೂ ನಟನೆ ಮಾಡ್ಬೇಕು ಅಂತಿಷ್ಟ. ಯಶ್ ಸರ್ ಮ್ಯಾನರಿಸಂ, ಕಥೆ ಆಯ್ದುಕೊಳ್ಳುವ ರೀತಿ ಇಷ್ಟ. ಇನ್ನು ನಾನು ಬಿಗ್ಬಾಸ್ ನೊಡ್ತಾ ಇದ್ದಿದ್ದೇ ಸುದೀಪ್ ಸರ್ಗೋಸ್ಕರ. ದರ್ಶನ್ ಸರ್ಗೆ ಇರೋ ಫ್ಯಾನ್ಸ್ ಇಂದಾನೇ ಅವರೆಷ್ಟು ಫೇಮಸ್ ಅನ್ನೋದು ಗೊತ್ತಾಗತ್ತೆ. ಆದ್ರೆ ನಾನು ಅವರ ಹೈಟ್ಗೆ ಕುಳ್ಳಿಯಾಗ್ತೇನೆ ಅಂತಾ ಪಾಯಲ್ ನಗೆ ಬೀರಿದ್ದಾರೆ.