‘ಮಂಗಳಮುಖಿ ಪಾತ್ರ ಮಾಡಬೇಕು ಅನ್ನೋದು ನನ್ನ ಆಸೆ’

ಉಗ್ರಂ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ, ಉಗ್ರಂ ಮಂಜು ಅಂತಾನೇ ಫೇಮಸ್ ಆಗಿರುವ ಮಂಜು ತೂತು ಮಡಿಕೆ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಪಾತ್ರವೇನು..? ಶೂಟಿಂಗ್ ವೇಳೆ ತಮಗಾದ ಅನುಭವವೇನು ಅನ್ನೋ ಬಗ್ಗೆ ಉಗ್ರಂ ಮಂಜು ಹೇಳಿದ್ದಾರೆ.

ತೂತು ಮಡಿಕೆ ಸಿನಿಮಾದಲ್ಲಿ ಮಂಜು ಟಾಮ್ ಅನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಡೈರೆಕ್ಟರ್ ಚಂದ್ರಕೀರ್ತಿ, ಈ ಪಾತ್ರಕ್ಕೆ ಉಗ್ರಂ ಮಂಜು ಅವರನ್ನು ಸೆಲೆಕ್ಟ್ ಮಾಡಿದ್ದೇನೆ ಅಂದಾಗ, ಪ್ರಮೋದ್ ಶೆಟ್ಟಿಯವರು ನಮ್ಮ ಹುಡುಗ ನಾನು ಮಾತಾಡ್ತೇನೆ ಎಂದು ಹೇಳಿ, ಮಂಜು ಅವರಿಗೆ ಈ ಪಾತ್ರದ ಆಫರ್ ಕೊಟ್ಟಿದ್ದರು. ಈ ಸಿನಿಮಾದಲ್ಲಿ ಟಾಮ್ ಅಡ್ಡದಾರಿ ಹಿಡಿದು ದುಡ್ಡು ಸಂಪಾದನೆ ಮಾಡುವ ವ್ಯಕ್ತಿ.

ಇನ್ನು ನಿಮಗೆ ಇಂಥದ್ದೇ ಪಾತ್ರ ಬೇಕು ಅಂತೇನಾದ್ರೂ ಇದೆಯಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಮಂಜು, ಪ್ರತಿದಿನ ಬಿರಿಯಾನಿ ತಿನ್ನೋಕ್ಕೆ ಆಗತ್ತಾ..? ಇಡ್ಲಿ, ದೋಸೆ, ಚಪಾತಿ, ಚಿತ್ರಾನ್ನ ಹೀಗೆ ವೆರೈಟಿ ತಿಂದ್ರೆನೇ ಮಜಾ. ಹಾಗಾಗಿ ನನಗೆ ದೊಡ್ಡ ದೊಡ್ಡ ಸಿನಿಮಾಗಳಲ್ಲೇ ಅಭಿನಯಿಸಬೇಕು. ಒಂದೇ ರೀತಿಯ ಪಾತ್ರ ಮಾಡಬೇಕು ಅನ್ನೋ ಆಸೆ ಇಲ್ಲ. ಬದಲಾಗಿ, ಬೇರೆ ಬೇರೆ ಪಾತ್ರದಲ್ಲಿ ತೊಡಗಿಕೊಳ್ಳಬೇಕು ಅನ್ನೋ ಆಸೆ ಇದೆ ಅಂತಾ ಹೇಳಿದ್ರು.

ಮಂಜು ಕರ್ಮಣ್ಯವಾಧಿಕಾರಸ್ಥೆ, ಬೆಂಕಿ, ಕಬ್ಜ ಸೇರಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.  ಮಂಜು ಅವರಿಗೆ ಮಂಗಳಮುಖಿ ಪಾತ್ರ ಮಾಡೋಕ್ಕೆ ತುಂಬ ಇಷ್ಟವಂತೆ. ಆ ಅವಕಾಶವೂ ಸಿಕ್ಕಿತ್ತು, ಆದ್ರೆ ಆ ಪಾತ್ರವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಅದರ ಅವಕಾಶ ಕೈತಪ್ಪಿ ಹೋಯಿತು ಅಂತಾ ಹೇಳಿದ್ರು. ಅಲ್ಲದೇ ನನಗೆ ದಿನಾ ಬೆಳಿಗ್ಗೆ ಶೂಟಿಂಗ್ ಹೋಗ್ಬೇಕು, ಮೇಕಪ್ ಹಾಕೋಬೇಕು ಅನ್ನೋ ಆಸೆ ಇದೆ ಅಂತಾರೆ ಮಂಜು.

 

About The Author