Friday, December 5, 2025

Latest Posts

ನಿಜವಾದ ಭಕ್ತಿ ಎಂದರೇನು..? ಈ ಬಗ್ಗೆ ಶ್ರೀರಾಮ ಏನೆಂದು ಹೇಳಿದ್ದಾನೆ..?

- Advertisement -

ಹಲವರಿಗೆ ದೇವರ ಮೇಲೆ ಭಕ್ತಿ ಇರುತ್ತದೆ. ಆದ್ರೆ ಎಲ್ಲರಿಗೂ ಇರುವುದು ನಿಜವಾದ ಭಕ್ತಿಯೇ ಅೞತತಾ ಹೇಳಲಾಗುವುದಿಲ್ಲ. ಆದ್ರೆ ನಮ್ಮ ಧರ್ಮ ಗ್ರಂಥದಲ್ಲಿ ನಿಜವಾದ ಭಕ್ತಿ ಎಂದರೇನು..? ಇಂಥ ಭಕ್ತಿಗಷ್ಟೇ ದೇವರು ಮೆಚ್ಚುತ್ತಾನೆಂದು ಉಲ್ಲೇಖಿಸಲಾಗಿದೆ. ಹಾಗಾದ್ರೆ ನಿಜವಾದ ಭಕ್ತಿ ಎಂದರೇನು ಅಂತಾ ತಿಳಿಯೋಣ ಬನ್ನಿ..

ರಾಮ ಶಬರಿಯನ್ನು ಭೇಟಿ ಮಾಡಿದಾಗ, ಶಬರಿ ರಾಮನನ್ನು ಕುರಿತು, ಶ್ರೀರಾಮ ನಿನ್ನನ್ನು ಭಕ್ತಿಯಿಂದ ಪೂಜೆ ಮಾಡಲು ನನ್ನ ಬಳಿ ಏನೂ ಇಲ್ಲ. ನಿನ್ನನ್ನು ಭಕ್ತಿ ಮಾಡುವ ಪರಿಯೂ ನನಗೆ ಗೊತ್ತಿಲ್ಲ ಎಂದಳಂತೆ. ಆಗ ಶ್ರೀರಾಮ, ನನ್ನ ಮೇಲೆ ನಿಜವಾದ ಭಕ್ತಿ ಇದ್ದವರು ಹೀಗೆ ಮಾಡುತ್ತಾರೆಂದು ಹೇಳುತ್ತಾ, ಭಕ್ತಿಯ ಅರ್ಥವನ್ನು ವಿವರಿಸುತ್ತಾನೆ.

ಸತ್ಸಂಗದಲ್ಲಿ ಭಾಗವಹಿಸಿ, ಅದರ ಉಪಯೋಗ ಪಡೆದುಕೊಳ್ಳುವವನು ನನ್ನ ನಿಜವಾದ ಭಕ್ತ. ಸತ್ಸಂಗಕ್ಕೆ ಹೋದಾಗ, ಅಲ್ಲಿ ದೇವರ ಕಥೆಗಳನ್ನ ಹೇಳಲಾಗುತ್ತದೆ. ಜೀವನ ಪಾಠ ಹೇಳಲಾಗುತ್ತದೆ. ಭಕ್ತಿಗೀತೆಗಳನ್ನು ಹಾಡಲಾಗುತ್ತದೆ. ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅವಕಾಶ ಅಲ್ಲಿ ಸಿಗುತ್ತದೆ. ಹೀಗೆ ಭಕ್ತಿಯ ದಾರಿಯಲ್ಲಿ ನಡೆಯುವ ಸತ್ಸಂಗದ ಸದಸ್ಯ ನನ್ನ ನಿಜವಾದ ಭಕ್ತನಾಗಿರುತ್ತಾನೆ ಅಂತಾನೆ ರಾಮ.

ಎರಡನೇಯದಾಗಿ ಯಾರು ನನ್ನ ಜೀವನ ಚರಿತ್ರೆ ಕೇಳುತ್ತಾರೋ ಅವರು ನನ್ನ ನಿಜವಾದ ಭಕ್ತರು. ನನ್ನ ಚರಿತ್ರೆ ಕೇಳಿ, ಅವರಲ್ಲಿ ಉತ್ತಮ ಗುಣಗಳು ಬರುವುದಲ್ಲದೇ, ಅದನ್ನು ಅವರು ಅಳವಡಿಸಿಕೊಂಡಲ್ಲಿ ಅವರಿಗೆ ಈ ಜನ್ಮದಿಂದ ಮೋಕ್ಷ ಸಿಗುತ್ತದೆ. ಅಲ್ಲದೇ, ಅವನು ರಾಮನಾಮ ಜಪಿಸುವುದರಿಂದ, ಕೋಟಿ ಶ್ಲೋಕ ಜಪಿಸಿದ ಫಲ ಪ್ರಾಪ್ತಿಯಾಗುತ್ತದೆ ಅಂತಾನೆ ಶ್ರೀರಾಮ.

ಮೂರನೇಯದಾಗಿ ಗುರುವನ್ನು ಗೌರವಿಸುವನು ನನ್ನ ನಿಜವಾದ ಭಕ್ತ. ಯಾಕಂದ್ರೆ ದೇವರು, ಅಮ್ಮ ಅಪ್ಪನ ನಂತರ ಮೂರನೇ ಅತ್ಯುತ್ತಮ ಸ್ಥಾನ, ದೈವಿಕ ಸ್ಥಾನವಿರುವುದು ಗುರುವಿಗೆ. ಇಂಥ ಗುರುವನ್ನು ಗೌರವಿಸುವನು, ಅವರು ಹೇಳಿದ ಜೀವನ ಪಾಠ ಕೇಳಿ, ಅದನ್ನು ಅಳವಡಿಸಿಕೊಳ್ಳುವವನು ನನ್ನ ನಿಜವಾದ ಭಕ್ತನೆಂದನಂತೆ ರಾಮ.

ನಾಲ್ಕನೇಯದಾಗಿ ಶುದ್ಧ ಭಕ್ತಿ ಮಾಡುವವರು. ಇದರ ಅರ್ಥ, ನನ್ನನ್ನು ಶುದ್ಧ ಮನಸ್ಸಿನಿಂದ ಪ್ರೀತಿಸುವವರು. ಪೂಜಿಸುವರು. ಯಾವ ಮನುಷ್ಯ ಬರೀ ಹೊರಗಿನಿಂದಷ್ಟೇ ನನ್ನನ್ನು ಪ್ರಾರ್ಥಿಸಿ, ಪೂಜಿಸಿ, ಮನಸ್ಸಿನಲ್ಲಿ ಬೇರೆಯವರ ಬಗ್ಗೆ ಅಸೂಯೆ ಪಡುತ್ತಿರುತ್ತಾನೆ. ಇನ್ನೊಬ್ಬರಿಗೆ ಶಾಪ ಹಾಕುತ್ತಿರುತ್ತಾನೆ. ಇಂಥವರು ಶ್ರೀರಾಮನ ಪರಮ ಭಕ್ತರಾಗಲು ಸಾಧ್ಯವಿಲ್ಲ. ನನ್ನ ಭಕ್ತರಾದವರು, ಯಾವಾಗಲೂ ಮನಸ್ಸಿನಲ್ಲಿ ನಿಷ್ಕಲ್ಮಶ ಪ್ರೀತಿ ತೋರುತ್ತಾರೆ. ಭಕ್ತಿ ತೋರುತ್ತಾರೆ ಎಂದನಂತೆ ರಾಮ.

ಐದನೇಯದಾಗಿ ಶ್ರೀರಾಮ ಜಯರಾಮ ಜಯ ಜಯರಾಮ ಎನ್ನುವ ರಾಮ ಮಂತ್ರವನ್ನು ಯಾರು ಭಕ್ತಿಯಿಂದ ಜಪಿಸುತ್ತಾರೋ, ಅವರು ನನ್ನ ನಿಜವಾದ ಭಕ್ತರು. ಈ ಮಂತ್ರಪಠಣೆಯಿಂದ ಅಂಥ ಭಕ್ತರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಪರಮ ಶಿವನೇ ಈ ಬಗ್ಗೆ ಹೇಳಿದ್ದು, ಶ್ರೀ ರಾಮ ರಾಮ ರಾಮೇತಿ, ರಮೇ ರಾಮೇ ಮನೋರಮೇ, ಸಹಸ್ರನಾಮ ತತ್ತುಲ್ಯಮ್ ರಾಮನಾಮ ವರಾನನೇ ಎಂಬ ಮಾತಿನಂತೆ. ರಾಮ ನಾಮ ಜಪಕ್ಕೆ ಸಮನಾದ ಶ್ಲೋಕ ಮತ್ತೊಂದಿಲ್ಲ. ಹಾಗಾಗಿ ರಾಮನಾಮ ಜಪವನ್ನು ಭಕ್ತಿಯಿಂದ ಮಾಡುವವನು ನನ್ನ ನಿಜವಾದ ಭಕ್ತನೆನ್ನುತ್ತಾನೆ ಶ್ರೀರಾಮ.

- Advertisement -

Latest Posts

Don't Miss