Saturday, July 5, 2025

Latest Posts

ಸಬ್ಬಸಿಗೆ ಸೊಪ್ಪಿದ್ದರೆ ಸಾಕು, ರುಚಿ ರುಚಿಯಾದ ಸಿಂಪಲ್ ಸಾರು ರೆಡಿ ಮಾಡಬಹುದು..

- Advertisement -

ಸಬ್ಬಸಿಗೆ ಸೊಪ್ಪು, ಮೆಂತ್ಯೆ ಸೊಪ್ಪು, ಪಾಲಕ್ ಸೊಪ್ಪು ಯಾವುದೇ ಸೊಪ್ಪಿರಲಿ. ಅದರಿಂದ ಸಿಂಪಲ್ ಆಗಿ ಸಾರನ್ನ ತಯಾರು ಮಾಡಬಹುದು. ಇದಕ್ಕೆ ಸಾಂಬಾರ್ ಪುಡಿಯಾಗಲಿ, ತೆಂಗಿನ ಕಾಯಿ ಮಸಾಲೆಯಾಗಲಿ ಬೇಕಾಗಿಲ್ಲ. ಬದಲಾಗಿ ಬೇಳೆಯೊಂದಿಗೆ ಈ ಸಾರನ್ನ ಬೇಗ ತಯಾರಿಸಬಹುದು. ಇದನ್ನ ಮಂಗಳೂರು ಬದಿ ಬೋಳು ಕೊದ್ಲು ಎಂದು ಕರೆಯಲಾಗತ್ತೆ. ಹಾಗಾದ್ರೆ ಸಬ್ಬಸಿಗೆ ಸೊಪ್ಪಿನ ಬೋಳು ಕೊದ್ಲು ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ:  ಸಬ್ಬಸಿಗೆ ಸೊಪ್ಪು, ಅರ್ಧ ಕಪ್ ತೊಗರಿ ಬೇಳೆ, ಅರಿಶಿನ ಪುಡಿ, ಒಂದು ಹಸಿಮೆಣಸು, ಕೊಂಚ ಹುಣಸೆಹಣ್ಣು, ಒಂದು ಚಿಕ್ಕ ತುಂಡು ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಕೊಂಚ ಕೊತ್ತಂಬರಿ ಸೊಪ್ಪು. ಒಗ್ಗರೆಣೆಗೆ 10 ಬೆಳ್ಳುಳ್ಳಿ ಎಸಳು, ಎರಡು ಸ್ಪೂನ್ ಎಣ್ಣೆ, ಜೀರಿಗೆ, ಕರಿಬೇವು, ಒಣ ಮೆಣಸು, ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ.

ಮೊದಲು ಸಬ್ಬಸಿಗೆ ಸೊಪ್ಪನ್ನ ಎಣ್ಣೆ ಅಥವಾ ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಒಂದು ಕುಕ್ಕರ್‌ನಲ್ಲಿ ಬೇಳೆ ಬೇಯಿಸಿ. ಹೀಗೆ ಬೇಳೆ ಬೇಯಿಸುವಾಗ ಅದರ ಜೊತೆ, ಒಂದು ಸ್ಪೂನ್ ಎಣ್ಣೆ, ಚಿಟಿಕೆ ಅರಿಶಿನ ಪುಡಿ, ಬೆಲ್ಲ, ಹಸಿ ಮೆಣಸಿನಕಾಯಿ, ಹುಣಸೆಹಣ್ಣು ಹಾಕಿ ಬೇಯಿಸಿ. ಬೇಳೆ ಬೆಂದ ಮೇಲೆ ಅದಕ್ಕೆ ಹುರಿದ ಸೊಪ್ಪು ಸೇರಿಸಿ ಬೇಯಿಸಿ.

ಈಗ ಒಗ್ಗರಣೆಗೆ ಕೊಂಚ ಜಜ್ಜಿದ ಬೆಳ್ಳುಳ್ಳಿ, ಎಣ್ಣೆ, ಜೀರಿಗೆ, ಕರಿಬೇವು, ಒಣ ಮೆಣಸು, ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಒಗ್ಗರಣೆ ರೆಡಿ ಮಾಡಿ, ಸಾರಿಗೆ ಸೇರಿಸಿದ್ರೆ, ಸಿಂಪಲ್ ಸಾರು ರೆಡಿ. ನಿಮಗೆ ಇಷ್ಟವಾಗೋದಾದ್ರೆ ಬೇಳೆಗೆ ಸೊಪ್ಪಿನ ಜೊತೆ ಈರುಳ್ಳಿ ಕತ್ತರಿಸಿ, ಹುರಿದು ಹಾಕಬಹುದು.

- Advertisement -

Latest Posts

Don't Miss