ಕೈಯಲ್ಲಿ ಡಮರುಗ, ಜಟೆಯಲ್ಲಿ ಚಂದ್ರ ಮತ್ತು ಗಂಗೆ, ಕೊರಳಲ್ಲಿ ಸರ್ಪದ ಮಾಲೆ, ಕೈಯಲ್ಲಿ ತ್ರಿಶೂಲ ಹಿಡಿದ ಸುಂದರ ಶಿವ. ಹಾಗಾಗಿಯೇ ಶಿವನನ್ನು ಸತ್ಯಂ ಶಿವಂ ಸುಂದರಂ ಅಂತಾ ಹೇಳೋದು. ಇಂಥ ಶಿವ, ಸ್ಮಶಾನದಲ್ಲಿರಲು ಕಾರಣವೇನು..? ಅವನಿಗೆ ಸ್ಮಶಾನವಾಸಿ ಅಂತಾ ಕರಿಯೋಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಮ್ಮೆ ಪಾರ್ವತಿ ಈ ಬಗ್ಗೆ ಶಿವನಲ್ಲಿ ಕೇಳಿದಳಂತೆ. ನಿಮಗೆ ಇಷ್ಟು ಚಂದದ ಕೈಲಾಸವಿದೆ. ದೇವತೆಗಳಿಗಾಗಿ ಸ್ವರ್ಗಲೋಕವಿದೆ. ಆದ್ರೆ ನೀವು ಇಂಥ ಸುಂದರ ಜಾಗಕ್ಕಿಂತ ಹೆಚ್ಚು ಸ್ಮಶಾನದಲ್ಲೇ ಕಳೆಯುತ್ತೀರಿ. ಅಲ್ಲಿ ಅಂಥಾದ್ಧೇನಿದೆ..? ಅಲ್ಲೀ ತಲೆ ಬುರುಡೆ, ಬೂದಿ ಇರುತ್ತದೆ. ಜನರ ಹೆಣಗಳು ಬಿದ್ದಿರುತ್ತದೆ. ಚಿತೆಗಳು ಉರಿಯುತ್ತಿರುತ್ತದೆ. ರಕ್ತದ ವಾಸನೆ, ಇತರ ವಾಸನೆಗಳು ಬರುವಂಥ ಅಸಹ್ಯ ಜಾಗವದು. ಅಂಥ ಜಾಗವನ್ನು ನೀವೇಕೆ ಆರಿಸಿಕೊಂಡಿರಿ ಅಂತಾ ಪಾರ್ವತಿ ಕೇಳುತ್ತಾಳೆ.
ಆಗ ಶಿವ, ಈ ಭೂಮಿಯಲ್ಲಿ ಎಲ್ಲಕ್ಕಿಂತ ಪವಿತ್ರ ಸ್ಥಾನ ಸ್ಮಶಾನವೆಂದು ನನಗನ್ನಿಸಿತು. ಹಾಗಾಗಿ ನಾನು ಅಲ್ಲಿಯೇ ಇರಲು ಬಯಸಿದೆ. ಆಲದ ಮರದ ಗಿಡಗಳಿಂದ ತುಂಬಿದ, ಶವದ ಮೇಲಿನ ಹಾರ ಬಿದ್ದು ಸುಗಂಧಭರಿತವಾಗಿರುವ ಸ್ಮಶಾನ ನನಗಿಷ್ಟವಾದ ಸ್ಥಳವಾಗಿದೆ. ಯಾಕಂದ್ರೆ ಇಲ್ಲಿ ನನ್ನ ಭೂತ ಗಣಗಳು ವಾಸವಾಗಿದೆ. ಹಾಗಾಗಿ ನನಗೆ ಸ್ಮಶಾನವೇ ಪವಿತ್ರವಾದ ಸ್ಥಳವಾಗಿದೆ ಎನ್ನುತ್ತಾನೆ.
ಅಲ್ಲದೇ, ಈ ಸ್ಥಳಕ್ಕೆ ಮನುಷ್ಯರು ಹೆಚ್ಚಾಗಿ ಬರುವುದಿಲ್ಲ. ಅಲ್ಲದೇ ಭೂತ ಗಣಗಳು ನನ್ನ ಮಾತನ್ನ ಎಂದಿಗೂ ಮೀರುವುದಿಲ್ಲ. ಹಾಗಾಗಿ ಅಲ್ಲಿ ತಮ್ಮ ಸಂಬಂಧಿಕರ ಅಂತ್ಯಸಂಸ್ಕಾರ ಮಾಡಲು ಬರುವ ಮನುಷ್ಯರನ್ನು ನಾನು ರಕ್ಷಿಸುತ್ತೇನೆ. ಹಾಗಾಗಿ ಭೂತಗಳು ನನ್ನ ಮಾತು ಮೀರದೇ ಯಾರ ಜೀವಕ್ಕೂ ಹಾನಿ ಮಾಡುವುದಿಲ್ಲ. ಅವುಗಳು ನನ್ನ ಅಧೀನದಲ್ಲಿರುವ, ನನ್ನ ಆಜ್ಞೆಯನ್ನು ಪಾಲಿಸುವ ಕಾರಣಕ್ಕೆ, ಆ ಸ್ಥಳ ನನಗಿಷ್ಟವಾದ ಸ್ಥಳವಾಗಿದೆ ಎನ್ನುತ್ತಾನೆ ಶಿವ. ಇದೇ ಕಾರಣಕ್ಕೆ ಶಿವ ಸ್ಮಶಾನದಲ್ಲಿ ವಾಸಿಸುತ್ತಾನೆ. ಇದೇ ಕಾರಣಕ್ಕೆ ಆತನನ್ನು ಸ್ಮಶಾನ ವಾಸಿ ಎಂದು ಕರೆಯಲಾಗುತ್ತದೆ.

