ಪಂಚಭೂತಗಳಲ್ಲಿ ಒಂದಾದ ಅಗ್ನಿ ನಮ್ಮ ದೈನಂದಿನ ಕಾರ್ಯದಲ್ಲಿ ಅವಶ್ಯಕವಾಗಿ ಬೇಕಾಗಿರುವ ವಸ್ತುವಾಗಿದೆ. ಅಗ್ನಿ ಇಲ್ಲದೇ ನಾವು ಅಡಿಗೆ ಮಾಡಲಾಗುವುದಿಲ್ಲ. ಅಗ್ನಿ ಇಲ್ಲದೇ ಹಲವು ಅವಶ್ಯಕ ವಸ್ತುಗಳನ್ನು ತಯಾರಿಸಲಾಗುವುದಿಲ್ಲ. ಪೂಜೆ ಪುನಸ್ಕಾರಗಳು ಅಗ್ನಿ ಇಲ್ಲದೇ, ಪೂರ್ತಿಯಾಗುವುದೇ ಇಲ್ಲ. ಆದ್ರೆ ಈ ಅಗ್ನಿ ದೇವ ಹುಟ್ಟಿದ್ದಾದರೂ ಹೇಗೆ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಬೃಹಸ್ಪತಿಯ ಪತ್ನಿ ಯಶಸ್ವಿನಿ 5 ಅಗ್ನಿ ಪುತ್ರರಿಗೆ ಮತ್ತು ಓರ್ವ ಪುತ್ರಿಗೆ ಜನ್ಮ ನೀಡಿದಳು. ಅಗ್ನಿಗೆ ತುಪ್ಪದ ಆಹುತಿ ನೀಡಲಾಗುತ್ತದೆಯೋ ಅದು ಬ್ರಹಸ್ಪತಿಯ ಮೊದಲ ಪುತ್ರ ಶಯ್ಯು. ಶಯ್ಯುವಿನ ಪತ್ನಿಯ ಹೆಸರು ಸತ್ಯ. ಈಕೆ ಸತ್ಯದ ದಾರಿಯಲ್ಲಿ ನಡೆಯುವ ಹೆಣ್ಣಾಗಿದ್ದಳು. ಈಕೆಗೆ ಓರ್ವ ಪುತ್ರ ಮತ್ತು ಮೂವರು ಪುತ್ರಿಯರಿದ್ದರು. ಇನ್ನೋರ್ವ ಸತಿ ಇದ್ದಳು. ಅವಳಿಗೂ ಓರ್ವ ಪುತ್ರನಿದ್ದ.
ಶಯ್ಯುವಿನ ಮೊದಲ ಮಗನ ಹೆಸರು ಭರತ. ಈ ಭರತನೇ ನಿಜವಾದ ಅಗ್ನಿ ದೇವ. ಹಿಂದೂ ಪುರಾಣ ಗ್ರಂಥದಲ್ಲಿ ಅಗ್ನಿ ದೇವನ ಬಗ್ಗೆ ಹಲವು ಕಥೆಗಳಿದೆ. ಕೆಲವು ಗ್ರಂಥಗಳಲ್ಲಿ ಪ್ರಜಾಪತಿ ಭರತನೇ ಅಗ್ನಿ ದೇವನೆಂದು ಹೇಳಲಾಗುತ್ತದೆ. ಈ ಅಗ್ನಿ ದೇವ ಈ ಲೋಕ ಹುಟ್ಟುವ ಮೊದಲೇ ಇದ್ದನಂತೆ. ಇವನ ಅಗ್ನಿಯಿಂದಲೇ ಪ್ರಕಾಶ ಬಂದು, ಅದರಿಂದಲೇ ದಿನ ಮತ್ತು ರಾತ್ರಿಯಾಯಿತು ಅನ್ನೋ ನಂಬಿಕೆ ಇದೆ.




