Saturday, July 5, 2025

Latest Posts

ಕಡಿಮೆ ಮಾತನಾಡುವವರಲ್ಲಿ ಈ 8 ಉತ್ತಮ ಗುಣಗಳಿರುತ್ತದೆ- ಭಾಗ 2

- Advertisement -

ನಾವು ಮೊದಲ ಭಾಗದಲ್ಲಿ ಕಡಿಮೆ ಮಾತನಾಡುವವರಿಗೆ ಎಂಥ 4 ಉತ್ತಮ ಗುಣಗಳಿರುತ್ತದೆ ಅನ್ನೋ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಇನ್ನುಳಿದ 4 ಗುಣಗಳ ಬಗ್ಗೆ ಮಾತನಾಡೋಣ.

ಐದನೇಯದಾಗಿ ಕಡಿಮೆ ಮಾತನಾಡುವವರು ಮಾತಿಗೆ ಮಾತು ಬೆಳೆಸಿ, ಜಗಳವಾಡುವುದಿಲ್ಲ. ಬದಲಾಗಿ ಅರ್ಧದಲ್ಲೇ ಜಗಳ ಮೊಟಕುಗೊಳಿಸಿ, ಸುಮ್ಮನಾಗುತ್ತಾರೆ. ತಮ್ಮ ಮೌಲ್ಯವನ್ನು ಕಾಪಾಡಿಕೊಳ್ಳುತ್ತಾರೆ. ಇದರಿಂದ ಜಗಳ ಮುಂದುವರಿಸಲು ಯತ್ನಿಸುವವರು ಸೋಲುತ್ತಾರೆ. ಅವಮಾನಿತರಾಗುತ್ತಾರೆ. ಇದೇ ಬುದ್ಧಿವಂತರ ಲಕ್ಷಣ.

ಆರನೇಯದಾಗಿ ಕಡಿಮೆ ಮಾತನಾಡುವವರು ಫ್ರೆಂಡ್ಲಿಯಾಗಿರುತ್ತಾರೆ. ಎಲ್ಲರೊಂದಿಗೂ ಉತ್ತಮವಾಗಿರಲು ಬಯಸುತ್ತಾರೆ. ಅವರು ಯಾರೊಂದಿಗೂ ಜಗಳ ಮಾಡುವುದಿಲ್ಲ. ಅವರು ಶಾಂತಿಯಿಂದ, ಖುಷಿ ಖುಷಿಯಾಗಿರಲು ಬಯಸುತ್ತಾರೆ. ಹಾಗಾಗಿ ಅವರು ಎಲ್ಲರಿಗೂ ಇಷ್ಟವಾಗುತ್ತಾರೆ.

ಏಳನೇಯದಾಗಿ ಕಡಿಮೆ ಮಾತನಾಡುವವರು ಕೆಲವು ರಿವೀಲ್ ಮಾಡಬಾರದ ವಿಚಾರವನ್ನು ಮಾತನಾಡುವುದಿಲ್ಲ. ಅಂಥ ಸಮಯದಲ್ಲಿ ಅವರು ಹುಷಾರಾಗಿರುತ್ತಾರೆ. ಅಂಥ ವಿಷಯ ಅಪ್ಪಿ ತಪ್ಪಿ ಕೂಡ ಬಾಯಿಗೆ ಬರದಂತೆ ನೋಡಿಕೊಳ್ತಾರೆ. ತಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ. ನನಗೆ ಆ ಬಗ್ಗೆ ಗೊತ್ತಿಲ್ಲ ಅಂತ ಹೇಳಿ, ಆ ವಿಷಯವನ್ನ ಬದಿಗಿರಿಸುವಂತೆ ಮಾಡುತ್ತಾರೆ.

ಎಂಟನೇಯದಾಗಿ ಕಡಿಮೆ ಮಾತನಾಡುವವರ ಮಾತನ್ನು ಎಲ್ಲರೂ ಗಮನವಿಟ್ಟು ಕೇಳುತ್ತಾರೆ. ಉದಾಹರಣೆಗೆ ಅವರು ಮೀಟಿಂಗ್ ಅಟೆಂಡ್ ಮಾಡಿದಾಗ, ಅಲ್ಲಿರುವ ಎಲ್ಲರ ಮಾತನ್ನು ಕೇಳಿಸಿಕೊಂಡು, ಕೊನೆಯದಾಗಿ ಮಾತನಾಡುತ್ತಾರೆ. ಅಲ್ಲಿರುವವರಿಗೆ ಇವರು ಕಡಿಮೆ ಮಾತನಾಡುವವರು ಅಂತಾ ಗೊತ್ತಾದಾಗ, ಇವರೇನು ಮಾತನಾಡಬಹುದು ಅನ್ನೋ ಕುತೂಹಲದಿಂದ ನೋಡುತ್ತಾರೆ. ಅವರ ಮಾತನ್ನು ಗಮನವಿಟ್ಟು ಕೇಳುತ್ತಾರೆ.

- Advertisement -

Latest Posts

Don't Miss