ಯಾರನ್ನ ಬೇಕಾದ್ರೂ ನಾವು ಅರ್ಥ ಮಾಡಿಕೊಳ್ಳಬಹುದು. ಆದ್ರೆ ಹೆಣ್ಣನ್ನಲ್ಲ ಅಂತಾ ಹಲವರು ಹೇಳಿದ್ದನ್ನ ನಾವು ಕೇಳಿದ್ದೇವೆ. ಯಾಕಂದ್ರೆ ಓರ್ವ ಪುರುಷನಿಗೆ ಹೆಣ್ಣಿನ ಭಾವನೆಯನ್ನ ಅರಿಯುವ ಶಕ್ತಿ ಕಡಿಮೆ ಇರುತ್ತದೆ. ಇವಳು ಒಮ್ಮೊಮ್ಮೆ ಒಂದೊಂದು ಥರ ಮಾತನಾಡುತ್ತಾಳಲ್ಲ ಅಂತಾ ಅವನ ಮನಸ್ಸಿಗನ್ನಿಸುತ್ತದೆ. ಹಾಗಾದ್ರೆ ಓರ್ವ ಸ್ತ್ರೀ ಬಯಸೋದಾದ್ರೂ ಏನು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಓರ್ವ ಪ್ರೇಮಿ, ಅಥವಾ ಗಂಡನಿಂದ ಹೆಣ್ಣು ಏನನ್ನು ಬಯಸುತ್ತಾಳೆ..?
ನಿಜವಾಗ್ಲೂ ಪ್ರೀತಿಸುವ ಹೆಣ್ಣು ತನ್ನ ಪ್ರೇಮಿ, ಅಥವಾ ಗಂಡನಿಂದ ಪ್ರೀತಿ, ಮತ್ತು ಸಮಯ ಬಯಸುತ್ತಾಳೆ. ಅವನು ತನಗೆ ಕೆಲ ಸಮಯ ಮೀಸಲಿಟ್ಟು, ಪ್ರೀತಿಯಿಂದ ಮಾತನಾಡಿಸಬೇಕು. ತನ್ನನ್ನು ಮುದ್ದಾಡಬೇಕೆಂದು ಬಯಸುತ್ತಾಳೆ. ಹಾಗಾಗಿ ನೀವು ನಿಮ್ಮ ಪತ್ನಿ ಅಥವಾ ಪ್ರೇಯಸಿಗಾಗಿಯೇ ಸಮಯ ಮಾಡಿಕೊಂಡು, ಫೋನ್ ಅಥವಾ ಮೆಸೇಜ್ ಮಾಡಿ ಪ್ರೀತಿಯಿಂದ ನಾಲ್ಕು ಮಾತನಾಡಿ ಸಾಕು.
ಹೆಣ್ಣು ಪುರುಷನಿಗಿಂತ ಯಾಕೆ ಭಾವುಕಳಾಗಿರ್ತಾಳೆ..?
ಪತ್ನಿ ಅಥವಾ ಪ್ರೇಯಸಿ, ಪ್ರಿಯಕರನಿಗಿಂತ ಅಥವಾ ಪತಿಗಿಂತ ಹೆಚ್ಚು ಕಣ್ಣೀರು ಹಾಕುತ್ತಿರುತ್ತಾಳೆ. ಆದ್ರೆ ತಾನೇಕೆ ಅಷ್ಟು ಭಾವುಕಳು ಅನ್ನೋದನ್ನ ಮಾತಿನಿಂದ ಹೇಳುವುದಿಲ್ಲ. ಯಾಕಂದ್ರೆ ಆಕೆ ನಿಮ್ಮನ್ನು ಅಷ್ಟು ಪ್ರೀತಿಸುತ್ತಾಳೆ. ನೀವು ಆಕೆ ಹೇಳದೇನೆ ಆಕೆಯ ಭಾವನೆಯನ್ನ ಅರ್ಥ ಮಾಡಿಕೊಳ್ಳಬೇಕು ಅಂತಾ ಆಕೆ ಬಯಸುತ್ತಾಳೆ. ಹಾಗಾಗಿ ಅಂಥ ಭಾವುಕ ಹೆಣ್ಣು ಮಕ್ಕಳೊಂದಿಗೆ ಸಂಯಮದಿಂದ ನಡೆದುಕೊಳ್ಳಿ.
ತನಗೆ ಸಿಗಬೇಕಾದ ತನ್ನ ಪಾಲಿನ ಪ್ರೀತಿ, ಮಮತೆ, ಕಾಳಜಿಯನ್ನಷ್ಟೇ ಬಯಸುತ್ತಾಳೆ..
ಹೆಣ್ಣು ವಿವಾಹವಾಗಿ ಗಂಡನ ಮನೆಗೆ ಹೋದಾಗ, ಆಕೆ ಅಲ್ಲಿ ತನಗೆ ಸಿಗಬೇಕಾದ ಪ್ರೀತಿಯನ್ನ ಬಯಸುತ್ತಾಳೆ. ತಾನೆಷ್ಟು ತನ್ನ ಪತಿಯನ್ನು ಪತಿಯ ಮನೆಯವರನ್ನು ಗೌರವಿಸುತ್ತೇನೋ, ಕಾಳಜಿ ವಹಿಸುತ್ತೇನೋ, ಅಷ್ಟೇ ಕಾಳಜಿ ಪ್ರೀತಿ, ಆ ಮನೆಯವರೂ ತೋರಿಸಲಿ ಎಂದು ಆಕೆ ಬಯಸುತ್ತಾಳೆ. ಆಕೆಯ ಮಕ್ಕಳು ಕೂಡ ಆಕೆಗೆ ಅದೇ ಗೌರವ, ಪ್ರೀತಿ ತೋರಿಸಲಿ ಅಂತಷ್ಟೇ ಓರ್ವ ಹೆಣ್ಣು ಬಯಸುತ್ತಾಳೆ.




