Friday, June 20, 2025

Latest Posts

ಹಾಡುವ , ಕುಣಿಯುವ, ಡಾನ್ಸ್ ಮಾಡುವ ಪಕ್ಷಿಗಳಿವು- ಭಾಗ 1

- Advertisement -

ಈ ಪ್ರಪಂಚದಲ್ಲಿ ಹಲವಾರು ರೀತಿಯ ಪ್ರಾಣಿ- ಪಕ್ಷಿಗಳಿವೆ. ಇನ್ನೂ ಹಲವು ಜೀವಿಗಳಿದೆ. ಆದ್ರೆ ಅವೆಲ್ಲವನ್ನೂ ನಾವು ಪ್ರತ್ಯಕ್ಷವಾಗಿ ನೋಡಲು ಸಾಧ್ಯವೇ ಇಲ್ಲ. ಆದ್ರೆ ಅದನ್ನ ಪರೋಕ್ಷವಾಗಿ ಅಂದ್ರೆ ವೀಡಿಯೋ ಫೋಟೋಗಳ ಮೂಲಕವೇ ನೋಡಬಹುದು. ಅಂಥ ಅಪರೂಪದ 10 ಪಕ್ಷಿಗಳ ಬಗ್ಗೆ ನಾವಿವತ್ತು ನಿಮಗೆ ಮಾಹಿತಿ ನೀಡಲಿದ್ದೇವೆ.

  1. ಕಾಕಾಪೋ: ಈ ಪಕ್ಷಿಯನ್ನ ಆವಲ್ ಪ್ಯಾರೆಟ್ ಅಂತಲೂ ಕರೆಯಲಾಗತ್ತೆ. ಯಾಕಂದ್ರೆ ಇದರ ದೇಹ ಗಿಣಿಯಂತಿದ್ದು, ಮುಖ ಗೂಬೆಯಂತಿದೆ. ಇನ್ನು ಈ ಪಕ್ಷಿ ಹಾರುವುದಿಲ್ಲ, ಬದಲಾಗಿ ಕುಣಿಯುತ್ತ ನಡೆಯುತ್ತದೆ. ಹಾಗಾಗಿ ಇದರ ಮೇಲೆ ಯಾರಾದರೂ ಅಟ್ಯಾಕ್ ಮಾಡಲು ಬಂದ್ರೆ, ಅವರಿಂದ ತಪ್ಪಿಸಿಕೊಳ್ಳಲು ಈ ಪಕ್ಷಿಗೆ ಕೊಂಚ ಕಷ್ಟವಾಗುತ್ತದೆ. ಇನ್ನು ಈ ಪಕ್ಷಿಯ ಸಂಖ್ಯೆ ಕಡಿಮೆಯಾಗುತ್ತಿದ್ದು, ನ್ಯೂಜಿಲೆಂಡ್ ಸರ್ಕಾರ, ಈ ಪಕ್ಷಿಯ ಸಂತತಿಯನ್ನು ಉಳಿಸಲು ಸಾಕಷ್ಟು ಪ್ರಯತ್ನ ಪಡುತ್ತಿದೆ.
  2. ಜೂನಿಯನ್ ಗ್ರೀಬ್: ಕಪ್ಪು ಮತ್ತು ಬಿಳಿ ಮೈಬಣ್ಣ ಹೊಂದಿರುವ ಈ ಬಾತುಕೋಳಿಯ ಕಣ್ಣು ಕೆಂಪಗಿರುತ್ತದೆ. ಈ ಪಕ್ಷಿಯ ಸಂಖ್ಯೆಯೂ ಕ್ಷಿಣಿಸುತ್ತ ಬರುತ್ತಿದ್ದು, ಪೆರುವಿನ ಜೂನಿಯನ್ ಕೊಳದಲ್ಲಿ ಈ ಬಾತುಕೋಳಿ ಕಂಡುಬರುತ್ತಿದ್ದು, ಇದರ ಸಂಖ್ಯೆ ಕೇವಲ 250 ಆಗಿದೆ.
  3. ಸುಪರ್ ಲೈಯರ್ ಬರ್ಡ್: ಈ ಪಕ್ಷಿ ಆಸ್ಟ್ರೇಲಿಯಾದಲ್ಲಿ ಕಂಡು ಬರುತ್ತದೆ. ಇದು ಬೂದಿ ಬಣ್ಣದ್ದಾಗಿದ್ದು, ಇದರ ಬಾಲ ಉದ್ದವಾಗಿ ಕಲರ್‌ಫುಲ್ ಆಗಿರುತ್ತದೆ. ಇದು ಕೋಗಿಲೆಯಂತೆ ಹಾಡು ಹಾಡುವ ಸಾಮರ್ಥ್ಯವನ್ನು ಹೊಂದಿದೆ. ಆದ್ರೆ ಇದೇ ಹಾಡು ಹಾಡುವ ಸಾಮರ್ಥ್ಯ ಇದರ ಅಂತ್ಯಕ್ಕೆ ಕಾರಣವಾಗಿದೆ. ಯಾಕಂದ್ರೆ ಇದು ಕೂಗಲು ಶುರು ಮಾಡಿದಾಗ, ಇದರ ಬೇಟೆಯಾಡಲು ಬೇರೆ ಪ್ರಾಣಿಗಳಿಗೆ ಸುಲಭವಾಗುತ್ತದೆ. ಅಲ್ಲದೇ, ಇದು ಅಷ್ಟಾಗಿ ಹಾರದ ಕಾರಣ, ಗಾಡಿಗಳ ಕೆಳಗೆ ಸಿಲುಕಿ ಸಾಯುತ್ತಿದೆ.
  4. ಆರೆಂಜ್ ಬೆಲ್ಲೀಡ್ ಪ್ಯಾರೆಟ್: ತಿಳಿ ಹಸಿರು ದೇಹ, ಕಿತ್ತಳೆ ಬಣ್ಣದ ಹೊಟ್ಟೆಯ ಭಾಗ, ನೀಲಿ ಬಣ್ಣದ ರೆಕ್ಕೆ, ಮತ್ತು ತಿಳಿ ಹಳದಿ ಬಣ್ಣದಿಂದ ಕೂಡಿದ ಈ ಗಿಳಿಯನ್ನು ನೋಡೋದೇ ಒಂದು ಚಂದ. ಈ ಸುಂದರವಾದ ಗಿಣಿ, ತಾಸ್ಮೆನಿಯಾದಲ್ಲಿ ಕಂಡು ಬರುತ್ತದೆ. ಮತ್ತು ಚಳಿಗಾಲದಲ್ಲಿ ಆಸ್ಟ್ರೇಲಿಯಾದ ಕೆಲವು ಪ್ರದೇಶಗಳಲ್ಲಿ ವಾಸಿಸಲು ಇಚ್ಛಿಸುತ್ತದೆ.
  5. ಸೂಪರ್ ಬರ್ಡ್ ಆಫ್ ಪ್ಯಾರಡೈಸ್‌: ಇದು ಎಂಥ ಸುಂದರ ಪಕ್ಷಿ ಎಂದರೆ, ಇದರ ಮೈ ಬಣ್ಣ ಕಪ್ಪಾಗಿರುತ್ತದೆ. ಆದ್ರೆ ಇದರ ಕುತ್ತಿಗೆ ಬಣ್ಣ ನೀಲಿಯಾಗಿ ಶೈನಿಂಗ್ ಆಗಿರುತ್ತದೆ. ಈ ಹೊಳಪನ್ನ ನೀವು ನೋಡಬೇಕೆಂದಲ್ಲಿ, ಈ ಪಕ್ಷಿ ಡಾನ್ಸ್ ಮಾಡುವುದನ್ನು ನೀವು ನೋಡಬೇಕು. ಅಲ್ಲದೇ, ಇದರ ತಲೆ ಮೇಲೆ ಎರಡು ಕೋಡುಗಳಿದ್ದು, ಅದು ವೈಯರ್ ರೀತಿ ಅಲುಗಾಡುತ್ತಿರುತ್ತದೆ.

ಈ  ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss