Tuesday, November 18, 2025

Latest Posts

ಕುಡಿಯುವ ಚಟವಿದ್ದವರಿಗೆ, ಮುಂದೆ ಯಾವ ಜನ್ಮ ಸಿಗುತ್ತದೆ ಗೊತ್ತಾ..?

- Advertisement -

ಇಂದಿನ ಕಾಲದಲ್ಲಿ ಗಂಡಸರಷ್ಟೇ ಅಲ್ಲದೇ, ಹೆಣ್ಣು ಮಕ್ಕಳೂ ಕುಡಿಯುವುದನ್ನು ಕಲಿತಿದ್ದಾರೆ. ಕೆಲವರಿಗೆ ಕುಡಿಯುವುದು ಒಂದು ಪ್ರತಿಷ್ಟೆಯಾಗಿಬಿಟ್ಟಿದೆ. ಕುಡಿದು ಸುಮ್ಮನಿದ್ದರೆ ಓಕೆ. ಆದ್ರೆ ಕುಡಿದು, ಹಿಂಸೆ ಕೊಡುವವರಿಗೆ ಎಂದು ಕ್ಷಮೆ ಇಲ್ಲ. ಇಂಥ ರಾಕ್ಷಸಸರಿಗೆ ಮುಂದೆ ಯಾವ ಜನ್ಮ ಸಿಗುತ್ತದೆ ಅನ್ನೋ ಬಗ್ಗೆ ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಚಟವಿರುವವನಿಗೆ ಚಟ್ಟ ಕಟ್ಟಿಟ್ಟ ಬುತ್ತಿ ಅನ್ನೋ ಮಾತು ಎಲ್ಲರೂ ಕೇಳೇ ಇರ್ತೀರಾ. ಯಾಕಂದ್ರೆ ಯಾವುದೇ ಚಟ ಇದ್ರೂ, ಅದು ನಮ್ಮ ಬಾಳನ್ನೇ ಹಾಳು ಮಾಡತ್ತೆ. ಅದರಲ್ಲೂ ಕುಡಿಯುವ ಚಟ ಇದ್ದವನಿಗೆ ಜೀವನದಲ್ಲಿ ಯಾವ ಸುಖವೂ ಇರುವುದಿಲ್ಲ. ಅವನ ಆರೋಗ್ಯ ಹಾಳಾಗುತ್ತದೆ. ಅವನ ಕುಟುಂಬಸ್ಥರು ಅವನನ್ನು ಇಷ್ಟಪಡುವುದಿಲ್ಲ. ಅವನ ಸ್ನೇಹಿತರು ಅವನನ್ನು ದೂರ ಮಾಡುತ್ತಾರೆ. ಕುಡಿತದ ಚಟ ಹೆಚ್ಚಾಗುತ್ತಿದ್ದಂತೆ, ಆರ್ಥಿಕ ಸಂಕಷ್ಟ ಎದುರಾಗುತ್ತದೆ.

ಭಗವದ್ಗೀತೆಯಲ್ಲಿ 5 ಪಾಪಗಳನ್ನು ಮಾಡುವುದರಿಂದ ಕೆಟ್ಟ ಜನ್ಮ ಪ್ರಾಪ್ತಿಯಾಗುತ್ತದೆ ಅಂತಾ ಹೇಳಲಾಗಿದೆ. ಆ 5 ಪಾಪಗಳು ಯಾವುದೆಂದರೆ, ಕುಡಿಯುವುದು, ಗುರುಪತ್ನಿಯೊಂದಿಗೆ ಸಂಬಂಧ, ವಿಶ್ವಾಸ ದ್ರೋಹ, ಬ್ರಹ್ಮಹತ್ಯೆ, ಚಿನ್ನಗಳ್ಳತನ. ಈ ಪಾಪಗಳನ್ನು ಮಾಡಿದ್ರೆ, ಮುಂದಿನ ಜನ್ಮದಲ್ಲಿ ಕೆಟ್ಟ ಯೋನಿಯಲ್ಲಿ ಜನ್ಮ ಪಡೆಯಬೇಕಾಗುತ್ತದೆ ಎಂದು ಹೇಳಲಾಗಿದೆ. ಈ ಬಗ್ಗೆ ಗರುಡ ಪುರಾಣದಲ್ಲಿಯೂ ಹೇಳಲಾಗಿದೆ.

ಗರುಡ ಪುರಾಣದ ಪ್ರಕಾರ, ಕುಡುಕರಿಗೆ ನಾಯಿ ಅಥವಾ ಕಪ್ಪೆಯ ಯೋನಿಯಲ್ಲಿ ಜನ್ಮ ಸಿಗುತ್ತದೆ ಅಂತಾ ಹೇಳಲಾಗಿದೆ. ಅಲ್ಲದೇ, ಮುಂದಿನ 70 ಜನ್ಮ ಮುಕ್ತಿ ಸಿಗದೇ, ತಿರುಗಾಡಬೇಕಾಗುತ್ತದೆ. ನರಕದಲ್ಲೂ ಕಠಿಣ ಶಿಕ್ಷೆ ಪ್ರಾಪ್ತಿಯಾಗುತ್ತದೆ ಅಂತಾ ಹೇಳಲಾಗಿದೆ.

- Advertisement -

Latest Posts

Don't Miss