ಬೆಂಗಳೂರು: ವಿಧಾನಸೌಧದ ಸ್ಪೀಕರ್ ಕಚೇರಿಗೆ ಅತೃಪ್ತ ಶಾಸಕರು ಭೇಟಿ ನೀಡುತ್ತಿರೋ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಶಕ್ತಿ ಸೌಧದ ದೊಳಕ್ಕೆ ಸಾರ್ವಜನಿಕರಲ್ಲದೆ ರಾಜಕೀಯ ಮುಖಂಡರಿಗೂ ಪ್ರವೇಶ ನಿರ್ಬಂಧ ಮಾಡಲಾಗಿದೆ.
ಮುಂಬೈನಿಂದ ಆಗಮಿಸುತ್ತಿರೋ ಅತೃಪ್ತ ಶಾಸಕರು ತಮ್ಮ ರಾಜೀನಾಮೆ ಕುರಿತಾಗಿ ಸ್ಪೀಕರ್ ರಮೇಶ್ ಕುಮಾರ್ ಕಚೇರಿಗೆ ಆಗಮಿಸುತ್ತಿರೋ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೂಚನೆ ಹಾಗೂ ಭದ್ರತಾ ದೃಷ್ಟಿಯಿಂದ ವಿಧಾನಸೌಧದ ಒಳ ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ನಿನ್ನೆ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹಾಗೂ ಹೊಸಕೋಟೆ ಶಾಸಕ ಎಂ.ಟಿ ಬಿ ನಾಗರಾಜ್ ರಾಜೀನಾಮೆ ಸಲ್ಲಿಸಲು ಸ್ಪೀಕರ್ ಕಚೇರಿಗೆ ಬಂದಾಗ ಉಂಟಾಗಿದ್ದ ಗಲಾಟೆ ಮತ್ತೆ ಇಂದು ಮರುಕಳಿಸಬಾರದೆಂಬ ದೃಷ್ಟಿಂದಾಗಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಅಲ್ಲದೆ ಸ್ಪೀಕರ್ ಕಚೇರಿಯ ಸುತ್ತ ಚಲನವಲನಗಳ ಚಿತ್ರೀಕರಣ ವ್ಯವಸ್ಥೆ ಕೂಡ ಏರ್ಪಡಿಸಲಾಗಿದೆ.