ಸನಾತನ ಧರ್ಮ ಗ್ರಂಥವಾಗಿರುವ ಗರುಡ ಪುರಾಣದಲ್ಲಿ ಯಾವ ಪಾಪಕ್ಕೆ ಯಾವ ಶಿಕ್ಷೆ ಸಿಗುತ್ತದೆ..? ನರಕದಲ್ಲಿ ಯಾವ ರೀತಿಯ ಶಿಕ್ಷೆ ಕೊಡಲಾಗುತ್ತದೆ..? ಹಿಂದೂ ಧರ್ಮದಲ್ಲಿ ಯಾವುದು ನಿಷೇಧವಿದೆ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಆದ್ರೆ ನಾವಿಂದು ಗರುಡ ಪುರಾಣದಲ್ಲಿ ಹೇಳಿರುವ 7ಮಾತುಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಈ 7 ವಿಷಯವನ್ನು ನಾವು ಸದಾ ನೆನಪಿನಲ್ಲಿಡಬೇಕು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ…
ಮೊದಲನೇಯದ್ದು, ತಾಳ್ಮೆ ಮತ್ತು ಬುದ್ಧಿವಂತಿಕೆ. ಜೀವನ ಉತ್ತಮವಾಗಿರಬೇಕು. ಶತ್ರುಗಳು ನಮ್ಮಿಂದ ದೂರವಿರಬೇಕು. ನಾವು ಖುಷಿ ಖುಷಿಯಾಗಿರಬೇಕು ಅಂದ್ರೆ ನಮಗೆ ತಾಳ್ಮೆ ಮತ್ತು ಬುದ್ಧಿವಂತಿಕೆ ಇರಬೇಕು. ತಾಳ್ಮೆ ಇದ್ರೆ ಪ್ರಪಂಚಾನೇ ಗೆಲ್ಲಬಹುದು ಅನ್ನೋ ಮಾತಿದೆ. ಅದೇ ರೀತಿ ತಾಳ್ಮೆ ಮತ್ತು ಬುದ್ಧಿವಂತಿಕೆ ಇದ್ರೆ ಜೀವನಾನೇ ಗೆಲ್ಲಬಹುದು.
ಎರಡನೇಯದ್ದು, ಸ್ವಚ್ಛ- ಸುಗಂಧಿತ ಬಟ್ಟೆ. ನೀವು ಶ್ರೀಮಂತರು, ಆರೋಗ್ಯವಂತರು ಅಥವಾ ಭಾಗ್ಯಶಾಲಿಗಳಾಗಿ ಬದುಕಬೇಕು ಎಂದುಕೊಂಡಲ್ಲಿ, ಯಾವಾಗಲೂ ಸ್ವಚ್ಛವಾಗಿರುವ, ಸುಗಂಧಿತ ಬಟ್ಟೆಯನ್ನೇ ಹಾಕಿಕೊಳ್ಳಿ. ಯಾರು ಸ್ವಚ್ಛವಾಗಿ ಇರುತ್ತಾರೋ, ಅವರು ಯಾವಾಗಲೂ ಉತ್ತಮರಾಗಿರ್ತಾರೆ.
ಮೂರನೇಯದ್ದು, ಯಶಸ್ಸು ಗಳಿಸಲು ನಿರಂತರ ಪ್ರಯತ್ನ ಅತ್ಯಗತ್ಯ. ನೀವು ವಿದ್ಯಾರ್ಥಿಗಳಾಗಿರಬಹುದು. ಅಥವಾ ಯಾವುದಾದರೂ ಉದ್ಯಮ ಮಾಡುತ್ತಿರುವರು ಆಗಿರಬಹುದು. ಅಥವಾ ಯಾವುದೋ ಕಲೆಯಲ್ಲಿ ಉನ್ನತಿ ಹೊಂದಬೇಕು ಅನ್ನೋ ಆಸೆ ಇದ್ದರೆ, ಅದಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಿರಿ. ಅಲ್ಲದೇ, ನಿರಂತರ ಅಭ್ಯಾಸದಿಂದ ನೀವು ಯಾವುದೇ ವೃತ್ತಿಯಲ್ಲಿ ಏಳಿಗೆ ಪಡೆಯುತ್ತೀರಿ.
ನಾಲ್ಕನೇಯದ್ದು, ನಿರೋಗಿ ಕಾಯ. ಅಂದ್ರೆ ಆರೋಗ್ಯವಾಗಿರುವ ದೇಹ. ನಿಮ್ಮ ಆರೋಗ್ಯ ಉತ್ತಮವಾಗಿರುವಷ್ಟು, ನೀವು ಚುರುಕಾಗಿ ಕೆಲಸ ಕಾರ್ಯಗಳಲ್ಲಿ ತೊಡಗಲು ಸಾಧ್ಯವಾಗುತ್ತದೆ. ಹಾಗೆ ಕೆಲಸ ಮಾಡುವಷ್ಟು ಶಕ್ತಿ ನಮ್ಮ ದೇಹದಲ್ಲಿ ಇರಬೇಕೆಂದರೆ, ನೀವು ಉತ್ತಮ ಮತ್ತು ಆರೋಗ್ಯಕರ ಆಹಾರ ಸೇವನೆ ಮಾಡಬೇಕು.
ಐದನೇಯದ್ದು, ಏಕಾದಶಿ ವೃತ. ವೃತಗಳಲ್ಲಿ, ಉಪವಾಸಗಳಲ್ಲಿ ಏಕಾದಶಿ ವೃತ ಶ್ರೇಷ್ಠ ವೃತವಾಗಿದೆ. ಏಕಾದಶಿ ದಿನ ಉಪವಾಸ ಮಾಡಿದ್ರೆ, ಸಕಲ ಪುಣ್ಯ ಪ್ರಾಪ್ತಿಯಾಗುತ್ತದೆ. ಧನ ಲಕ್ಷ್ಮೀ ಒಲಿಯುತ್ತಾಳೆಂಬ ನಂಬಿಕೆ ಇದೆ. ಆದ್ರೆ ಈ ವೃತ ಮಾಡಲು ಅದರದ್ದೇ ಆದ ನಿಯಮವಿದೆ. ಈ ದಿನ ಬರೀ ನೀರು, ಫಲಾಹಾರವನ್ನಷ್ಟೇ ಸೇವಿಸಬೇಕು. ಹೀಗೆ ನಿಯಮದ ಪ್ರಕಾರ ಉಪವಾಸ ಮಾಡಬೇಕು.
ಆರನೇಯದ್ದು, ಮನೆಯಲ್ಲಿ ಒಂದು ಸಮೃದ್ಧವಾಗಿ ಬೆಳೆದ ತುಳಸಿ ಗಿಡ ಇರಲೇಬೇಕು. ಸನಾತನ ಧರ್ಮದಲ್ಲಿ ತುಳಸಿಗೆ ದೇವಿಯ ಸ್ಥಾನ ನೀಡಲಾಗಿದೆ. ಈ ಪವಿತ್ರ ಗಿಡ ಸಮೃದ್ಧವಾಗಿ ಬೆಳೆಸಿದ್ದಷ್ಟು, ನಿಮ್ಮ ಮನೆಯೂ ಸಮೃದ್ಧವಾಗಿ ಬೆಳೆಯುತ್ತದೆ. ರೋಗ ರುಜಿನಗಳಿಂದ ಮುಕ್ತಿ ಸಿಗುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿ ತುಳಸಿ ಗಿಡ ಬಾಡಿ ಹೋಗದಂತೆ ನೋಡಿಕೊಳ್ಳಿ. ಹಾಗೇನಾದರೂ ಬಾಡಿ ಹೋದರೆ, ಅದನ್ನು ಕಿತ್ತು ಬಿಸಾಡಿ, ಹೊಸ ಗಿಡ ತಂದು ನೆಡಿ.
ಏಳನೆಯದ್ದು, ನಿಮ್ಮ ಧರ್ಮದ ಮತ್ತು ದೇವರಿಗೆ ಗೌರವಿಸುವುದನ್ನು ಕಲಿಯಿರಿ. ನಮ್ಮ ಧರ್ಮ ಯಾವುದೇ ಇರಲಿ. ಅದಕ್ಕೆ ನಾವು ಗೌರವ ನೀಡುವುದನ್ನು ಕಲಿಯಬೇಕು. ಮತ್ತು ನಮ್ಮ ದೇವರಿಗೆ ನಾವು ಭಕ್ತಿಯಿಂದ ಪೂಜಿಸಬೇಕು. ಹೀಗೆ ನಾವು ಧರ್ಮವನ್ನು ಗೌರವಿಸಿ, ರಕ್ಷಿಸಿದ್ದಲ್ಲಿ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿಯೇ, ಧರ್ಮೋ ರಕ್ಷತಿ, ರಕ್ಷಿತಃ ಅಂತಾ ಹೇಳಿದ್ದು.