Friday, July 11, 2025

Latest Posts

ರಾತ್ರಿ ಬೇಟೆಯಾಡುವ ವಿಚಿತ್ರ ಜೀವಿಗಳ ಬಗ್ಗೆ ಸಂಪೂರ್ಣ ಮಾಹಿತಿ..

- Advertisement -

ಈ ಭೂಮಿಯ ಮೇಲೆ ಬೇಟೆಯಾಡುವ ಹಲವು ಜೀವಿಗಳಿದೆ. ಹಲವು ರೀತಿಯ ಪ್ರಾಣಿ ಪಕ್ಷಿಗಳು ಬೇಟೆಯಾಡಿ, ತಮ್ಮ ಆಹಾರವನ್ನು ಹುಡುಕಿಕೊಳ್ಳುತ್ತದೆ. ಇಂದು ನಾವು ಇದೇ ರೀತಿ ರಾತ್ರಿ ಸಮಯದಲ್ಲಿ ಬೇಟೆಯಾಡುವ ಪ್ರಾಣಿ ಪಕ್ಷಿಗಳ ಬಗ್ಗೆ ಸಣ್ಣ ಮಾಹಿತಿ ನೀಡಲಿದ್ದೇವೆ.

ಗ್ರೇಟ್ ಹಾರ್ನ್ಡ್‌ ಓವಲ್: ಸೌತ್ ಅಮೆರಿಕಾದಲ್ಲಿ ಈ ಗೂಬೆ ಹೆಚ್ಚಾಗಿ ಕಂಡು ಬರುತ್ತದೆ. ಹಳದಿ ಕಣ್ಣುಗಳುಳ್ಳ ಈ ಗೂಬೆ, ರಾತ್ರಿ ಸಮಯದಲ್ಲಿ ಬೇಟೆಗಿಳಿಯುತ್ತದೆ.

ಸ್ಟ್ರಾ ಟೇಲ್ಡ್ ಫ್ರೂಟ್ ಬ್ಯಾಟ್: ಬಾವಲಿಗೆ ರಾತ್ರಿ ಹೊತ್ತಷ್ಟೇ ಕಣ್ಣು ಕಾಣತ್ತೆ ಅನ್ನೋ ಸಂಗತಿ ಎಲ್ಲರಿಗೂ ಗೊತ್ತಿದೆ. ಹಾಗಾಗಿಯೇ ಇದು ರಾತ್ರಿ ಹೊತ್ತಿಗೆ ಬೇಟೆಯಾಡಿ, ತನ್ನ ಆಹಾರವನ್ನು ಸಂಗ್ರಹಿಸುತ್ತದೆ.

ಎಲಿಫೆಂಟ್ ಹಾವ್ಕ್ ಮೌತ್: ಈ ಕೀಟದ ಮುಖ, ಆನೆಯ ಸೊಂಡಿಲಿನ ಹಾಗಿರುತ್ತದೆ. ಹಾಗಾಗಿ ಇದನ್ನು ಎಲಿಫೆಂಟ್ ಹಾವ್ಕ್ ಮೌತ್ ಎಂದು ಕರೆಯಲಾಗುತ್ತದೆ. ಈ ಕೀಟದ ಬಣ್ಣ ಎಷ್ಟು ಸುಂದರವಾಗಿರುತ್ತದೆ ಎಂದರೆ, ದೇವರೇ ಇದಕ್ಕೆ ಚಿನ್ನದ ಮತ್ತು ತಿಳಿ ಗುಲಾಬಿ ಬಣ್ಣದ ಪೇಂಟ್‌ ಹಚ್ಚಿ ಕಳುಹಿಸಿದ್ದಾನೇನೋ ಎಂಬಂತಿರುತ್ತದೆ. ಈ ಚಂದದ ಕೀಟ ಕೂಡ ರಾತ್ರಿ ಹೊತ್ತು ಬೇಟೆಯಾಡುತ್ತದೆ.

ಡ್ರ್ಯಾಗನ್‌ ಫ್ಲೈ: ಈ ಕೀಟದ ಕಣ್ಣು ಶಾರ್ಪ್ ಆಗಿರುವ ಕಾರಣ, ಇದು ರಾತ್ರಿ ಹೊತ್ತು ಬೇಟೆಯಾಡುತ್ತದೆ. ಆದ್ರೆ ಈ ಕೀಟ ಎಲ್ಲೋ ಕುಳಿತು ಆಹಾರಕಕ್ಕಾಗಿ ಹೊಂಚು ಹಾಕುವುದಿಲ್ಲ. ಬದಲಾಗಿ ಇದು ಹಾರಾಡುತ್ತಲೇ, ಆಹಾರ ತಿನ್ನಬೇಕಾಗುತ್ತದೆ. ಇಲ್ಲವಾದಲ್ಲಿ ಇದು ಉಪವಾಸವಿರಬೇಕಾಗುತ್ತದೆ.

ಓಗರ್ ಸ್ಪೇಸ್‌ ಸ್ಪೈಡರ್: ಸೌತ್ ಅಮೆರಿಕಾದಲ್ಲಿ ಕಂಡು ಬರುವ ಈ ಸ್ಪೈಡರ್‌, ರಾತ್ರಿ ಹೊತ್ತು ಬೇಟೆಯಾಡುವ ಕೀಟವಾಗಿದೆ. ಇನ್ನೊಂದು ವಿಚಿತ್ರ ಅಂದ್ರೆ, ಈ ಕೀಟಕ್ಕೆ ಕಿವಿ ಇರುವುದಿಲ್ಲ. ಹಾಗಾಗಿ ಇದು ಕೇಳಲು ಕಾಲಿನ ಬಳಕೆ ಮಾಡುತ್ತದೆ. ಕಾಲಿನಿಂದ ಸದ್ದು ಕೇಳಿ, ಬೇಟೆಯಾಡುತ್ತದೆ.

ಮ್ಯಾಂಟಿಸ್ ಶ್ರಿಂಪ್: ಶ್ರಿಂಪ್ ಅಂದ್ರೆ ಸಮುದ್ರದಲ್ಲಿ ವಾಸಿಸುವ ಜೀವಿ ಅನ್ನೋ ದು ಎಲ್ಲರಿಗೂ ಗೊತ್ತು. ಮಾಂಸಪ್ರಿಯರು ಇದರ ಸೇವನೆಯನ್ನೂ ಮಾಡ್ತಾರೆ. ಆದ್ರೆ ಮ್ಯಾಂಟಿಸ್ ಶ್ರಿಂಪ್ ನೋಡಲು ಬುಲೆಟ್ ರೀತಿ ಇದ್ದು,  ಇದು ಬುಲೆಟ್‌ನ ಹಾಗೆ ಸ್ಪೀಡಾಗಿ ಬಂದು, ಬೇಟೆಯಾಡುತ್ತದೆ. ಇದರ ಶಕ್ತಿಯಿಂದ ಇದು, ಸಮುದ್ರದಲ್ಲಿ ಸಿಗುವ ಚಿಪ್ಪನ್ನ ಒಡೆಯಬಲ್ಲದು..

- Advertisement -

Latest Posts

Don't Miss