ಮನುಷ್ಯನಿಗೆ ಬೇರೆಯವರು ಒಳ್ಳೆಯವರಂತೆ, ಮತ್ತು ತಮ್ಮವರು ಕೆಟ್ಟವರಂತೆ ಕಾಣೋದೇಕೆ..?

ಮನೆ ಅಂದ ಮೇಲೆ ಅಲ್ಲಿ ಸುಖ, ದುಃಖ, ಜಗಳ, ಸಂಭ್ರಮ, ಎಲ್ಲವೂ ಇರುತ್ತದೆ. ಇದನ್ನೇ ಜೀವನ ಅನ್ನೋದು. ಆದ್ರೆ ಹಲವರ ಮನೆಯಲ್ಲಿ ಜನರಿಗೆ ತಮ್ಮ ಮನೆಯವರನ್ನ ಕಂಡ್ರೆ ಆಗಲ್ಲ. ಅದೇ ಪರಿಚಯಸ್ಥರು, ಅಕ್ಕ ಪಕ್ಕದ ಮನೆಯವರು, ಸ್ನೇಹಿತರ ಜೊತೆ, ಸಂಬಂಧಿಕರ ಜೊತೆ ಅವರು ತುಂಬಾ ಚೆನ್ನಾಗಿರ್ತಾರೆ. ಹಾಗಾದ್ರೆ ಮನುಷ್ಯನಿಗೆ ಬೇರೆಯವರು ಒಳ್ಳೆಯವರಂತೆ, ಮತ್ತು ತಮ್ಮವರು ಕೆಟ್ಟವರಂತೆ ಕಾಣೋದೇಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮಹಾಭಾರತ ಯುದ್ಧದ ವೇಳೆ ತನ್ನ ಸ್ನೇಹಿತರು ಸಂಬಂಧಿಕರನ್ನು ನೋಡಿ ಅರ್ಜುನ ಯುದ್ಧ ಮಾಡಲು ಇಷ್ಟವಿಲ್ಲವೆಂದು ಕೃಷ್ಣನಲ್ಲಿ ಹೇಳಿದ. ಕೌರವರಲ್ಲೂ ನನ್ನ ಸಂಬಂಧಿಕರಿದ್ದಾರೆ, ಹಾಗಾಗಿ ನಾವು ಅವರೊಂದಿಗೆ ಯುದ್ಧ ಮಾಡಲು ಇಚ್ಛಿಸುವುದಿಲ್ಲ. ಈ ಯುದ್ಧವೇ ವ್ಯರ್ಥವೆಂದು ಹೇಳಿದ. ಆಗ ಕೃಷ್ಣ ಅರ್ಜುನನಿಗೆ ಭಗವದ್ಗೀತೆಯ ಉಪದೇಶ ನೀಡಿದ್ದರು. ತದನಂತರವೇ ಅರ್ಜುನ ಯುದ್ಧ ಮಾಡಲು ಆರಂಭಿಸಿದ್ದು.

ಆದ್ರೆ ಇಂದಿನ ಕಾಲದಲ್ಲಿ ಜನರಿಗೆ ತಮ್ಮವರಿಗಿಂತ ಹೆಚ್ಚು, ಪರರು ಇಷ್ಠವಾಗ್ತಾರೆ. ಯಾಕಂದ್ರೆ ಮನೆಯಲ್ಲಿನ ಜನ, ನೀವು ಮಾಡುವ ತಪ್ಪುಗಳನ್ನ ತಿದ್ದಲು ನಿಮಗೆ ಬಯ್ಯುತ್ತಾರೆ. ಹಾಗಾಗಿ ನಿಮಗೆ ಅವರು ಇಷ್ಟವಾಗುವುದಿಲ್ಲ. ಆದ್ರೆ ಪರರು ನಿಮ್ಮ ಸುದ್ದಿಗೆ ಬರುವುದಿಲ್ಲ. ಬಂದರೂ, ಒಂದು ನಗು, ಒಂದೆರಡು ಚೆಂದದ ಮಾತುಗಳನ್ನಾಡಿ ಹೋಗುತ್ತಾರೆ. ಹಾಗಾಗಿ ನಿಮಗೆ ಮನೆಯವರಿಗಿಂತ, ಹೊರಗಿನವರೇ ಹೆಚ್ಚು ಎನ್ನಿಸುತ್ತಾರೆ.

ಆದ್ರೆ ಅವರೆಂದೂ ನಿಮ್ಮನ್ನು ಮನಸ್ಸಾರೆ ಪ್ರೀತಿಸಿರುವುದಿಲ್ಲ. ನಿಮ್ಮ ಒಳಿತನ್ನೇ ಬಯಸಿರುವುದಿಲ್ಲ. ನಿಮ್ಮ ಕಾಳಜಿಯನ್ನ ಮಾಡುವುದಿಲ್ಲ. ಬದಲಾಗಿ ಒಂದು ನಗು, ಒಳ್ಳೆ ಮಾತಾಡಿರುತ್ತಾರಷ್ಟೇ. ಅದಕ್ಕೆ ನಿಮಗವರು ಇಷ್ಟವಾಗೋದು. ನಿಮಗೆ ಆರೋಗ್ಯ ಹಾಳಾದಾಗ, ಅವರು ಫ್ರಿಯಾಗಿ ನಿಮಗೆ ಗುಳಿಗೆ ಕೊಡಿಸುತ್ತಾರಾ..? ನಿಮಗೆ ಹಸಿವಾದಾಗೆಲ್ಲ ಅವರು ಬಿಟ್ಟಿ ಊಟಾ ಕೊಡ್ತಾರಾ..? ಇಲ್ಲಾ.. ಈ ಎಲ್ಲ ವಿಷಯಗಳನ್ನ ನಾವು ಗಮನವಿಟ್ಟು ನೋಡಿದಾಗಲಷ್ಟೇ ನಮಗೆ ನಮ್ಮವರ್ಯಾರು, ಪರರ್ಯಾರು ಅನ್ನೋದು ಗೊತ್ತಾಗುತ್ತದೆ.

ನಿಮ್ಮ ಮನೆಯವರು ನಿಮಗೆ ಹೆಚ್ಚು ಇಷ್ಟವಾಗದಿರಲು ಮುಖ್ಯವಾದ ಕಾರಣ ಅಂದ್ರೆ, ಅವರು ನಿಮಗೆ ಬುದ್ಧಿ ಹೇಳುತ್ತಾರೆ. ನೀವು ತಪ್ಪು ಮಾಡಿದಾಗ, ಅದನ್ನು ತಿದ್ದಿ ಸರಿಮಾಡಿಕೊಂಡು, ನೀವು ಉತ್ತಮ ಜೀವನ ನಡೆಸಲಿ ಎಂದು ನಿಮಗೆ ಬೈಯ್ಯುತ್ತಾರೆ. ನಮ್ಮ ತಪ್ಪನ್ನು ಯಾರಾದರೂ ಹೇಳಿದರೆ, ನಮಗೆ ಕೋಪ ಬರೋದು ಸಹಜ. ಹಾಗಂತ ನಮ್ಮವರು ಕೆಟ್ಟವರು ಅಂತಲ್ಲ. ಹಾಗಾಗಿ ಅವರ ಮಾತನ್ನು ಕೇಳಿ, ನಮ್ಮ ತಪ್ಪನ್ನು ನಾವು ತಿದ್ದಿಕೊಳ್ಳಬೇಕು. ಯಾಕಂದ್ರೆ ನಮ್ಮ ತಪ್ಪನ್ನು ನಮ್ಮ ಬಳಿಯೇ ಹೇಳುವವರು, ಹಿತೈಷಿಗಳು. ಮತ್ತು ತಪ್ಪು ಮಾಡಿದ್ದನ್ನ ಬೆಂಬಲಿಸುವರು ಹಿತಶತ್ರುಗಳು.

About The Author