ನಾವು ಉತ್ತಮ ಕಾರ್ಯ ಮಾಡಿದರೆ, ನಮಗೆ ಸ್ವರ್ಗ ಸೇರುತ್ತದೆ. ನಾವು ಹರ ಮತ್ತು ಹರಿಯ ನಾಮಸ್ಮರಣೆ ಮಾಡಿದರೆ, ನಮಗೆ ಸ್ವರ್ಗ ಸಿಗುತ್ತದೆ. ಹಾಗಾಗಿ ಯಾವುದೇ ಪಾಪದ ಕಾರ್ಯ ಮಾಡದೇ, ಒಳ್ಳೆಯ ರೀತಿಯಿಂದರಬೇಕು ಅಂತಾ ನಮ್ಮ ಹಿರಿಯರು ಹೇಳುತ್ತಾರೆ. ಇನ್ನು ಕೆಲವರು ನಾವು ಮಾಡುವ ಕೆಲಸದ ಮೇಲೆ ನಮಗೆ ಭೂಮಿಯ ಮೇಲೆ ಸ್ವರ್ಗ ನರಕ ಕಾಣಸಿಗುತ್ತದೆ ಎಂದು ನಂಬುತ್ತಾರೆ. ಆದ್ರೆ ಗರುಡ ಪುರಾಣದ ಪ್ರಕಾರ, ಕೆಲ ಉತ್ತಮ ಕೆಲಸಗಳನ್ನು ಮಾಡಿದ್ರೆ, ಸ್ವರ್ಗ ಪ್ರಾಪ್ತಿಯಾಗುತ್ತದೆ ಅಂತಾ ಹೇಳಲಾಗತ್ತೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಗರುಡ ಕೇಳಿದ ಪ್ರಶ್ನೆಗೆ ಶ್ರೀವಿಷ್ಣು ಕೊಟ್ಟ ಉತ್ತರವೇ ಗರುಡ ಪುರಾಣ. ಹೀಗೆ ಗರುಡ ಕೇಳುವ ಪ್ರಶ್ನೆಯಲ್ಲಿ, ಎಂಥ ಮನುಷ್ಯರಿಗೆ ಸ್ವರ್ಗ ಮತ್ತು ನರಕ ಸಿಗುತ್ತದೆ ಎನ್ನುವ ಪ್ರಶ್ನೆ ಕೂಡ ಒಂದು. ಹೀಗೆ ಕೇಳಿದಾಗ, ಯಾವಾಗಲೂ ಬೇರೆಯವರಿಗೆ ಒಳ್ಳೆಯದನ್ನೇ ಬಯಸುವ, ಬಯಕೆ ಇಲ್ಲದೇ ಪೂರ್ಣ ಮನಸ್ಸಿನಿಂದ ದಾನ ಧರ್ಮ ಮಾಡುವ ಜನರಿಗೆ ಸ್ವರ್ಗ ಸಿಗುತ್ತದೆ. ಮತ್ತು ಬೇರೆಯವರಿಗೆ ಕೆಟ್ಟದ್ದನ್ನೇ ಬಯಸುವ, ದುಷ್ಕೃತ್ಯಗಳನ್ನೇ ಮಾಡುವ ವ್ಯಕ್ತಿಗೆ ನರಕ ಸಿಗುತ್ತದೆ ಎಂದು ವಿಷ್ಣು ಹೇಳುತ್ತಾನೆ.
ಅಲ್ಲದೇ, ಸಮಾಜ ಸೇವೆ, ಬಡವರಿಗೆ ಸಹಾಯ ಮಾಡುವ, ಕಷ್ಟದಲ್ಲಿರುವರನ್ನ ಕಾಪಾಡುವ, ಮತ್ತು ಈ ಕೆಲಸಗಳನ್ನು ಮಾಡಿ, ಎದುರಿನವರಿಂದ ಯಾವುದೇ ಮರು ಸಹಾಯದ ಬಯಕೆ ಇಲ್ಲದವರಿಗೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತದೆ. ಇನ್ನು ಬೇರೆಯವರ ವಸ್ತುವನ್ನು ನಾಶ ಮಾಡುವ, ಸುಮ್ಮ ಸುಮ್ಮನೆ ಬೇರೆಯವರ ಆಸ್ತಿಗೆ ಹಾನಿ ಮಾಡುವ, ಬೇರೆಯವರನ್ನು ಕಷ್ಟಕ್ಕೆ ತಳ್ಳುವ, ಸುಳ್ಳು ಹೇಳಿ ದುಡ್ಡು ಮಾಡುವ ಜನರಿಗೆ ನರಕವೇ ಗತಿ ಎನ್ನುತ್ತಾನೆ ಶ್ರೀ ವಿಷ್ಣು.
ಇಷ್ಟೇ ಅಲ್ಲದೇ, ಹೆಣ್ಣು ಮಕ್ಕಳಿಗೆ ಗೌರವ ನೀಡುವ, ವೃದ್ದರನ್ನ ಮತ್ತು ಮಕ್ಕಳನ್ನ ಪ್ರೀತಿಯಿಂದ, ಕಾಳಜಿಯಿಂದ ಕಾಣುವ, ಇವರೆಲ್ಲರನ್ನೂ ಭಾರವೆಂದು ಪರಿಗಣಿಸದೇ, ಒಳ್ಳೆಯ ರೀತಿಯಿಂದ ಕಾಣುವ ವ್ಯಕ್ತಿಗೆ ಎಂದಿಗೂ ಸ್ವರ್ಗ ಪ್ರಾಪ್ತಿಯಾಗುತ್ತದೆ. ಮತ್ತು ಇದಕ್ಕೆ ವಿರುದ್ಧವಾಗಿ, ಹೆಣ್ಣನ್ನು ಗೌರವಿಸದೇ, ಹಿರಿಯರಿಗೆ ಕಾಳಿಜಿಯಿಂದ ಕಾಣದೇ, ಮಕ್ಕಳನ್ನ ಪ್ರೀತಿ ಮಾಡದೇ, ಹಿಂಸಿಸುವ ಜನರಿಗೆ ನಕರ ಪ್ರಾಪ್ತಿಯಾಗುತ್ತದೆ ಎನ್ನುತ್ತಾನೆ ವಿಷ್ಣು.
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..




