ಕಳೆದ ಭಾಗದಲ್ಲಿ ನಾವು, ಯಾವ ಕೆಲಸ ಮಾಡಿದ್ರೆ, ಸ್ವರ್ಗ ಸಿಗುತ್ತದೆ ಮತ್ತು ಯಾವ ಕೆಲಸ ಮಾಡಿದ್ರೆ, ನರಕ ಸಿಗುತ್ತದೆ ಅನ್ನೋ ಬಗ್ಗೆ ಕೆಲ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ..
ಯಾವ ಮನುಷ್ಯ ಹುಟ್ಟಿದಾಗಿನಿಂದ ಮುಪ್ಪಿನವರೆಗೂ ಕಾದು, ಸಾವು ಬಂದ ಮೇಲೆ ಸಾಯುತ್ತಾನೋ, ಅವನು ಉತ್ತಮ ಕೆಲಸ ಮಾಡಿದ್ದರೆ, ಅವನಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಆದ್ರೆ ಯಾವ ಮನುಷ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ, ಅಥವಾ ಗೋ ಹತ್ಯೆ, ಬ್ರಹ್ಮ ಹತ್ಯೆ, ಸ್ತ್ರೀ ಹತ್ಯೆ, ಭ್ರೂಣ ಹತ್ಯೆ, ಅಥವಾ ಯಾವುದೇ ಮನುಷ್ಯನ ಹತ್ಯೆ ಮಾಡುತ್ತಾನೋ, ಅಂಥವನಿಗೆ ನರಕ ಪ್ರಾಪ್ತಿಯಾಗುತ್ತದೆ.
ಇಷ್ಟೇ ಅಲ್ಲದೇ, ವ್ಯಾಪಾರ ಮಾಡುವಾಗ, ಅಥವಾ ಯಾವುದೇ ಕೆಲಸ ಮಾಡುವಾಗ ದುಡ್ಡಿನ ಆಸೆಗೆ ಸುಳ್ಳು ಹೇಳುವುದು, ಮೋಸ ಮಾಡುವುದೆಲ್ಲ ಮಾಡಿ, ದುಡ್ಡು ಗಳಿಸಿ ಜೀವನ ಮಾಡಿದರೆ, ಅಂಥವರು ಕೂಡ ನರಕಕ್ಕೆ ಹೋಗುತ್ತಾರೆ. ಹಾಗಾಗಿ ನಿಯತ್ತಿನಿಂದ ಇರಬೇಕು. ನಿಮ್ಮ ದುಡಿಯಲ್ಲಿ ಸಣ್ಣ ಭಾಗವಾದರೂ, ದೀನನಿಗೆ ನೀಡಬೇಕು. ಅನ್ನ ದಾನ ಮಾಡಿ ಪುಣ್ಯ ಪ್ರಾಪ್ತಿ ಮಾಡಬೇಕು ಅಂತಾ ಹೇಳೋದು.
ಇನ್ನು ಯಾರು ಗುರು ಹಿರಿಯರನ್ನು ಗೌರವಿಸುತ್ತಾರೋ. ಅಪ್ಪ ಅಮ್ಮನಿಗೆ ಗೌರವಿಸುತ್ತಾರೋ. ಧರ್ಮವನ್ನು ಅನುಕರಣೆ ಮಾಡುತ್ತಾರೋ. ಸಾಧು ಸಂತರಿಗೆ, ಧರ್ಮ ಗುರುಗಳಿಗೆ ಗೌರವಿಸುತ್ತಾರೋ. ಅಂಥವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಮತ್ತು ಯಾವು ಧರ್ಮವನ್ನು ದ್ವೇಷಿಸುತ್ತಾರೋ, ಅದರ ಪಾಲನೆ ಮಾಡುವುದಿಲ್ಲವೋ. ಗುರು ಹಿರಿಯರಿಗೆ ಗೌರವಿಸದೇ, ಅಂಹಕಾರದಿಂದಿರುತ್ತಾರೋ, ಅಂಥವರಿಗೆ ನರಕ ಪ್ರಾಪ್ತಿಯಾಗುತ್ತದೆ ಅಂತಾ ಶ್ರೀ ವಿಷ್ಣು, ಗರುಡನಿಗೆ ಹೇಳುತ್ತಾನೆ.
ಹಾಗಾಗಿಯೇ, ಎಲ್ಲರನ್ನೂ ಪ್ರೀತಿ, ಗೌರವ, ಕಾಳಜಿಯಿಂದ ಕಾಣಬೇಕು. ಆದಷ್ಟು ದೇವರಲ್ಲಿ ಭಕ್ತಿ ಮಾಡಬೇಕು. ಹೆಣ್ಣು ಮಕ್ಕಳಿಗೆ ಹಿಂಸೆ ನೀಡಬಾರದು. ಅವರಿಗೆ ಕಣ್ಣೀರು ಹಾಕಿಸಬಾರದು. ಮೋಸ ಮಾಡದೇ, ನಿಯತ್ತಿನಿಂದ ಜೀವಿಸಬೇಕು ಅಂತಾ ಹಿರಿಯರು ಹೇಳಿದ್ದು.