Wednesday, October 15, 2025

Latest Posts

ಗಂಗಾ ಸ್ನಾನ ಮಾಡಿದ್ರೆ ಪುಣ್ಯ ಸಿಗುತ್ತಾ..? ನಿಜಕ್ಕೂ ಗಂಗಾ ಸ್ನಾನ ಎಂದರೇನು..?- ಭಾಗ 2

- Advertisement -

ಈ ಹಿಂದೆ ನಾವು ಶಿವ ಮತ್ತು ಪಾರ್ವತಿ ವೃದ್ಧರ ರೂಪ ತಾಳಿ ಗಂಗಾ ತೀರದಲ್ಲಿ ಓಡಾಡುತ್ತಿರುವ ತನಕ ಗಂಗಾ ಸ್ನಾನದ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇದಾದ ಬಳಿಕ ಏನಾಯಿತು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಅಲ್ಲಿ ಒಂದು ಕೆಸರಿನ ಗುಂಡಿ ಇರುತ್ತದೆ. ಶಿವ ಆ ಗುಂಡಿಯಲ್ಲಿ ಬೀಳುತ್ತಾನೆ. ಮತ್ತು ಪಾರ್ವತಿ ತನ್ನ ಪತಿಯನ್ನು ರಕ್ಷಿಸಲು ಯಾರಾದರೂ ಬರುವಿರಾ ಎಂದು ಕರೆಯುತ್ತಾಳೆ. ಆಗ ತುಂಬ ಶಿವನನ್ನು ಆ ಗುಂಡಿಯಿಂದ ಹೊರ ತೆಗೆಯಲು ಬರುತ್ತಾರೆ. ಆದರೆ ಅದಕ್ಕೂ ಮುನ್ನ ಪಾರ್ವತಿ, ನನ್ನ ಪತಿಯನ್ನು ಗುಂಡಿಯಿಂದ ಹೊರತೆಗೆಯಲು ಹೋಗುವ ಮುನ್ನ, ನೀವು ಯಾವುದೇ ಪಾಪ ಮಾಡಿಲ್ಲವಲ್ಲವೆಂದು ಯೋಚಿಸಿಕೊಳ್ಳಿ. ಯಾಕಂದ್ರೆ ನೀವೇನಾದರೂ ಪಾಪ ಮಾಡಿ, ನನ್ನ ಪತಿಯ ಮೈ ಮುಟ್ಟಿದರೆ, ಸುಟ್ಟು ಭಸ್ಮವಾಗುತ್ತೀರಾ ಎಂದು ಹೇಳುತ್ತಾಳೆ.

ಇದನ್ನು ಕೇಳಿದ ಜನ ಅಲ್ಲಿಂದ ಹೊರಟು ಹೋಗುತ್ತಾರೆ. ವಿಚಿತ್ರ ಅಂದ್ರೆ ಅವರೆಲ್ಲ ಆಗಷ್ಟೇ ಗಂಗಾ ಸ್ನಾನ ಮಾಡಿ, ಹೊರಬಂದವರು. ಆದರೂ ಕೂಡ ಪಾಪ ಮಾಡಿರುವ ಮಾತು ಕೇಳಿ, ಜೀವ ಭಯದಿಂದ ಅವರೆಲ್ಲ ವೃದ್ಧನಿಗೆ ಸಹಾಯ ಮಾಡದೇ ಹೋಗುತ್ತಾರೆ. ಆಗ ಓರ್ವ ಬಂದು, ವೃದ್ಧನನ್ನು ಗುಂಡಿಯಿಂದ ಎತ್ತಲು ಹೋಗುತ್ತಾನೆ. ಆಗ ಪಾರ್ವತಿ, ಮತ್ತೆ ಅದೇ ಮಾತು ಹೇಳುತ್ತಾಳೆ.

ಆಗ ಆ ಯುವಕ, ಅರೇ ಇದೇನು ಹೇಳುತ್ತಿದ್ದೀರಿ. ನಾನು ಈಗಷ್ಟೇ ಗಂಗಾ ಸ್ನಾನ ಮಾಡಿ ಬರುತ್ತಿದ್ದೇನೆ. ಮತ್ತು ಗಂಗೆಯಲ್ಲಿ ಸ್ನಾನ ಮಾಡುವುದೇ ನಮ್ಮ ಪಾಪ ಪರಿಹಾರಕ್ಕಲ್ಲವೇ..? ಹಾಗಾಗಿ ನಾನು ಧೈರ್ಯದಿಂದ ಇವರನ್ನು ಗುಂಡಿಯಿಂದ ಎತ್ತ ಬಲ್ಲೆ ಎಂದು ಹೇಳಿ, ವೃದ್ಧನನ್ನು ಮೇಲಕ್ಕೆತ್ತುತ್ತಾನೆ. ಹೀಗೆ ಸಹಾಯ ಮಾಡಿದ್ದಕ್ಕಾಗಿ, ವೃದ್ಧ ವೇಷದಲ್ಲಿದ್ದ ಶಿವ- ಪಾರ್ವತಿ, ಯುವಕನಿಗೆ ಆಶೀರ್ವದಿಸಿ ಕಳುಹಿಸುತ್ತಾರೆ.

ಇದಾದ ಬಳಿಕ ಶಿವ ಪಾರ್ವತಿಯಲ್ಲಿ ಹೇಳುತ್ತಾನೆ, ನೋಡಿದೆಯಾ ಪ್ರಿಯೆ. ಈ ಯುವಕ ನಿಜವಾಗಿಯೂ ಗಂಗಾ ಸ್ನಾನವನ್ನೇ ಮಾಡಿದ್ದ. ಇವನ ಮನಸ್ಸಿನಲ್ಲಿ ದೇವರ ಬಗ್ಗೆ ನಿಜವಾದ ಭಕ್ತಿ ಮತ್ತು ನಂಬಿಕೆ ಇತ್ತು. ಹಾಗಾಗಿ ಅವನು ಧೈರ್ಯದಿಂದ ನನ್ನನ್ನು ಉಳಿಸಲು ಬಂದ. ಆದ್ರೆ ಉಳಿದವರೆಲ್ಲ ಗಂಗೆಯಲ್ಲಿ ಮಿಂದು ಬರೀ ಅವರ ಮೈಕೊಳೆ ತೊಳೆದುಕೊಂಡಿದ್ದರು. ಹಾಗಾಗಿ ಅವರಿಗೆ ಹೆದರಿಕೆಯಾಯಿತು ಎಂದು. ಇದರ ಅರ್ಥವೆನೆಂದರೆ, ನಾವು ಯಾವುದೇ ಕೆಲಸ ಮಾಡುವ ಮುನ್ನ ನಮ್ಮ ಮನದಲ್ಲಿ ಆ ಬಗ್ಗೆ ನಂಬಿಕೆ ಇರಬೇಕು. ಆಗಲೇ ಆ ಕೆಲಸಕ್ಕೊಂದು ಅರ್ಥ ಸಿಗುವುದು.

- Advertisement -

Latest Posts

Don't Miss